ಮುಂಡೊಳ್ಳಿ ಕ್ವಾರೆಯಲ್ಲಿ ಮರಳಿನ ಕಳ್ಳಾಟ ಅಧಿಕಾರಿಗಳು ಗಪ್‌ ಚುಪ್

 ಆಳ ನದಿಗೆ ಇಳಿದು ಅಕ್ರಮ ಗಣಿಗಾರಿಕೆ 

ಗಣಿ ಇಲಾಖೆ ಅಧಿಕಾರಿಗಳಿಂದ ಅಕ್ರಮಕ್ಕೆ ಫುಲ್‌ ಸಾಥ್‌

 ಗೃಹಸಚಿವರ ಕ್ಷೇತ್ರದಲ್ಲಿ ಇದೇನ್ ಕಥೆ 

ಮುಂಡೊಳ್ಳಿ ಕ್ವಾರೆಯಲ್ಲಿ ಎರ್ರಾಬಿರ್ರಿ ಲೂಟಿ

ಗೃಹಸಚಿವ ಆರಗ ಜ್ಞಾನೇಂದ್ರರ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ತಾಲ್ಲೂಕಿನ ಮುಂಡೊಳ್ಳಿ ಕ್ವಾರೆಯಲ್ಲಿ ಅನಧಿಕೃತವಾಗಿ ಬೇಕಾಬಿಟ್ಟಿ ಮರಳು ಲೂಟಿ ಮಾಡಲಾಗುತ್ತಿದೆ. ಮುಂಡೊಳ್ಳಿ ಕ್ವಾರೆಯ ಮರಳು ರಾಜಧನವಿಲ್ಲದೆ ಕಳ್ಳ ಸಾಗಣಿಕೆಯಾಗುತ್ತಿದ್ದರು ಆಡಳಿತ ವರ್ಗ ಮಾತ್ರ ಮೌನ ವಹಿಸಿದ್ದಾರೆ. ರಾತ್ರೋ ರಾತ್ರಿ ಸಾವಿರಾರು ಲೋಡ್‌ ಮರಳು ಸಾಗಾಣೆಗೆ ವಿವಿಧ ಇಲಾಖೆಗಳು ಸಾಥ್‌ ನೀಡಿದಂತಿದೆ. ರಾಯಲ್ಟಿ ಇಲ್ಲದೆ ಕೋಟ್ಯಾಂತರ ರೂಪಾಯಿ ಮರಳು ಸಾಗಾಣಿಕೆಯಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದರು ಗಣಿ ಇಲಾಖೆ ಮೂಖ ಪ್ರೇಕ್ಷಕನಂತಿದೆ.

