ಸ್ಯಾಂಟ್ರೋ ರವಿ ಅರೆಸ್ಟ್

 ಸಿಕ್ಕಿತೇ ಕಿಮ್ಮನೆಗೆ ಹೊಸ ಅಸ್ತ್ರ 
 ಗುಜರಾತಿನಲ್ಲಿ ಗೃಹಸಚಿವ ಆರಗ ಮತ್ತು ಪಿಂಪ್ ಸ್ಯಾಂಟ್ರೋ ರವಿ 
 ಏನಿದರ ಗುಟ್ಟು, ದುಡ್ಡಿನ ಖರಾಮತ್ತು…? 

ರಾಜ್ಯದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿರುವ, ಅನೈತಿಕ ದಂಧೆ ಹಾಗೂ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿ ಅಲಿಯಾಸ್ ಕೆ.ಎಸ್. ಮಂಜುನಾಥ್‌ನನ್ನು ಪೊಲೀಸರು ಕೊನೆಗೂ ಶುಕ್ರವಾರ ಗುಜರಾತ್‌ನಲ್ಲಿ ಬಂಧಿಸಿದ್ದಾರೆ. ಕರ್ನಾಟಕದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಗೃಹಸಚಿವ ಆರಗ ಜ್ಞಾನೇಂದ್ರ ಗುಜರಾತ್‌ ರಾಜ್ಯಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಿ ಹಿಂದಿರುಗಿದ ಬೆನ್ನಲ್ಲೆ ಸ್ಯಾಂಟ್ರೋ ರವಿ ಕೂಡ ಗುಜರಾತ್‌ನಲ್ಲಿ  ಪೊಲೀಸರಿಗೆ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಗಾಗಿ ಬಲೆ ಬೀಸಿದ ಮೈಸೂರು ಪೊಲೀಸರು ಶನಿವಾರ ಗುಜರಾತ್ನಲ್ಲಿ ಬಂಧಿಸಿದ್ದಾರೆ. ಸ್ವಂತ ಫೋನನ್ನು ಬಳಸದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಸ್ಯಾಂಟ್ರೋ ರವಿಯ ಚಲನವಲನ ಪತ್ತೆ ಮಾಡಲು ಪೊಲೀಸರು ಸೈಬರ್‌ ತಾಂತ್ರಿಕ ನೆರವು ಪಡೆದುಕೊಂಡಿದ್ದು, ಅಂತಿಮವಾಗಿ ಗುಜರಾತ್‌ನಲ್ಲಿ ಇದ್ದಾನೆ ಎಂಬ ಸುಳಿವು ಸಿಕ್ಕ ಕೂಡಲೇ ಪೊಲೀಸರ ವಿಶೇಷ ತಂಡ ಆತನನ್ನು ಬಂಧನ ಮಾಡಿದೆ. ಗುಜರಾತ್‌ ಸ್ಥಳೀಯ ನ್ಯಾಯಾಲಯದಿಂದ ಸ್ಥಳಾಂತರ ವಾರಂಟ್‌ (Transit  Warrant)‌ ಲಭ್ಯವಾದ ನಂತರ ಆತನನ್ನು ರಾಜ್ಯಕ್ಕೆ ಕರೆತರಲಾಗುತ್ತದೆ.

ಕಳೆದ ವರ್ಷ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೋ ರವಿ ಆಲಿಯಾಸ್ ಕೆ.ಎಸ್ ಮಂಜುನಾಥ್ ವಿರುದ್ಧ ದೂರು ದಾಖಲಾಗಿದ್ದ ಸಂದರ್ಭದಲ್ಲಿ ಆತ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿರುವುದಾಗಿ ಮತ್ತು ತಾನು ವರ್ಗಾವಣೆ ಮಾಡಿಸಿಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಅಲ್ಲದೆ ಸಿಎಂ ಮಗನ ಜೊತೆಗಿನ ಸ್ಯಾಂಟ್ರೋ ರವಿ ನಡೆಸಿರುವ ವಾಟ್ಸಾಪ್ ಸಂದೇಶ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೈಸೂರಿನಲ್ಲಿ ಸ್ಯಾಂಟ್ರೊ ರವಿ ಹೆಂಡತಿ ನೀಡಿರುವ ಪ್ರಕರಣ ಆಧರಿಸಿ ಬಂಧಿಸಲಾಗಿದೆ. 2019ರಲ್ಲಿ ಜಾಹೀರಾತು ಆಧರಿಸಿ ಸ್ಯಾಂಟ್ರೋ ರವಿ ನಡೆಸಿದ ಇಂಟರ್‌ವ್ಯೂ ಮಧ್ಯೆ ಆಕೆಗೆ ಡ್ರಗ್ಸ್‌ ನೀಡಿ ಬಲಾತ್ಕಾರ ಮಾಡಿದ್ದ. ನಂತರ ಒತ್ತಾಯ ಪೂರ್ವಕವಾಗಿ ಆಕೆಯನ್ನು ಮದುವೆಯಾಗಿದ್ದ. ಸ್ಯಾಂಟ್ರೋ ರವಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಆಕೆಯ ಮೇಲೆ 2022ರಲ್ಲಿ ಸುಳ್ಳು ಡರೋಡೆ ಪ್ರಕರಣವನ್ನು ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ಬಂಧನಕ್ಕೆ ಕಾರಣವಾಗಿದ್ದ. ಆಂತರಿಕ ತನಿಖೆಯಲ್ಲಿ ನಡೆಸಿದ ನಂತರ ಅಂದಿನ ಠಾಣಾಧಿಕಾರಿ ಪ್ರವೀಣ್‌ ಕೆ.ವಿ ಅವರನ್ನು ಅಮಾನತ್ತು ಮಾಡಲಾಗಿತ್ತು.

