11ರಲ್ಲಿ 9 ಸದಸ್ಯರಿಂದ
ವಿರುದ್ದ ಮತ ಚಲಾವಣೆ
ಬಿಜೆಪಿ ಕೈ ತಪ್ಪಿದ
ಮತ್ತೊಂದು ಸೊಸೈಟಿ
ಹೊನ್ನೇತಾಳು ವ್ಯವಸಾಯ
ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ರವೀಶ್ ವಿರುದ್ದ ಇಂದು ಬೆಳಿಗ್ಗೆ ನಿರ್ದೇಶಕರು ಅವಿಶ್ವಾಸ ನಿರ್ಣಯ
ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟು 11 ಸದಸ್ಯರಲ್ಲಿ ಒಟ್ಟು 9 ಮಂದಿ ಅವರ ವಿರುದ್ದ ಮತ
ಚಲಾಯಿಸಿದ್ದರಿಂದ ಬಹುತೇಕ ರವೀಶ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಖಚಿತವಾಗಿದೆ. ಈ ಹಠಾತ್
ಬೆಳವಣಿಗೆಗೆ ರವೀಶ್ ಪ್ರಮುಖ ನಿರ್ಣಯಗಳು ಸೇರಿದಂತೆ ಎಲ್ಲಾ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದಲ್ಲದೇ
ಸೌಜನ್ಯಕ್ಕೂ ಸಹ ನಿರ್ದೇಶಕರೊಂದಿಗೆ ಚರ್ಚಿಸುತ್ತಿರಲಿಲ್ಲ ಎಂಬ ಆರೋಪ ಪ್ರಮುಖವಾಗಿ ಕೇಳಿ ಬಂದಿದೆ.
ವಾಸ್ತವವಾಗಿ ಈ ಸೊಸೈಟಿಯಲ್ಲಿ ಕಾಂಗ್ರೆಸ್ ಒಲವಿರುವ ನಿರ್ದೇಶಕರು ಹೆಚ್ಚಿದ್ದರು ಬಿಜೆಪಿ ಬೆಂಬಲಿತ
ರವೀಶ್‌ಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
