ಗುಡ್ಡೆಕೊಪ್ಪಕ್ಕೆ ಮೀಸಲಾದರೇ ಗೃಹಮಂತ್ರಿ..!

ಮನೆಮಂತ್ರಿ ವಿರುದ್ದ ಅಮ್ರಪಾಲಿ ಗರಂ
ತಾಕತ್ತು... ಧಮ್ ಇದ್ರೆ ಪ್ರಶ್ನೆಗೆ ಉತ್ತರಿಸಿ - ಅಮ್ರಪಾಲಿ ಸವಾಲು

ಇತ್ತೀಚೆಗೆ ಚುನಾವಣಾ ಸಂದರ್ಭದಲ್ಲಿ ಸುಳ್ಳು ಅಪಪ್ರಚಾರ ಮಾಡುವವರ ಬಗ್ಗೆ ಎಚ್ಚರಿಕೆ ವಹಿಸಿಎಂಬ ಪತ್ರಿಕಾ ಹೇಳಿಕೆ ಕಂಡು ಆಶ್ಚರ್ಯಗೊಂಡು ಈ ಹೇಳಿಕೆ ದಾಖಲಿಸುತ್ತಿದ್ದೇನೆ. ಚುನಾವಣಾ ಸಂದರ್ಭ ಬಿಡಿ ಈಗಾಗಲೇ ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ತಮ್ಮನ್ನು ಜನ ನಂಬದಂತೆ ಮನವಿ ಮಾಡುತ್ತಿದ್ದೇನೆ. ನಾವು ನಿಮ್ಮಂತೆ ಹಿಟ್ ಅಂಡ್ ರನ್ ಥರಹದವರಲ್ಲ... ಕಳೆದ ಚುನಾವಣಾ ಸಮಯದಲ್ಲಿ ಮುಗ್ದ ಬಾಲಕಿ ನಂದಿತಾ ಆತ್ಮಹತ್ಯೆ ಪ್ರಕರಣವನ್ನು ರಾಜಕೀಯಗೊಳಿಸಿ ಕೋಮುಭಾವನೆ ಪ್ರಚೋದಿಸಿ ಗೆದ್ದಿರಬಹುದು. ಈಗ ಆ ಕಥೆಯನ್ನು‌ ಕಟ್ಟಿದ ನಿಮ್ಮ ನೇತೃತ್ವದ ಪಟಾಲಂ ಕುತಂತ್ರದ ಹಿನ್ನಲೆ ಕ್ಷೇತ್ರದ ಜನತೆಗೆ ತಿಳಿದು ಹೋಗಿದ್ದರಿಂದ ಸಾವಿರಾರು ಬೆಳ್ಳಿ ಕಾಯಿನ್, ಸಾವಿರಾರು ಸೀರೆ ಹಂಚುತ್ತಿದ್ದೀರಿ. ಭ್ರಷ್ಟಾಚಾರಕ್ಕೆ ಮಾರು ಹೋಗಿರುವ ನಿಮ್ಮ ಬಗ್ಗೆ ಕ್ಷೇತ್ರದ ಜನತೆ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ.

ಹಾಲಿ ಸಚಿವರು ತೀರ್ಥಹಳ್ಳಿ ಶಾಸಕರಾಗಿ ಸುಮಾರು 18 ವರ್ಷಗಳ ದೀರ್ಘಾನುಭವ ಹೊಂದಿದ್ದು ಅವರ ಅವಧಿಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಏಕರೂಪದ ಯಾವುದಾದರೂ ಇಪ್ಪತ್ತೈದರಿಂದ ಮೂವತ್ತು  ಕಿಲೋಮೀಟರ್ ರಸ್ತೆ ಮಂಜೂರು ಮಾಡಿಸಿಕೊಂಡು ಬಂದಿದ್ದರೆ ಸಾಕ್ಷಿ ಸಮೇತ ನಿರೂಪಿಸಲಿ ಎಂದು ನಾನು ಸವಾಲು ಹಾಕುತ್ತಿದ್ದೇನೆ.