ಮುಂಡೊಳ್ಳಿ ಕ್ವಾರೆ ತೀರ್ಥಹಳ್ಳಿಯ ಗಡಿ ಭಾಗದಲ್ಲಿ ಇರುವ ಕಾರಣಕ್ಕೆ ತಾಲ್ಲೂಕು ಆಡಳಿತ, ಜಿಲ್ಲಾಡಳಿತದಿಂದ ಗಮನ ಹರಿಸುತ್ತಿಲ್ಲ. ಮರಳು ಕಳ್ಳಸಾಗಾಣಿಕೆ ಲೆಕ್ಕ ಇದ್ದರು ಆಡಳಿತ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಾರ್ವಜನಿಕರ ದೂರುಗಳಿಗೂ ಕಿಮ್ಮತ್ತು ಸಿಗುತ್ತಿಲ್ಲ. ಅಧಿಕೃತ ವಿರೋಧ ಪಕ್ಷಗಳು ಕೂಡ ತನ್ನ ನಿಷ್ಕ್ರೀಯತೆ, ನಿರುತ್ಸಾಹ ತೋರುತ್ತಿದ್ದು ರಾತ್ರಿ ಕಳ್ಳರಿಗೆ ಅನುಕೂಲ ಮಾಡಿದಂತೆ ಆಗಿದೆ. ಬೆಳ್ಳಗ್ಗಿನ ವೇಳೆಯಲ್ಲೂ ಕಳ್ಳ ಸಾಗಾಣಿಕೆ ನಡೆಯುತ್ತಲೇ ಇದ್ದರು ಯಾಕೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಕ್ವಾರೆಯಲ್ಲಿ ಸಿಸಿಟಿವಿ ಕ್ಯಾಮರಗಳು ಅಳವಡಿಸದೆ ಇರುವುದು ಹಲವು ಅನುಮಾನ ಸೃಷ್ಟಿಸಿದೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಲಾಭಲೆಕ್ಕಾಚಾರ ಆರಂಭಗೊಂಡಿದೆ. ವಿರೋಧಪಕ್ಷಗಳು ಸಾಕ್ಷಿ ಸಮೇತ ಅಕ್ರಮ ಸಾಗಾಣೆಯ ಮಾಹಿತಿ ಪಡೆಯುತ್ತಿದ್ದು, ಆಡಳಿತ ವೈಫಲ್ಯವನ್ನು ಎತ್ತಿ ಹಿಡಿಯುವ ಲೆಕ್ಕಾಚಾರದಲ್ಲಿದೆ. ಗೃಹಸಚಿವರು ಎಚ್ಚರ ವಹಿಸಿ ನಿಯಂತ್ರಿಸದಿದ್ದರೆ ಪರಿಸ್ಥಿತಿ ಹದಗೆಡುವ ಜೊತೆಗೆ ರಾಜಕೀಯವಾಗಿಯೂ ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಆಡಳಿತರೂಢ ಪಕ್ಷದ ಮುಖಂಡರು ತಮ್ಮವರನ್ನು ರಕ್ಷಿಸುವ ಮಹತ್ವದ ಕಾರ್ಯದಲ್ಲಿ ಪಾಲ್ಗೊಂಡಿದ್ದು ಉಳಿದವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅಲ್ಲದೇ ಸ್ವತಃ ಮುಖಂಡರೇ ಕ್ವಾರೆಗೆ ಇಳಿಯುತ್ತಿದ್ದು ಅಧಿಕಾರಿಗಳು ಏನನ್ನೂ ಕೇಳದ ಸ್ಥಿತಿ ಎದುರಾಗಿದೆ. ಅಧಿಕಾರಿಗಳಿಗೂ ಇದು ತಲೆನೋವಾಗುತ್ತಿದ್ದು ಮರಳು ಲೂಟಿಯ ಸವಾಲು ಎದುರಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಚ್ಚಾ ಮನೆ ನಿರ್ಮಾಣದ ಕನಸು ಹೊತ್ತಿರುವ ಬಡ ಕುಟುಂಬ ತಾವೇ ಹಳ್ಳಗಳಿಗೆ ಇಳಿದರೆ ಕೇಸು ಹಾಕಿಸುವ ಪ್ರಯತ್ನ ನಡೆಯುತ್ತಿದೆ. ಪರ್ಮಿಟ್‌ ಇಲ್ಲದೆ ರಾತ್ರಿ ಬೆಳಗೂ ಲೂಟಿ ಮಾಡುತ್ತಿದ್ದರು ಬಡವರಿಗೆ ಮಾತ್ರ ನಯಾಪೈಸೆ ಕಡಿಮೆಯ ಮರಳು ಲಭ್ಯವಾಗುತ್ತಿಲ್ಲ. ಅಧಿಕೃತ ಕ್ವಾರಿಗಳಲ್ಲೇ ಇಂತಹ ಸ್ಥಿತಿ ನಿರ್ಮಾಣವಾಗಿದ್ದು ತಾಲ್ಲೂಕಿನಲ್ಲಿ ಮರಳು ಅಕ್ರಮ ದಂಧೆ ಯದ್ವತದ್ವ ನಿಯಂತ್ರಣ ಮೀರಿ ನಡೆಯುತ್ತಿದೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post