ಸಾರ್ವಜನಿಕ ಗಣೇಶೋತ್ಸವದ ಜನೋಪಯೋಗಿ ಮಹತ್ಕಾರ್ಯ

ನೇತಾಜಿ ಯುವಕ ಸಂಘದ ಶ್ಲಾಘನೀಯ ಕಾರ್ಯ
1.5 ಲಕ್ಷ ಮೊತ್ತದ ಹೈಮಾಸ್ಕ್‌ ಬೀದಿದೀಪ ಕೊಡುಗೆ

ತೀರ್ಥಹಳ್ಳಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ತಾಲ್ಲೂಕಿನಾದ್ಯಂತ ಅಂದಾಜು ಎರಡು ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕೆ ಹಬ್ಬ ಸಾಕ್ಷಿಯಾದರೆ ಪಟ್ಟಣದಲ್ಲಿ ಗೊಂದಲವು ಸೃಷ್ಟಿಸಿತ್ತು. ದೊಡ್ಡ ಪ್ರಮಾಣದ ವ್ಯವಹಾರ ನಡೆದಿದ್ದರೂ ಸಾರ್ವಜನಿಕರಿಗೆ ಉಪಯೋಗವಾಗುವ ಕೆಲವು ಕಾರ್ಯಕ್ರಮಗಳು ಮೆಚ್ಚುಗೆ ಪಡೆದಿವೆ. ಅಂತಹದ್ದರಲ್ಲಿ ಒಂದು ತೀರ್ಥಹಳ್ಳಿ ಪಟ್ಟಣದ ಯಡೇಹಳ್ಳಿಕರೆಯ ನೇತಾಜಿ ಯುವಕ ಸಂಘದ ಗಣೇಶೋತ್ಸವ.

75ನೇ ವರ್ಷ ಸ್ವಾತಂತ್ರ್ಯೋತ್ಸವ ಹಾಗೂ ಅದ್ದೂರಿ ಗಣೇಶೋತ್ಸವ ಆಚರಣೆ ಮಾಡಿರುವ ನೇತಾಜಿ ಯುವಕ ಸಂಘದಲ್ಲಿ ಉಳಿದಿರುವ ಹಣಗಳ ದುರ್ಬಳಕೆ ಆಗದೆ ಜನೋಪಯೋಗಕ್ಕೆ ಮೀಸಲಿರಿಸಿದ್ದಾರೆ. ಉಳಿದಿರುವ ಹಣದಿಂದ ಸಾರ್ವಜನಿಕರಿಗೆ ಉಪಯೋಗವಾಗುವ ಏನನ್ನಾದರೂ ಮಾಡಬೇಕೆಂಬ ಹಂಬಲಕ್ಕೆ ಸ್ಥಳೀಯರು ಕೈಜೋಡಿಸಿದ್ದಾರೆ. ಹಣಕ್ಕೆ ಹಣ ಸೇರಿ ಸುಮಾರು ಒಂದೂವರೆ ಲಕ್ಷ ಮೊತ್ತದಲ್ಲಿ ಹೈಮಾಸ್ಕ್‌ ದೀಪ ಅಳವಡಿಸಿದ್ದಾರೆ. ಕತ್ತಲಿಂದ ಕೂಡಿದ್ದ ಯಡೇಹಳ್ಳಿ ವೃತ್ತ ಇದೀಗ ಬೆಳಕಿನಿಂದ ಕಂಗೊಳಿಸುವಂತಾಗಿದೆ.

ಯುವಕರಿಗೆ ಬೆನ್ನುತಟ್ಟಿ ಸಹಾಯ ಮಾಡಿ ಸ್ಥಳೀಯರಾದ ಜಯರಾಜ್‌ ಶೆಟ್ಟಿ ಯಡೇಹಳ್ಳಿಕೆರೆ ವೃತ್ತದಲ್ಲಿ ಅಳವಡಿಸಿದರುವ 1.5 ಲಕ್ಷ ವೆಚ್ಚದ ಬೀದಿದೀಪ ಉದ್ಘಾಟಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಗೀತಾ ಶೆಟ್ಟಿ, ಚಂದುವಳ್ಳಿ ಸೋಮಶೇಖರ್‌, ಪಟ್ಟಣ ಪಂಚಾಯಿತಿ ಸದಸ್ಯ ದಯಾನಂದ ಸಾಲಿಯಾನ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಫಿ, ಪರ್ವೀನ್ ಗೌಸ್, ಮಂಜುನಾಥ ವೈ.ಬಿ., ಪ್ರಮುಖರಾದ ಬಾಲರಾಜ್, ಹರ್ಷ ಸೇರಿದಂತೆ ಸಂಘದ ಸರ್ವ ಸದಸ್ಯರು ಹಾಗೂ ಸ್ಥಳೀಯರು ಹಾಜರಿದ್ದರು. ನೇತಾಜಿ ಯುವಕ ಸಂಘದ ಕಾರ್ಯಕರ್ತ ವಿಶ್ವನಾಥ ಗಾಣಿಗ ಮೋದಿ ಪ್ರಾಸ್ತಾವಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post