ಮುಳುಗಡೆ ಸಂತ್ರಸ್ತರ ಕುರಿತು ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲ

ಕಾಟಾಚಾರದ ಸಿಎಂ ನೇತೃತ್ವದ ಸಭೆ
ಸಭೆಯ ನಿರ್ಣಯ ಕೈಗೊಳ್ಳದ ಜನಪ್ರತಿನಿಧಿಗಳು
ಆರಗ, ಹರತಾಳು, ಬಿವೈಆರ್‌ ಜಿಲ್ಲಾಧಿಕಾರಿಗೆ ಸರಂಡರ್‌ -ತೀ.ನಾ.ಶ್ರೀ. ಆರೋಪ

ಮುಳುಗಡೆ ಸಂತ್ರಸ್ತರು ಮತ್ತು ಅರಣ್ಯ ಹಾಗೂ ಬಗರ್‌ ಹುಕುಂ ಸಾಗುವಳಿದಾರರ ಕುರಿತು ಈಗಿನ ಸರ್ಕಾರಕ್ಕಾಗಲಿ ಮತ್ತು ಬಿಜೆಪಿ ಶಾಸಕರು, ಸಂಸದರು, ಮಾಜಿ ಮುಖ್ಯಮಂತ್ರಿ ಹಾಗೂ ಈಗಿನ ಗೃಹಸಚಿವ ಆರಗ ಜ್ಞಾನೇಂದ್ರರಿಗೆ ಯಾವುದೇ ರೀತಿಯ ಮಾಹಿತಿ ಹಾಗೂ ಅಧ್ಯಯನದ ಬಲವಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೇಳಿದನ್ನು ಕೇಳುತ್ತಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಮಾತನ್ನು ಶಾಸಕರುಗಳು, ಸಂಸದರು ಕೇಳುತ್ತಿದ್ದಾರೆ. ಸ್ವತಃ ಜ್ಞಾನೇಂದ್ರ, ಹರತಾಳು ಹಾಲಪ್ಪ, ಸಂಸದ ರಾಘವೇಂದ್ರ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೈಮುಗಿದು ಅರಣ್ಯ ಇಲಾಖೆಯ ಒತ್ತುವರಿ ತೆರವಿನ ನೋಟೀಸುಗಳನ್ನು ಚುನಾವಣೆ ಹೊತ್ತಿನ ಈ ಸಂದರ್ಭದಲ್ಲಿ ಕಳಿಸಬೇಡಿ ಚುನಾವಣೆಗೆ ತೊಂದರೆಯಾಗುತ್ತವೆ ಎನ್ನುತ್ತಾರೆ. ಇದೊಂದು ಸರ್ಕಾರವೇ ಇವರಿಗೆ ರೈತರು ಹಾಗೂ ಮುಳುಗಡೆ ಸಂತ್ರಸ್ತರ ಕುರಿತು ನಿಜವಾಗಿಯೂ ಕಾಳಜಿ ಇದೆಯೇ ಎಂದು ಶರಾವತಿ ಮುಳುಗಡೆ ಸಂತ್ರಸ್ತರ ಪರ ಹೋರಾಟಗಾರ ತೀ.ನಾ. ಶ್ರೀನಿವಾಸ್‌ ಹೇಳಿದ್ದಾರೆ.