ನಮ್ಮ ನಾಯಕರು ಮಾಜಿ ಸಚಿವರು ಆದ ಕಿಮ್ಮನೆ ರತ್ನಾಕರ್ ತಾವು ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾಗ ವಿರೋಧ ಪಕ್ಷದಲ್ಲಿದ್ದರು ಕೂಡ ಆಡಳಿತ ಪಕ್ಷದವರ ಮನ ಓಲೈಸಿ ಸುಮಾರು 600 ಕೋಟಿಗೂ ಮಿಗಿಲಾಗಿ ಅನುದಾನಗಳನ್ನು ತಂದಿದ್ದು ತೀರ್ಥಹಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ದಿಯನ್ನು ಮಾಡಿದ್ದರು ಅವರು ಎರಡನೇ ಬಾರಿ ಶಾಸಕರಾಗಿ ಸಚಿವರಾದಾಗ ಒಂದು ಸಾವಿರ ಕೋಟಿಗೂ ಹೆಚ್ಚಿನ ಅನುದಾನವನ್ನು ನಮ್ಮ ಕ್ಷೇತ್ರಕ್ಕೆ ತಂದಿದ್ದರು. ಈ ಹಿಂದೆ ಮೂರು ಬಾರಿ ಗುದ್ದಲಿ ಪೂಜೆ ನಡೆಸಿ ತುಕ್ಕು ಹಿಡಿದಿದ್ದ ಚೆಂಗಾರು ಮಹಿಷಿ ಬಂಡಿಗಡಿ ಸೇತುವೆಗಳಿಗೆ ಹಣ ಮಂಜೂರು ಮಾಡಿಸಿಕೊಂಡು ಬಂದು ಕಾಮಗಾರಿಯನ್ನು ಪ್ರಾರಂಭಿಸಿದ್ದರು. ಮೂರು ಸೇತುವೆಗಳಿಂದ ನಲವತ್ತೈದು ಕೋಟಿ ರೂಪಾಯಿ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದು ಕಿಮ್ಮನೆಯವರು ಅಲ್ಲವೇ?

ನಿಮ್ಮ ಮನೆಗೆ ಹೋಗುವ ಆರಗ ಸೇತುವೆ ಯಾರ ಅವಧಿಯಲ್ಲಿ ಯಾರ ಅನುದಾನದಡಿಯಲ್ಲಿ ಆಗಿದ್ದು ಎಂದು ಹೇಳುತ್ತೀರಾ ಗೃಹಮಂತ್ರಿಗಳೇ?

ಹೊಸ ಕಾಮಗಾರಿ ಬಿಡಿ ಕಿಮ್ಮನೆಯವರ ಕಾಲದಲ್ಲಿ ಮಂಜೂರಾದ, ನಿರ್ಮಾಣವಾದ ರಸ್ತೆಗಳ ಪ್ಯಾಚ್ ವರ್ಕ್ ಮಾಡಿಸಿ ಕಮೀಷನ್ ರಹಿತವಾಗಿ ಅದು ನಿಮ್ಮ ಸಾಧನೆ ಎನ್ನಬಹುದು. ತೀರ್ಥಹಳ್ಳಿಯ ಇಂದಿರಾ ನಗರದ ಸಿಸಿ ಫ್ಯಾಕ್ಟರಿ ನಿರ್ಮಿಸಿದ ರಸ್ತೆ ನಿಮ್ಮ ಅಭಿವೃದ್ದಿಯ ಕಾರ್ಯಕ್ಕೆ ಕೈ ಕನ್ನಡಿ ಎನ್ನಬಹುದು. ನಿಮ್ಮ ಪ್ರಕಾರದ ಅಭಿವೃದ್ದಿ ಎಂದರೆ ಪರ್ಸೆಂಟೇಜ್ ಲೆಕ್ಕ ಎಂಬಂತಾಗಿದೆ ನಮ್ಮ ಕ್ಷೇತ್ರದ ಹಾಗೂ ನಿಮ್ಮ ಘನತೆ ಉಳಿಸಿಕೊಳ್ಳಿ ಎಂದು ಅಮ್ರಪಾಲಿ ಸುರೇಶ್ ಸಲಹೆ ನೀಡಿದ್ದಾರೆ

