ಗೃಹಸಚಿವರ ಸ್ವ-ಕ್ಷೇತ್ರದಲ್ಲಿ ಮತ ಬಹಿಷ್ಕಾರ

ಇದೇನ್ರಿ ಗೃಹಸಚಿವವರೇ ನಿಮ್ಮ ಕ್ಷೇತ್ರದಲ್ಲಿ ಹಿಂಗ್ಯಾಕಾಯ್ತು…!
ಫೋಟೋ ಸಹಿತ ಬಹಿರಂಗ ನಿರ್ಧಾರ ಪ್ರಕಟ

ಗೃಹಸಚಿವ ಆರಗ ಜ್ಞಾನೇಂದ್ರರ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಮತ ಬಹಿಷ್ಕಾರ ಹಾಕಿರುವುದು ಸಚಿವರಿಗೆ ರಾಜಕೀಯ ಬಿಸಿ ಮುಟ್ಟಿದಂತಿದೆ. ಬಹು ಮುಖ್ಯವಾಗಿ ಹಾಲಿ ಬಿಜೆಪಿ ಆಡಳಿತ ಹೊಂದಿರುವ ಮೇಗರವಳ್ಳಿ ಗ್ರಾಮ ಪಂಚಾಯಿತಿಯ ಕೆಳಗಿನ ಅಣ್ಣುವಳ್ಳಿಯ ಸುಮಾರು 30ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 200ಕ್ಕೂ ಹೆಚ್ಚು ಜನರು ಮತ ಬಹಿಷ್ಕಾರ ನಿರ್ಧಾರ ಪ್ರಕಟಿಸಿದ್ದಾರೆ.
ಒಂದೂವರೆ ದಶಕಕ್ಕೂ ಹೆಚ್ಚು ಅವಧಿಯ ಹಿಂದೆ ಕಳಪೆ ಕಾಮಗಾರಿಯಿಂದ ಕೊಚ್ಚಿಹೋದ ಕಾಲು ಸೇತುವೆಗೆ ಇಂದಿಗೂ ಪರ್ಯಾಯ ವ್ಯವಸ್ಥೆ ಆಗಿಲ್ಲ. ಕ್ಷೇತ್ರದ ಅಭಿವೃದ್ಧಿಗೆ 3500 ಸಾವಿರ ಕೋಟಿ ರೂಪಾಯಿ ಅನುದಾನ ತಂದಿದ್ದರು ಗ್ರಾಮೀಣ ಪ್ರದೇಶಕ್ಕೆ ಮೀಸಲಿಟ್ಟಿಲ್ಲ. ಮೇಗರವಳ್ಳಿ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದರು ದುರಸ್ಥಿಗೊಂಡಿಲ್ಲ. ಆಸ್ಪತ್ರೆ, ಶಾಲಾ ಸಂಪರ್ಕ ಕಷ್ಟವಾಗಿದ್ದರು ಜನಪ್ರತಿನಿಧಿಗಳಿಗೆ ಕೇಳಿಸುತ್ತಿಲ್ಲ. ಇದರಿಂದ ನಾವು ಮತದಾನ ಮಾಡುವುದಿಲ್ಲ. ನೀವು ಮತ ಕೇಳಲು ಬರಬೇಡಿ. ಯಾವುದೇ ರಾಜಿ ಸಂಧಾನ ಮನವೊಲಿಸುವ ಅವಕಾಶ ಇರುವುದಿಲ್ಲ ಎಂದು ಎಚ್ಚರಿಕೆ ಸಂದೇಶವನ್ನು ಫೋಟೋ ಸಮೇತ ಭಿತ್ತರಿಸಿದ್ದಾರೆ.
ಪ್ರತೀ ವರ್ಷದ ಮಲೆನಾಡ ಮಳೆಯಲ್ಲಿ ಈ ಅಣ್ಣುವಳ್ಳಿ ಜನರು ಬಹಳ ಕಷ್ಟದಿಂದ ಮನೆ ಸೇರಬೇಕು. ಜೀವ ಭಯದ ಜೊತೆಗೆ ತಮ್ಮವರನ್ನು ಕಾಪಾಡುವ ಸವಾಲು ಕೂಡ ಎದುರಿಸುತ್ತಿದ್ದಾರೆ. ನಿರಂತರವಾಗಿ ರಸ್ತೆ ದುರಸ್ಥಿಗೆ ಪತ್ರಗಳ ಮೇಲೆ ದೂರು ಪತ್ರ ಪ್ರಕಟಿಸುತ್ತಿದ್ದರು ಯಾವೊಬ್ಬ ಅಧಿಕಾರಿಯೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಚುನಾವಣೆಯ ಸಂದರ್ಭ ಮತ ಕೇಳಲಷ್ಟೇ ಜನಪ್ರತಿನಿಧಿಗಳು ಸೀಮಿತರಾಗಿದ್ದಾರೆ. ಸಂಕದ ವ್ಯವಸ್ಥೆಗೂ ನೂರಾರು ವಿಜ್ಞಗಳಿದ್ದರು ಬಗೆಹರಿಸುವ ಗ್ರಾಮ ಪಂಚಾಯಿತಿ ಆಡಳಿತ ಮೌನ ವಹಿಸಿರುವುದು ಇನ್ನಷ್ಟು ರೊಚ್ಚಿಗೇಳುವಂತೆ ಮಾಡಿದೆ.
ಕೆಳಗಿನ ಅಣ್ಣುವಳ್ಳಿಗೆ ಸಂಪರ್ಕ ಕಲ್ಪಿಸುವ ದಾರಿ ಮತ್ತು ಕಾಲು ಸೇತುವೆ ಕಳೆದ 5 ವರ್ಷಗಳಿಂದ ಬಂದ್ ಮಾಡಲಾಗಿದೆ. ಪ್ರಸ್ತುತ 3 ರಿಂದ 4 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿ ಮೇಗರವಳ್ಳಿ ತಲುಪಬೇಕಿದೆ. ಶಾಲಾ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ಅನಾರೋಗ್ಯ ಪೀಡಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ 10 ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ರಸ್ತೆಯನ್ನೂ ಸಹ ಇಲ್ಲಿಯವರೆಗೆ ದುರಸ್ಥಿಪಡಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post