ತೀರ್ಥಹಳ್ಳಿಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಈಗಿನ ಬಿಜೆಪಿ ಸರ್ಕಾರ 1900 ಇಸವಿಯಿಂದ 1980ರೊಳಗಿನ ಕಾನೂನುಗಳನ್ನು ಸದ್ದಿಲ್ಲದೆ ಜಾರಿಗೊಳಿಸುತ್ತಿದೆ. ಕಡೇ ಪಕ್ಷ ರೈತರಿಗೆ ಯಾವ ಕಾರಣಕ್ಕಾಗಿ ಎನ್ನುವ ಹಿಂಬರಹ ಸಹ ನೀಡುತ್ತಿಲ್ಲ. ಸಂತ್ರಸ್ತರು ಕೂಡ ರಾಜಕೀಯ ಪಕ್ಷಗಳಲ್ಲಿ ಹಂಚಿಹೋಗಿದ್ದಾರೆ. ಎಲ್ಲಿಯವರೆಗೆ ಈ ಸಂತ್ರಸ್ತರೆಲ್ಲ ಅಪಾಯವನ್ನು ಮನಗಂಡು ಯಾರಿಗೆ ನೈಜ ಕಾಳಜಿ ಇದೆ ಎಂಬದನ್ನು ಎಲ್ಲಿಯವರೆಗೆ ಅರಿಯುವುದಿಲ್ಲವೋ ಅಲ್ಲಿಯತನಕ ಈ ಸಮಸ್ಯೆ ಬಗೆಹರಿಸುವುದು ಕಷ್ಟ ಎಂದು ವಿಷಾಧಿಸಿದರು.

ಕೇಂದ್ರ ಬಿಜೆಪಿ ಸರ್ಕಾರ ಅಡಿಕೆ ಬೆಳೆಗಾರರ ವಿಚಾರದಲ್ಲಿ ವರ್ತಿಸುತ್ತಿರುವ ರೀತಿ ನೋಡಿದರೆ ಸಂಪೂರ್ಣ ಭೂತಾನ್‌ ಅಡಿಕೆಯನ್ನೇ ತೆರಿಗೆ ರಹಿತವಾಗಿ ಆಮದು ಮಾಡಿಕೊಳ್ಳುವ ಮೂಲಕ ಬೆರಳೆಣಿಕೆಯ ಕಂಪನಿಗಳನ್ನು ಸಾಕಲು ಹೊರಟಂತಿದೆ. ಸ್ವತಃ ಕೇಂದ್ರ ಸಚಿವರೇ ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಉತ್ತರ ನೀಡುತ್ತಾರೆ. ಈಚಗೆ ಅವರು ಖಾಸಗಿಯಾಗಿ ಮಾತನಾಡಿಕೊಳ್ಳುತ್ತಿರುವುದು ಬಹಿರಂಗವಾಗಿದೆ. ಸಿಗರೇಟ್‌ ಕಂಪನಿಗಳು ಗುಡ್ಕಾದಿಂದ ನಷ್ಟ ಅನುಭವಿಸುತ್ತಿದ್ದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅಡಿಕೆ ಕ್ಯಾನ್ಸರ್‌ಕಾರಕ ಎಂಬುದರ ಬಗ್ಗೆ ವರದಿ ಪ್ರಕಟ ಮಾಡಲು ಹೊರಟಿದೆ ಎಂದಿದ್ದಾರೆ.

ಮಲೆನಾಡಿನ ಬಗರ್‌ಹುಕುಂ, ಮುಳುಗಡೆ ಸಂತ್ರಸ್ತರು, ಅಡಿಕೆ ಸಂಬಂದ ಹತ್ತಾರು ಸಭೆಗಳನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದಿದೆ. ಆ ಸಭೆಯಲ್ಲಿ ಜಿಲ್ಲೆಯ ಸ್ವತಃ ಅಡಿಕೆ ಬೆಳೆಗಾರರಾದ ಗೃಹಸಚಿವರು ಭಾಗವಹಿಸಿದ್ದರು ಇಲ್ಲಿಯವರೆಗೆ ನಿರ್ಣಯ ಬರೆದಿಲ್ಲ. ಕಾಟಾಚಾರದ ಸಭೆ ನಡೆಸಿದ್ದಾರೆ. ನಿರ್ಣಯಗೊಳ್ಳದೆ ಅಧಿಕಾರಿಗಳು ಅದನ್ನು ಕಾರ್ಯರೂಪಗೊಳಿಸಲು ಸಾಧ್ಯವಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ಅರಣ್ಯ ಇಲಾಖೆ ಇಡೀಕರಣ ಮಾಡಲು ಹೊರಟಿದ್ದಾರೆ ಎಂದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post