ಸತ್ತ ಮನೆ, ಸೂತಕ ಮನೆ, ಪೂಜೆಗೆ ಹೋಗಿ ಬಂದಕಡೆಯಲ್ಲ ಯಾರಿಗೇ ಇಷ್ಟವಿಲ್ಲದಿದ್ದರೂ, ಅಗತ್ಯವೂ ಇಲ್ಲದಿದ್ದರು ಭಾಷಣ ಅರಂಭಿಸಿ ಅ ಕೆಲಸ ನಾನೆ ಮಾಡಿದ್ದು. ಈ ಕೆಲಸ ನಾನೆ ಮಾಡಿದ್ದು ಎಂದು ರಾಜಕಾರಣ ಮಾಡುವುದು ನಿಮ್ಮ ಹಳೆಯ ಚಾಳಿ ಅದು ಬದಲಾಗಲಿಲ್ಲ.

ಬಡ ಬಂಡೆ ಕಾರ್ಮಿಕರ ಕಷ್ಟ ಸಂಕಟಗಳನ್ನು ಅವರ ಅನಿವಾರ್ಯತೆಗಳನ್ನು ತಮ್ಮ ರಾಜಕೀಯ ಬೇಳೆ ಬೇಯಿಸಲು ಉಪಯೋಗಿಸುತ್ತಿರುವ ನಿಮ್ಮ ನಿಲುವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಹಾಗೂ ಇದಕ್ಕೆ ಸಂಬಂಧ ಪಟ್ಟ ನಿಮ್ಮ ಎರಡು ಮಾದರಿಯ ವೀಡಿಯೋಗಳನ್ನು ಸದ್ಯದಲ್ಲೇ ಬಹಿರಂಗ ಪಡೆಸುತ್ತೇನೆ. ಬಂಡೆ ಕಾರ್ಮಿಕರ ಸಭೆಯಲ್ಲೇ ನೇರವಾಗಿ ಪೋಲಿಸರು ಲಂಚ ತೆಗೆದುಕೊಳ್ಳುತಿದ್ದಾರೆ ಗಣಿ ಇಲಾಖೆಯವರು ಲಂಚ ತಿನ್ನುತಿದ್ದಾರೆ ಎಂದು ಹೇಳಿದ್ದೀರಲ್ಲಾ ನೀವು ಮಂತ್ರಿಯಾಗಿ ಪ್ರತಿಜ್ಞೆ ಸ್ವೀಕರಿಸುವಾಗ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭ್ರಷ್ಟಾಚಾರ ಅರಿವಿಗೆ ಬಂದರೆ ಅದನ್ನು ಇಲಾಖೆಯ ಗಮನಕ್ಕೆ ತಂದು ಕ್ರಮ ಕೈಗೊಳ್ಳವೇಕಲ್ಲವೇ? ನೀವು ಅರಿವಿದ್ದು ಇಂಥಹ ಭ್ರಷ್ಟಾಚಾರ ನಡೆಯಿತು ಎಂದು ಹೇಳುತ್ತಿರುವುದು ಗೃಹಮಂತ್ರಿಯಾಗಿರಲು ನಾಲಾಯಕ್ ಅಂತಲೇ ಅರ್ಥವಲ್ಲವೇ?  ಭಾಷಣದಲ್ಲಿ ಅಸಹಾಯಕತೆ ವ್ಯಕ್ತಪಡಿಸುವ ತಾವು ಅಸಹಾಯಕರೋ ಇದರಲ್ಲಿ ತಾವು ಫಲಾನುಭವಿಯೋ  ಸ್ಪಷ್ಟ ಪಡಿಸಬೇಕು ಎಂದು ಅಮ್ರಪಾಲಿ ಸುರೇಶ್ ಲೇವಡಿ ಮಾಡಿದ್ದಾರೆ.

