ಅಡಿಕೆ ಬೆಳೆಗಾರರ ಪಾಲಿನ ಆಪತ್ಪಾಂಧವ ಆಸೀಫ್‌ ಹರಳೀಮಠ

ಮಲೆನಾಡಿನ ಪ್ರಮುಖ ಜೀವನಾಧಾರ ಬೆಳೆಯಾದ ಅಡಿಕೆ ಕೊಯ್ಲು ಇನ್ನೇನು ಆರಂಭಗೊಳ್ಳಲಿದೆ. ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿರುವ ಅಡಿಕೆ ತೋಟಗಳು ಈಗ ದೊಡ್ಡ ಪ್ರಮಾಣ ಕಾರ್ಮಿಕ ಕೊರತೆ ಅನುಭವಿಸುತ್ತಿದೆ. ಮೊದಲಿನಂತೆ ಹತ್ತಾರು ಜನ ಸೇರಿ ಒಂದೆಡೆ ಕುಳಿತು ಅಡಿಕೆ ಸುಲಿಯುವ ಸನ್ನಿವೇಶ ಈಗ ಮಾಯವಾಗಿದೆ. ದೊಡ್ಡ ಪ್ರಮಾಣದಲ್ಲಿ ಅಡಿಕೆ ಉತ್ಪಾದನೆಯಾದಾಗ ಅಡಿಕೆ ಬೆಳೆಗಾರ ಎದುರಿಸಿದ ಪ್ರಮುಖ ಸವಾಲು ಅದನ್ನು ಸುಲಿಸುವುದು ಹೇಗೆಂಬುದು.

ಆ ಸಮಸ್ಯೆಗೆ ಮಲೆನಾಡು ಭಾಗದಲ್ಲಿ ಅತ್ಯಂತ ಸಮರ್ಥ ಉತ್ತರವಾಗಿ ದೊರಕಿದ್ದು ಆಸಿಫ್‌ ಹರಳೀಮಠ ಎಂಬ ಕ್ರಿಯಾಶೀಲ ಯುವಕ. ತೀರ್ಥಹಳ್ಳಿ ಹರಳೀಮಠದವರಾದ ಆಸೀಫ್ ಮೊಟ್ಟ ಮೊದಲ ಬಾರಿಗೆ ಅಡಿಕೆ ಬೆಳೆಗಾರರ ಸ್ಥಳಕ್ಕೆ ಅಡಿಕೆ ಸುಲಿಯುವ ಯಂತ್ರ ತೆಗೆದುಕೊಂಡು ಹೋಗಿ ಅಡಿಕೆ ಸುಲಿಯುವ ಮಹತ್ವದ ಕಾರ್ಯವನ್ನು ಸುಲಭಗೊಳಿಸಿದರು.

ಮೊದಲು ಎರಡು ಬೆಲ್ಟ್‌, ಬಳಿಕ ನಾಲ್ಕು, ಎಂಟು, ಈಗ ಹೆಸರಾಂತ ವಿ-ಟೆಕ್‌ ಇಂಜಿನಿಯರ್‌ ಅವರ 16 ಬೆಲ್ಟ್‌ ಅಡಿಕೆ ಸುಲಿಯುವ ಯಂತ್ರಗಳನ್ನು ಹೊಂದಿರುವ ಆಸೀಫ್‌ ಅಡಿಕೆ ಬೆಳೆಗಾರರು ಕರೆದ ಸ್ಥಳಕ್ಕೆ ಹೋಗಿ ಸುಲಿತ ಮುಗಿಸಿ ಕೊಡುತ್ತಾರೆ. ಜನರೇಟರ್‌ ವ್ಯವಸ್ಥೆ ಇರುವುದರಿಂದ ವಿದ್ಯುತ್‌ ವ್ಯವಸ್ಥೆ ಇಲ್ಲದಿದ್ದರೂ ನಿಭಾಯಿಸುತ್ತಾರೆ. ಕಳೆದ ನಾಲ್ಕಾರು ವರ್ಷಗಳಿಂದ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ಹಾಗೂ ಜನಪರವಾಗಿ ನಿಭಾಯಿಸಿರುವುದರಿಂದ ಆಸೀಫ್‌ ಅಡಿಕೆ ಬೆಳೆಗಾರರ ಪಾಲಿನ ಅದರಲ್ಲೂ ದೂರದೂರುಗಳಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ದುಡಿಯುತ್ತಾ ಅಡಿಕೆ ತೋಟ ಹೊಂದಿ ಕಾರ್ಮಿಕರನ್ನು ನಿಭಾಯಿಸಲು ಸಾಧ್ಯವಾಗದ ಬೆಳೆಗಾರರ ಪಾಲಿಗಂತೂ ಅಕ್ಷರಶಃ ಆಪತ್ಬಾಂದವ. ಇದರ ಜೊತೆಗೆ ಆಸೀಫ್‌ ಅತ್ಯಂತ ಕ್ರಿಯಾತ್ಮಕ ಲೈಟಿಂಗ್‌ ಹಾಗೂ ಶಾಮಿಯಾನ, ಡೆಕೋರೇಷನ್‌ ವ್ಯವಸ್ಥೆಗೂ ಹೆಸರಾಗಿದ್ದಾರೆ. ಮೊದಲ ಬಾರಿಗೆ ಅತ್ಯಾಕರ್ಷಕ ಪಗೋಡ ಮಾದರಿಯ ಟೆಂಟ್‌ ವ್ಯವಸ್ಥೆಯನ್ನು ಪರಿಚಯಿಸಿರುವ ಅವರು ಗ್ರಾಹಕರೊಂದಿಗೆ ಅತ್ಯಂತ ಆತ್ಮೀಯವಾಗಿ ವ್ಯವಹರಿಸುತ್ತಾ ಎಲ್ಲಾ ರೀತಿಯ ಬಜೆಟ್‌ ಹೊಂದಿರುವವರಿಗೂ ಕೈಗೆಟುಕುವ ವ್ಯಕ್ತಿಯಾಗಿದ್ದಾರೆ.

ಅಡಿಕೆ ಸುಲಿತದ ಸಮಸ್ಯೆ ಇರುವವರು ಮತ್ತು ಅತ್ಯಂತ ಹೊಸತಾದ ಡೆಕೊರೇಷನ್‌ ಮೈಕ್‌ ವ್ಯವಸ್ಥೆಯನ್ನು ಶುಭ ಸಂದರ್ಭ ಹಾಗೂ ಇನ್ನಿತರ ಸಮಾರಂಭಗಳಿಗೆ ಅಗತ್ಯ ಇರುವವರು ಸಂಪರ್ಕಿಸಬಹುದಾಗಿದೆ. ಅವರ ಸಂಪರ್ಕ ಸಂಖ್ಯೆ 9980005818



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post