ಬಳಗಟ್ಟೆ ಹೆಲ್ತ್‌ ಸೆಂಟರ್‌ ಶುಭಾರಂಭ

ಗಣ್ಯರಿಂದ ಉದ್ಘಾಟನೆಗೆ ಕ್ಷಣಗಣನೆ

ತೀರ್ಥಹಳ್ಳಿ ಪಟ್ಟಣದ ಕೊಪ್ಪ ರಸ್ತೆಯಲ್ಲಿ ಕಳೆದ 22 ವರ್ಷಗಳಿಂದ ಲಕ್ಷಾಂತರ ಜನರಿಗೆ ಔಷಧಗಳನ್ನು ಪೂರೈಸುವ ಜೊತೆಗೆ ಸಾವಿರಾರು ನೊಂದ ಜನರಿಗೆ ನೆರವು ನೀಡುತ್ತಿದ್ದ ಬಳಗಟ್ಟೆ ಗಿರೀಶ್‌ ಮಾಲಿಕತ್ವದ ಬಳಗಟ್ಟೆ ಮೆಡಿಕಲ್ಸ್‌ ಇದೀಗ ನೂತನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.

ಎಲ್ಲಾ ಆರೋಗ್ಯ ಸೇವೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ದಿಕ್ಕಿನಲ್ಲಿ ಸಂಸ್ಥೆ ಪಾದಾರ್ಪಣೆ ಮಾಡುತ್ತಿದ್ದು ಇದೀಗ “ಬಳಗಟ್ಟೆ ಹೆಲ್ತ್‌ ಸೆಂಟರ್”‌ ಕಟ್ಟಡ ಸಂಕೀರ್ಣ ಶುಭಾರಂಭಗೊಳ್ಳಲಿದೆ. ಇದರೊಳಗೆ ಬಳಗಟ್ಟೆ ಮೆಡಿಕಲ್ಸ್‌, ಬಳಗಟ್ಟೆ ಕ್ಲಿನಿಕ್‌, ಬಳಗಟ್ಟೆ ಕ್ಲಿನಿಕಲ್‌ ಲ್ಯಬೋರೇಟರಿ ಹಾಗೂ ಮಡೋನ್ನ ಒಪ್ಟಿಕಲ್ಸ್‌ ಉದ್ಯಮ ಪ್ರಾರಂಭಗೊಳ್ಳಲಿದೆ.

ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ನಿರ್ವಹಿಸಿದ್ದ ಬಳಗಟ್ಟೆ ಗಿರೀಶ್‌ ಸಾಮಾಜಿಕ ಸೇವೆಯ ಮೂಲಕ ಜನಪ್ರೀಯತೆ ಪಡೆದಿದ್ದಾರೆ. ತೀರ್ಥಹಳ್ಳಿಯ ಜನರಿಗಾಗಿ ಸಾವಿರಾರು ದಾನಿಗಳ ಮೂಲಕ ರಕ್ತವನ್ನು ಅವಶ್ಯಕತೆ ಇದ್ದವರಿಗೆ ತಲುಪಿಸುವ ಮಹತ್ವದ ಜವಾಬ್ದಾರಿ ವಹಿಸಿದ ಮೊದಲಿಗ. ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ನೂರಾರು ಶಿಬಿರಗಳನ್ನು ನಡೆಸುವ ಜೊತೆಗೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ನೆರವಾಗಿದ್ದಾರೆ. ತೀರ್ಥಹಳ್ಳಿ ಪಟ್ಟಣದಲ್ಲಿ ರೋಟರಿ ರಕ್ತನಿಧಿ ಆರಂಭಿಸಿದ ಸದಸ್ಯರುಗಳಲ್ಲಿ ಬಳಗಟ್ಟೆ ಗಿರೀಶ್‌ ಕೂಡ ಒಬ್ಬರು. ಇಂದಿಗೂ ಕೂಡ ತನ್ನ ಸಾಮಾಜಿಕ ಸೇವೆಯ ಜೊತೆಗೆ ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡಿದ್ದಾರೆ. ಇದಕ್ಕೆ ಸಂಪೂರ್ಣ ಬೆಂಬಲವಾಗಿ ಸಹೋದರ ಬಳಗಟ್ಟೆ ಹರೀಶ್‌ ಕೂಡ ನಿಂತಿದ್ದು ಇಬ್ಬರ ಜೋಡಿ ಗ್ರಾಹಕರ ಅವಶ್ಯಕತೆಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಬಳಗಟ್ಟೆ ಗ್ರೀನ್ಸ್‌ ನೇಚರ್‌ ಸ್ಟೇ ಮೂಲಕವು ಹೆಸರು ಪಡೆದಿದ್ದಾರೆ.

ಗೃಹಸಚಿವ ಆರಗ ಜ್ಞಾನೇಂದ್ರ ಬಳಗಟ್ಟೆ ಮೆಡಿಕಲ್ಸ್‌ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ ಸ್ವಾಗತ ಕೊಠಡಿ ಉದ್ಘಾಟಿಸಲಿದ್ದಾರೆ. ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಬಳಗಟ್ಟೆ ಕ್ಲಿನಿಕ್‌ ಉದ್ಘಾಟಿಸಲಿದ್ದಾರೆ. ಬೆಂಗಳೂರು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ|| ಭಗವಾನ್‌ ಬಿ.ಸಿ. ಬಳಗಟ್ಟೆ ಕ್ಲಿನಿಕಲ್‌ ಲ್ಯಾಬೋರೇಟರಿ ಉದ್ಘಾಟಿಸಲಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ ಮಡೊನ್ನ ಒಪ್ಟಿಕಲ್ಸ್‌ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಸರ್ವರನ್ನು ಬಳಗಟ್ಟೆ ಕ್ಲಿನಿಕ್‌ ಮೂಳೆ ತಜ್ಞ ಡಾ. ಭರತ್‌ ಎಂ.ಸಿ., ಶ್ವಾಸಕೋಶ ತಜ್ಞ ಡಾ. ದಿವ್ಯ ಬಾಲನ್‌ ಶಿವಮೊಗ್ಗ, ಚರ್ಮ ಮತ್ತು ಸಂದರ್ಯ ಚಿಕಿತ್ಸಾ ತಜ್ಞ ಡಾ. ಹೀಬಾ ಶಿವಮೊಗ್ಗ ಹಾಗೂ ಬಳಗಟ್ಟೆ ಗಿರೀಶ್‌, ಕೆ.ಎಸ್. ಚಿಂತುಕುಮಾರ್‌, ಚಿತ್ರಾ, ಭರತ್‌, ಬಳಗಟ್ಟೆ ಕ್ಲಿನಿಕ್‌ ಲ್ಯಾಬೋರೇಟರಿ ಪ್ರವೀಣ್‌ ನಾಯ್ಕ ಸಿ, ಮಡೊನ್ನ ಒಪ್ಟಿಕಲ್ಸ್‌ ಜೀಲ್ಸ್‌ನ್‌ ಜೋಸಫ್‌ ಮತ್ತು ಸಿಬ್ಬಂದಿ ವರ್ಗ ಕೋರಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post