ತೀರ್ಥಹಳ್ಳಿಯ ಕಾರ್ಮಿಕ ಇಲಾಖೆಯಿಂದ ಹಿಡಿದು ಪ್ರತಿಯೊಂದು ಇಲಾಖೆಗಳು ಕಾನೂನಾತ್ಮಕವಾಗಿ ಜನಪರವಾಗಿ ಕೆಲಸ ಮಾಡುತ್ತಿಲ್ಲ. ಕಾರ್ಮಿಕರಿಗೆ ಹಂಚುವ ಕಿಟ್ಗಳಿಂದ ಮರಳಿನ ತನಕ ಬಚ್ಚಾಗಳ ಇಷಾರೆ, ಕಮೀಷನ್ ಮೂಲಕ ನಡೆಯುತ್ತಿದೆ. ಬಚ್ಚಾಗಳ ಕಮೀಷನ್ ಪ್ರಕರಣಗಳು ಎಸಿಸಿ ಪ್ಯಾಕ್ಟರಿ ನಿಗೂ ರಹಸ್ಯಗಳ ಹಲವು ವಾಯ್ಸ್ ರೆಕಾರ್ಡ್ಗಳು ಮೊಬೈಲ್ಗಳಿಂದ ಮೊಬೈಲ್ಗೆ ಹರಿದಾಡುತಿದ್ದು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮನೋರಂಜನೆ ನೀಡುವುದಂತೂ ಗ್ಯಾರಂಟಿ. ನಿಮ್ಮ ಹಗರಣಗಳ ಕೆಲ ಸ್ಯಾಂಪಲ್ಗಳು ಕಾಂತಾರ ಚಲನ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಲಿದೆ.

ಕಿಮ್ಮನೆ‌ ತಲೆಕೆಳಗಾಗಿ ನಡೆದರೂ ಪ್ರಯೋಜನ ಇಲ್ಲ ಎಂಬ ಹೇಳಿಕೆ ನೀಡಿದವ ಮದುವೆಗೂ ಮೊದಲು ತನ್ನ ಭಾವಿ ಪತ್ನಿಗೆ ಬಗರ್ ಹುಕುಂ ಜಾಗ ಮಂಜೂರಾತಿ ಮಾಡಿಸಿಕೊಂಡಿದ್ದು ತಲೆಕೆಳಗಾಗಿ ಓಡಾಡಿದ ಶ್ರಮ ಇರಬಹುದು ಅಲ್ಲವೇ? ಹಾಗಾಗಿ ಅವರ ಅನುಭವ ಅವರು ಹೇಳಿಕೊಳ್ಳುತ್ತಾರೆ ಎನ್ನುವುದು ಸತ್ಯ ಅಲ್ವೇ. ಇನ್ನೊಬ್ಬ ಅಮ್ರಪಾಲಿಗೆ ಬಂಡೆಯಲ್ಲಿ  ಪಾಲಿದೆ ಅಂತಾ ವಾಟ್ಸ್ಯಾಪ್‌ನಲ್ಲಿ ಸುದ್ದಿ ಹಂಚಿ ನಂತರ ಪ್ರಮಾಣಕ್ಕೆ ಕರೆದಾಗ ಎದ್ದು ಬಿದ್ದು ಓಡಿಹೋದವನಲ್ಲವೇ??

