ಮೃತ ಅಗಸಾಡಿ ರಮೇಶ್ ಮನೆಗೆ ಕಿಮ್ಮನೆ ಭೇಟಿ

ಸಾವಿನ ಕುರಿತು ಗ್ರಾಮದಲ್ಲಿ ವ್ಯಾಪಕ ಅನುಮಾನ
ಗೃಹಸಚಿವರ ಹತ್ತಿರ ಸಂಬಂಧಿಯಾದರೂ ಸಾಂತ್ವಾನ ಏಕಿಲ್ಲ…?
ಅನಾತವಾಗಿ ಬಿದ್ದಿರುವ ಪ್ರಮುಖ ಸಾಕ್ಷ್ಯ..!
ಪೊಲೀಸರಿಂದ ಕರ್ತವ್ಯ ಲೋಪ…?
ಮೃತ ರಮೇಶ್‌ ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸುತ್ತಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಗೃಹಸಚಿವ ಆರಗ ಜ್ಞಾನೇಂದ್ರರ ಗುಡ್ಡೇಕೊಪ್ಪ ನಿವಾಸದ ಸಮೀಪದ ಅಗಸಾಡಿ ರಮೇಶ್‌ (55) ಅಸಹಜ ಎಂಬ ಅನುಮಾನವಿದ್ದು ಇದರ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಆಗ್ರಹಿಸಿದ್ದಾರೆ.

ರಮೇಶ್‌ನದ್ದು ಕೊಲೆ ಎಂಬ ಅಭಿಪ್ರಾಯ ಗ್ರಾಮಸ್ಥರಲ್ಲಿ ಕೇಳಿ ಬರುತ್ತಿದೆ. ಅಲ್ಲದೇ ಆತ ಅಂತಿಮವಾಗಿ ದೊರಕಿದ ಸ್ಥಳದಲ್ಲೂ ಕೂಡ ಸಾವಿಗೆ ಕಾರಣವಾಗಬಹುದಾದ ಅಂಶಗಳು ಕಂಡು ಬಂದಿಲ್ಲ. ಬೇರೆ ಕಡೆ ಮಾರಣಾಂತಿಕ ಹಲ್ಲೆ ನಡೆಸಿ ಕುಟ್ರ ಸೇತುವೆ ಬಳಿ ಗದ್ದೆಯೊಂದರಲ್ಲಿ ಆತನನ್ನು ಮಲಗಿಸಿ ಪರಾರಿಯಾದಂತಿದೆ. ಆತ ಕಂಡು ಬಂದ ಜಾಗದಲ್ಲಿ ಆತನದ್ದು ಎಂದು ಹೇಳಲಾಗುತ್ತಿರುವ ಚಪ್ಪಲಿ ಮತ್ತು ಟವೆಲ್‌ ಈಗಲೂ ಅನಾತವಾಗಿ ಬಿದ್ದಿದೆ. ಇದು ನಿಸ್ಸಂಶಯವಾಗಿ ಪೊಲೀಸರ ಕರ್ತವ್ಯ ಲೋಪವಾಗಿದೆ. ಇವು ಪ್ರಮುಖ ಸಾಕ್ಷಿಯಾಗುವ ಸಾಧ್ಯತೆ ಇತ್ತು ಎಂದವರು ಹೇಳಿದ್ದಾರೆ.

ಪ್ರಮುಖ ಸಾಕ್ಷಿಯಾಗಬಹುದಾದ ಚಪ್ಪಲಿ, ಟವೆಲ್

ಗ್ರಾಮಸ್ತರಲ್ಲಿ ಕೂಡ ಈತನ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದೆ. ಕೊನೆಕ್ಷಣದಲ್ಲಿ ಕಂಡವರ ಪ್ರಕಾರ ಆತನ ತಲೆಗೆ ಹೊಡೆತ ಬಿದ್ದಿದ್ದು ರಕ್ತ ಸುರಿಯುತ್ತಿತ್ತು. ಆದರೆ ತನ್ನ ಪರಿಸ್ಥಿತಿಯ ಕಾರಣವನ್ನು ಹೇಳಲಾಗದಷ್ಟು ರಮೇಶ್‌ ಜರ್ಜರಿತನಾಗಿದ್ದ ಎಂದು ಹೇಳಿದ್ದಾರೆ. ಮೃತನ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬದವರೂ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಗಮನಿಸಬೇಕಾದ ಸಂಗತಿ ಎಂದರೆ ಕುಟುಂಬದ ಪರವಾಗಿ ಇಲ್ಲಿಯ ತನಕ ಕೊಲೆ ಅಥವಾ ಅಸಹಜ ಸಾವು ಎಂದು ದೂರು ಸಲ್ಲಿಕೆಯಾಗಿಲ್ಲ. ಈ ಘಟನೆ ನಡೆದಿರುವುದು ಅಕ್ಟೋಬರ್‌ 14ರ ಶುಕ್ರವಾರ ರಾತ್ರಿ ಬಾಳೆಕೋಡ್ಲು -ಕುಟ್ರ ವಿಶ್ವಾಸ್‌ ಚಿಕನ್‌ ಸ್ಟಾಲ್‌ ಮುಂಭಾಗದಲ್ಲಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ರಮೇಶ್‌ ಅಂತಿಮವಾಗಿ ಸಿಕ್ಕ ಸ್ಥಳದಲ್ಲಿ ಕಿಮ್ಮನೆ

ಕಿಮ್ಮನೆ ರತ್ನಾಕರ್‌ ಮೃತರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖಂಡರಾದ ಅಮ್ರಪಾಲಿ ಸುರೇಶ್‌, ಮಂಗಳ ಗೋಪಿ, ಅಮರನಾಥ ಶೆಟ್ಟಿ, ಆದರ್ಶ ಹುಂಚದಕಟ್ಟೆ, ಡಿ.ಎಸ್.‌ ವಿಶ್ವನಾಥ ಶೆಟ್ಟಿ, ವಿನಾಯಕ ಹೊದಲ ಇನ್ನಿತರರು ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post