ಮಂಕುಬೂದಿ ಎರಚುವವರಿಗೆ ಬೂದಿ ಎರಚುವ ಕಾರ್ಯಕ್ರಮ

ವಿಶ್ವಮಾನವ ಜ್ಯೋತಿಯೊಂದಿಗೆ ಗೋಪಾಲಗೌಡ ರಂಗಮಂದಿರ ಮುತ್ತಿಗೆ

ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧತೆ


ಜಗದ ಕವಿ, ಯುಗದ ಕವಿ, ಆಧುನಿಕ ಚಿಂತನೆಗಳಿಂದ ಮನುಷ್ಯ ಜಗತ್ತಿನ ತಲ್ಲಣಗಳಿಗೆ ಧ್ವನಿಯಾದಂತಹ ರಾಷ್ಟ್ರಕವಿ ಕುವೆಂಪು ಚಿಂತನೆಗಳಿಗೆ ವಿರೋಧ ವ್ಯಕ್ತಪಡಿಸುವ ಮನಸ್ಥಿತಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಪ್ರಜ್ಞಾವಂತರ ನಾಡೆನಿಸಿಕೊಂಡ ತೀರ್ಥಹಳ್ಳಿಯಲ್ಲೇ ವಿಷ ಬಿತ್ತನೆ ಮಾಡುವವರನ್ನು ಸಹಿಸಲು ಸಾಧ್ಯವಿಲ್ಲ.

ವಕ್ರ ಮನಸ್ಥಿತಿಯ ತೀರ್ಥ ಸಂಪ್ರೋಕ್ಷಣೆ ಮಾಡುವ ನಯವಂಚಕತನ ಹೆಚ್ಚು ದಿನ ನಡೆಯುವುದಿಲ್ಲ. ಅಸ್ಥಿತ್ವಕ್ಕಾಗಿ ಕೊಸರಾಡುತ್ತಿರುವ ಲಜ್ಜೆಗೇಡಿಗಳು ರಾಷ್ಟ್ರೀಯತೆ ಪಾಠ ಮಾಡುವ ಅರ್ಹತೆ ಹೊಂದಿಲ್ಲ. ಮಂಕುಬೂದಿ ಎರಚುವ ನಿಮಗೆ ಒಲೆಯ ಬೂದಿ ಎರಚುತ್ತೇವೆ ಎಂದು ವಿಶ್ವಮಾನವ ಜ್ಯೋತಿ "ಕುಪ್ಪಳ್ಳಿಯಿಂದ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನಕ್ಕೆ" ತಲುಪಿಸಿದ ಹೋರಾಟದ ನೇತ್ರತ್ವ ವಹಿಸಿದನೆಂಪೆ ದೇವರಾಜ್ ,ನಿಶ್ವಲ್ ಜಾದೂಗಾರ್ , ಹೂನ್ನಾನಿ ದೇವರಾಜ್, ತಿರುಪತಿ ಮಂಜು,ಪೂರ್ಣೇಶ್ ತಿಳಿಸಿದ್ದಾರೆ.

ಪ್ರತಿಭಟನೆಗೆ ರಾಜ್ಯಾದ್ಯಂತ ಬೆಂಬಲ ದೊರೆತಿದ್ದು ಹಲವರು ಬುಧವಾರ ತೀರ್ಥಹಳ್ಳಿಗೆ ಆಗಮಿಸುವುದಾಗಿ ತಿಳಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post