ಸಿಕ್ಕಿತೇ ಕಿಮ್ಮನೆಗೆ ಹೊಸ ಅಸ್ತ್ರ…?


ಕರ್ನಾಟಕ ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾನಿಲಯ (forensic sience University in Karnataka) ಸ್ಥಾಪಿಸಲು ಚಿಂತನೆ ನಡೆಸಿದ್ದು ಅದರ ಪೂರ್ಣ ಕೆಲಸ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ಅದಕ್ಕಾಗಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಗುಜರಾತ್ (National Forensic Science University in Gujarat) ರಾಜ್ಯದಲ್ಲಿ ಅಂತಹದ್ದೇ ಪರ್ಯಾಯ ಸಂಸ್ಥೆ ಆರಂಭಕ್ಕೆ ಸಹಕಾರವಾಗಿ ನಿಂತಿದೆ. ಈ ಹಿನ್ನಲೆಯಲ್ಲಿ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಗೃಹಸಚಿವರನ್ನು ರಾಜ್ಯಕ್ಕೆ ಆಹ್ವಾನಿಸಿದ್ದರು.

ಆದರೆ ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಮಾನವ ಕಳ್ಳತನ ಆರೋಪ ಹೊತ್ತಿರುವ ನಟೋರಿಯಸ್ ಪಿಂಪ್‌ ಗೃಹಸಚಿವರ ಬೆನ್ನುಹತ್ತಿ ಗುಜರಾತ್‌ಗೆ ತೆರಳಿದ್ದಾನೆ ಎನ್ನಲಾಗುತ್ತಿದ್ದು ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಬಂಧನಕ್ಕೊಳ್ಳಗಾಗಿರುವುದು ಇದನ್ನು ಪುಷ್ಟೀಕರಿಸಿದೆ. ಮೊದಲೇ ಇಕ್ಕಟ್ಟಿಗೆ ಸಿಲುಕಿರುವ ಗೃಹಸಚಿವ ಹಾಗೂ ರಾಜ್ಯ ಬೆಜೆಪಿ ಸರ್ಕಾರಕ್ಕೆ ಇನ್ನೊಂದು ರೀತಿಯ ಮುಜುಗರ ಸೃಷ್ಟಿಯಾದಂತಿದೆ. ಆರೋಪಿಯನ್ನು ರಾಜ್ಯಕ್ಕೆ ಕರೆತಂದ ನಂತರ ಇನ್ನಷ್ಟು ಮಾಹಿತಿ ಬಹಿರಂಗಗೊಳ್ಳಲಿದ್ದು ಸದ್ಯದ ಪರಿಸ್ಥಿತಿಯಲ್ಲಿ ಗೃಹಸಚಿವರು ಭಾರಿ ಇಕ್ಕಟ್ಟಿಗೆ ಸಿಲುಕಿದಂತಿದೆ.
ತೀರ್ಥಹಳ್ಳಿ ಕ್ಷೇತ್ರದಲ್ಲಿ ಈಗಾಗಲೇ ಸದ್ದು ಮಾಡುತ್ತಿರುವ ಉಗ್ರ ಚಟುವಟಿಕೆ ಬೆನ್ನಲೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಮನೆ ಮೇಲೆ ಇಡಿ ದಾಳಿ ಸುಳ್ಳು ಸುದ್ದಿ ಬಿರುಗಾಳಿಯಂತೆ ಅಪ್ಪಳಿಸಿದೆ. ಇಡಿದಾಳಿ ಸುದ್ದಿ ಹಿಂದೆ ಬಿಜೆಪಿ ಕೈವಾಡ ಇದೆ ಎನ್ನುತ್ತಿರುವ ಕಿಮ್ಮನೆ ಕೆರಳಿದ್ದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಇದರಿಂದಾಗಿ ವಿರೋಧಪಕ್ಷ ಕಾಂಗ್ರೆಸ್‌ ಹಾಗೂ ಕಿಮ್ಮನೆ ರತ್ನಾಕರ್‌ ಅವರಿಗೆ ಹೊಸ ಅಸ್ತ್ರ ಲಭ್ಯವಾದಂತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post