ಸತೀಶ್ ಜಾರಕಿಹೊಳೆಯವರು ಹೇಳಿದ ಹೇಳಿಕೆಯ ಬಗ್ಗೆ ಚರ್ಚೆಗೆ ಕರೆದಿದ್ದಾರೆ. ನಮ್ಮ ಪ್ರಖಂಡ ಬುದ್ದಿವಂತ, ಹಿಂದಿ ಇಂಗ್ಲೀಷ್ ಭಾಷೆಯಲ್ಲೂ ಅಪಾರ ಪ್ರಮಾಣದಲ್ಲಿ ಜ್ಞಾನ ಸಂಪಾದಿಸಿರುವ ಗೃಹಮಂತ್ರಿಗಳು ಅವರೊಂದಿಗೆ ಚರ್ಚೆಗೆ ಕೂರಬಹುದಲ್ಲವೇ? ಖಾಸಗಿ ವೇದಿಕೆಯಲ್ಲಿ ಅವರ ವೈಯುಕ್ತಿಕ ಹೇಳಿಕೆಗೂ ಕಿಮ್ಮನೆಯವರಿಗೂ ಏನು ಸಂಬಂಧ? ಬಚ್ಚಗಳಾ ಪ್ರಶ್ನೆಗೆ ಉತ್ತರಿಸುವ ಅವಶ್ಯಕತೆ ಖಂಡಿತ ನಮಗಿಲ್ಲ. ಅವರದೇ ಪಕ್ಷದ ಸಚಿವ ಮುರುಗೇಶ್ ನಿರಾಣಿ ಹಿಂದೂ ಧರ್ಮದ ಬಗ್ಗೆ ವಾಟ್ಸಪ್ನಲ್ಲಿ ಹರಿಬಿಟ್ಟಿದ್ದ ಹೇಳಿಕೆಗಳನ್ನು ಖಂಡಿಸುವುದು ಬಿಟ್ಟು ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟವರು ತಮ್ಮದೆ ಕೆಲಸವಲ್ಲವೇ?? ಅವರು ಹೇಳಿದ್ದು ಏನು ಎಂಬುದನ್ನು ಲಗತ್ತಿಸಿದ್ದೇನೆ ಒಮ್ಮೆ ಓದಿಕೊಳ್ಳಿ,

ಕೊರೋನಾಕ್ಕೆ ತಟ್ಟೆ ಜಾಗಟೆ ಬಾರಿಸಿ

ಎಲೆಚುಕ್ಕಿ ರೋಗಕ್ಕೆ ಮಂತ್ರ ಪಠಿಸಿ

ದೇಶದ ಪ್ರಧಾನಿಯಾದವರು ಕೊರೋನಾ ಸಮಯದಲ್ಲಿ ಜಾಗಟೆ ಬಾರಿಸಿ ಎಂದರೆ, ಮಲೆನಾಡನ್ನು ಕಾಡುತ್ತಿರುವ ಎಲೆ ಚುಕ್ಕೆ ರೋಗಕ್ಕೆ ಗೃಹ ಮಂತ್ರಿಗಳು, ಅಡಿಕೆ ಟಾಸ್ಕ್ ಫೋರ್ಸ್ನ ಅಧ್ಯಕ್ಷರು ಮಂತ್ರ ಪಠಿಸಿ ಎಂದು ಹೇಳುವುದರ ಮೂಲಕ ತಮ್ಮ ಅಸಹಾಯಕತೆಯನ್ನು ತೋರ್ಪಡಿಸಿದರು. ಬಲಾಢ್ಯರು ಅಧಿಕಾರದಲ್ಲಿರುವವರು ಪರಿಹಾರ ಹುಡುಕುವುದು ಬಿಟ್ಟು ಈ ರೀತಿ ಅಸಹಾಯಕತೆ ತೋರ್ಪಡಿಸಿದರೆ ಜನಸಾಮಾನ್ಯರ ಕಥೆ ಏನು..?

ಒಂದು ಅಡಿಕೆ ಮರ ಹೋದರೆ ಬೆಳೆಯಲು 10 ವರ್ಷ ಬೇಕು ಮಲೆನಾಡು ಅಡಿಕೆಯನ್ನೇ ನಂಬಿದೆ. ತೀರ್ಥಹಳ್ಳಿ ತಾಲೂಕು ಒಂದರಲ್ಲಿಯೇ 45,000 ಎಕರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿ ಅಧಿಕೃತ ಅಡಿಕೆ ಬೆಳೆ ಇದ್ದು ಔಷಧಿ ಸಿಂಪಡಿಸಲು ಮಿನಿಮಮ್ ಹತ್ತು ಕೋಟಿಯಾದರು ಬೇಕು ಆದರೆ ಸರ್ಕಾರದಿಂದ ಕೇವಲ 19 ಲಕ್ಷ ತಂದಿರುವುದೇ ಇವರ ಸಾಧನೆ ಜನ ಇವರಿಗೆ ಅಧಿಕಾರ ಕೊಟ್ಟಿದ್ದು ಇದ್ದಕ್ಕೆನಾ ಎಂದೂ ಮ್ರಪಾಲಿ ಸುರೇಶ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post