ಹಾಡು, ಯಕ್ಷಗಾನ, ಹುಲಿವೇಷ, ನಾಟಕ ಎಲ್ಲದರಲ್ಲೂ ಸೈ ಎನಿಸಿಕೊಂಡ ಹಳ್ಳಿ ಮಕ್ಕಳು
ತೀರ್ಥಹಳ್ಳಿಯ ಕ್ರಿಯಾಶೀಲ ಸರ್ಕಾರಿ ಪ್ರಾಥಮಿಕ
ಶಾಲೆಗಳಲ್ಲಿ ಒಂದಾದ ಮೇಗರವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ವರ್ಷ ರಂಜಿತವಾಗಿ
ನಡೆದು ನೋಡುಗರ ಮೆಚ್ಚುಗೆ ಪಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪ್ರತಿಮಾ ಪುಟ್ಟಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಅಧ್ಯಾಪಕವೃಂದ ನೈಜ ಕಾಳಜಿ ಹೊಂದಿದ್ದಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವ ಕಾರ್ಯಕ್ರಮ ಹಾಗೂ ಫಲಿತಾಂಶವನ್ನು ನೀಡಬಹುದು ಎಂಬುದಕ್ಕೆ ಮೇಗರವಳ್ಳಿ ಸರ್ಕಾರಿ ಶಾಲೆ ಉತ್ತಮ ಉದಾಹರಣೆ ಎಂದರು.
ಎಸ್‌ಡಿಎಂಸಿಯ ಅಧ್ಯಕ್ಷ ಮಹೇಶ್ ಕಾರ್ಯಕ್ರಮಕ್ಕೆ ಸಹಕರಿಸಿದ ಶಾಲಾ
ಬಳಗವನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಪೋಷಕರನ್ನು ಸಾರ್ವಜನಿಕರನ್ನು ಧಾನಿಗಳನ್ನು
ಜನಪ್ರತಿನಿಧಿಗಳನ್ನು ವಿಶೇಷವಾಗಿ ಲಲಿತಮ್ಮ ಚಾರಿಟೇಬಲ್ ಟ್ರಸ್ಟ್‌ನ ಪ್ರೋತ್ಸಾಹವನ್ನು
ಸ್ಮರಿಸಿ ಅಭಿನಂದಿಸಿದರು,
ಮುಖ್ಯ ಅಧ್ಯಾಪಕಿ ಪೂರ್ಣಿಮಾ ಮತ್ತು ಶಿಕ್ಷಕರು, ಸಹಶಿಕ್ಷರು ವಿಶೇಷ ಪರಿಶ್ರಮ
ವಹಿಸಿ ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿದ ಕಾರಣ ಸೊಗಸಾದ ರೀತಿಯಲ್ಲಿ ನೃತ್ಯ ನಾಟಕ, ಹಾಡು, ಮಿಮಿಕ್ರಿ, ಯಕ್ಷಗಾನ, ಹುಲಿ ವೇಷ ಚೇತೋಹಾರಿಯಾಗಿ ಮೂಡಿಬಂದವು. ಇದಲ್ಲದೇ
ಕಿರು ನಾಟಕ ಚಲನಚಿತ್ರಗೀತೆ ಕೂಡ ಮನರಂಜಿಸಿದವು.
ಕಾರ್ಯಕ್ರಮದಲ್ಲಿ ಆಗುಂಬೆ ಹೋಬಳಿಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಪೂರ್ಣಿಮಾ ಅವರನ್ನು ಎಸ್‌ಡಿಎಂಸಿ ವತಿಯಿಂದ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಅಜಿತ್ ಅಣ್ಣುವಳ್ಳಿ, ದೇವೇಂದ್ರ, ನವೀನ್ ತೋಟದ ಮನೆ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಾಳೆಹಳ್ಳಿ
ಪ್ರಭಾಕರ್, ರಾಜ್ಯ ಕರವೇ
ಸಂಘಟಕ ಪಟೇಲ್ ವೆಂಕಟೇಶ್ ಹೆಗಡೆ,
ಲಲಿತಮ್ಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಜೇತ್ ಶೆಟ್ಟಿ,
ದಾನಿಗಳಾದ ಪ್ರಜ್ವಲ್ ಕೋಳಿಗೆ, ಎಸ್‌ಡಿಎಂಸಿ ಉಪಾಧ್ಯಕ್ಷ ರುಬಿನಾ ಟಿ.ಎ, ಮೇಗರವಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದಿವಾಕರ್ ಎಂ.ಎಸ್, ಗುಡ್ಡೇಕೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ
ಮಂಜುಬಾಬು ಹೆಚ್ ಪಿ, ನಾಲೂರು
ಶಾಲೆಯ ಜಯಂತಿ, ಸಿಆರ್‌ಪಿ
ನಾಗಾರಾಜ್ ಹಾಜರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಅನ್ನಪೂರ್ಣ, ಸ್ವಾಗತವನ್ನು ಪೂರ್ಣಿಮಾ ಪಟಗಾರ, ಪ್ರಸ್ತಾಪವನ್ನು ಮುಖ್ಯ ಶಿಕ್ಷಕಿ ಪೂರ್ಣಿಮಾ, ವಂದನಾರ್ಪಣೆ ಶಿಕ್ಷಕಿ ಸವಿತಾ ನೆರವೇರಿಸಿದರು.
.jpeg)


