ಬಾಲು ಡಾಕ್ಟರ್‌ ನಿಧನ

ತೀರ್ಥಹಳ್ಳಿಯಲ್ಲಿ ಬಾಲು ಡಾಕ್ಟರ್ ಎಂದೇ ಜನಪ್ರಿಯರಾಗಿದ್ದ ಡಾಕ್ಟರ್  ಶ್ರೀನಿವಾಸ್ ಮೂರ್ತಿ ಶಿವಮೊಗ್ಗದ ಪುತ್ರನ ಮನೆಯಲ್ಲಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

1960-80ರ ದಶಕದ ಅಂತ್ಯದ ವರೆಗೂ ತೀರ್ಥಹಳ್ಳಿಯ ಜನಸಾಮಾನ್ಯರ ವೈದ್ಯರಾಗಿದ್ದ ಅವರು ಸದಾ ಕಾಲ ಹಸನ್ಮುಖಿಯಾಗಿ ಚಿಕಿತ್ಸೆ ನೀಡುತ್ತಿದ್ದರು. ನರ್ಸಿಂಗ್ ಹೋಂಗಳು ಆರಂಭಗೊಂಡಾಗಲು ಅವರ ಜನಪ್ರಿಯತೆ ಕಡಿಮೆಯಾಗಿರಲಿಲ್ಲ. ಅವರು ಶೆಟ್ಟಿ ಡಾಕ್ಟರ್, ಡಾ. ದಿನಮಣಿಯವರ ಸಮಕಾಲಿನರಾಗಿದ್ದವರು. ಈ ಮೂವರು ಒಂದು ಕಾಲದಲ್ಲಿ ತೀರ್ಥಹಳ್ಳಿ ಜನಸಾಮಾನ್ಯರ ಪಾಲಿನ ಅಪತ್ಬಾಂದವರಾಗಿದ್ದರು. ಬಾಲು ಡಾಕ್ಟರ್ ಅನಿವಾರ್ಯ ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ಮನೆಗಳಿಗೂ ತೆರಳುತ್ತಿದ್ದರು. ಅಪಾರ ವೃತ್ತಿ ನಿಷ್ಠೆ ಹೊಂದಿದ್ದ 80 ರ ಹರೆಯದ ಗಡಿ ದಾಟಿ ತುಂಬು ಜೀವನ ನಡೆಸಿ ಇಹದ ಯಾತ್ರೆ ಮುಗಿಸಿದ್ದಾರೆ. ಇವರ ನಿಧನದಿಂದ ತೀರ್ಥಹಳ್ಳಿಯ ಜನಪ್ರಿಯ ಹಾಗೂ ಘನತೆಯಿಂದ ತಮ್ಮ ವೃತ್ತಿಯನ್ನು ನಿರ್ವಹಿಸಿದ ವೈದ್ಯರೊಬ್ಬರು ಕಣ್ಮರೆಯಾದಂತಾಗಿದೆ. ಮೃತರು ಇಬ್ಬರು ಪುತ್ರ, ಓರ್ವ ಪುತ್ರಿಯರನ್ನು ಅಗಲಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post