ಶಿಕ್ಷಣ ಎಲ್ಲಾ ಜ್ಞಾನಶಾಖೆಯ ತಾಯಿ

ಸಿದ್ದಾಂತದ ಚೌಕಟ್ಟಿನ ಸಾಹಿತ್ಯ ಕರಪತ್ರದಂತೆ
ಸಿರಿತನಕ್ಕೂ, ಐಚ್ಚಿಕ ಬಡತನಕ್ಕೂ ಹೋಲಿಕೆ ಬೇಡ
ಭಾವಸ್ಪಂದನೆಯಿಂದ ಸಂವೇದನೆ ಅರಳುತ್ತದೆ-ಅರವಿಂದ ಚೊಕ್ಕಾಡಿ

ಶೈಕ್ಷಣಿಕ ವ್ಯವಸ್ಥೆ ಸುಧಾರಣೆಯಾಗಬೇಕು. ಅವೈಜ್ಞಾನಿಕ ಮೌಲ್ಯಮಾಪನದಿಂದ ಜ್ಞಾನವರ್ಧನೆಯ ಪ್ರಸರಣ ಕಡಿಮೆಯಾಗುತ್ತಿದೆ. ಓಎಂಆರ್ ಪದ್ದತಿಯಿಂದ ಬರವಣಿಗೆ ಹಾದಿ ತಪ್ಪಿದೆ. ವಾಕ್ಯ ರಚನೆಯ ಉತ್ತರಪತ್ರಿಕೆ ಬರಬೇಕು. ಅಂಕಗಳಿಕೆ ಶಿಕ್ಷಣವಲ್ಲ.

ಉತ್ತಮವಾದ ಶಿಕ್ಷಣ ಪಡೆದರೆ ಜ್ಞಾನ ಹೆಚ್ಚಾಗುತ್ತದೆ. ಎಲ್ಲಾ ವಿಷಯಗಳನ್ನು ಒಳಗೊಂಡ ಶಿಕ್ಷಣ ಜ್ಞಾನದ ತಾಯಿ. ಚದುರಿದ ಸಾಹಿತ್ಯವನ್ನು ಒಟ್ಟುಗೂಡಿಸುವ ಅನಿವಾರ್ಯತೆ ಇದೆ. ಸಾಹಿತಿಗಳ ನಡುವಿನ ಪೈಪೋಟಿಯಿಂದ ಸಾಹಿತ್ಯ ಬಡವಾಗುತ್ತಿದೆ. ಜನಸಾಮಾನ್ಯರ ವರೆಗೆ ತಲುಪುತ್ತಿಲ್ಲ. ಜನರನ್ನು ಒಳಗೊಳ್ಳುವ ಸಾಹಿತ್ಯ ರಚನೆಯಾಗಬೇಕು. ನವೋದಯದಲ್ಲಿ ನಿರ್ಮಾಣವಾಗಿರುವ ಸಾಹಿತ್ಯವೇ ಹೆಚ್ಚಿದೆ. ಬಂಡಾಯ, ದಲಿತ, ಪ್ರಗತಿಶೀಲ ತೀಷ್ಣವಾದ ವಿಮರ್ಶೆಗೆ ಒಳಪಡಿಸಿದೆ. ವರ್ತಮಾನದ ಸಾಹಿತ್ಯ ಎಲ್ಲವನ್ನು, ಎಲ್ಲರನ್ನು ಒಳಗೊಳ್ಳಬೇಕು ಎಂದು ತೀರ್ಥಹಳ್ಳಿಯ ಬಂಟರ ಭವನದಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಒಳಗೊಳ್ಳುವ ಸಾಹಿತ್ಯ ಕುರಿತು ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿದರು.

ಪರಿಸರ, ಪ್ರಾಣಿ, ಪಕ್ಷಿ, ಜೀವ ಸಂಕಲಗಳ ಒಳಗೊಳ್ಳುವಿಕೆ ಇಲ್ಲದಿದ್ದಾಗ ಸಂವೇದನಶೀಲತೆ ಮೂಡುವುದಿಲ್ಲ. ಒಂದು ಸಿದ್ದಾಂತದ ಆದಾರದ ಮೇಲೆ ಸಾಹಿತ್ಯ ರಚನೆಯಾದರೆ ಅದೊಂದು ಬಣದ ಕರಪತ್ರವಾಗಿ ಕಾಣಿಸಿಕೊಳ್ಳುತ್ತದೆ. ಮಾಕ್ಸ್‌ ವಾದ ಅನ್ಯಾಯವನ್ನು ಖಂಡಿಸುವುದೇ ಆಗಿದೆ. ಸಮಾಜದಲ್ಲಿ ಶೋಷಿತರ ಪರವಾಗಿ ಸ್ಪಂದನೆ ಹೆಚ್ಚಿರುವುದಿಲ್ಲ. ಉಳ್ಳವರ ಕಷ್ಟ ಜನಮನ್ನಣೆ ಪಡೆಯುತ್ತದೆ. ಭಾವನಾತ್ಮಕವಾಗಿ ಆಗರ್ಭ ಶ್ರೀಮಂತ ಕೂಡ ಸಾವಿನ ಅಂಚಿನಲ್ಲಿ ಒಂಟಿತನ ಅನುಭವಿಸುತ್ತಾನೆ. ದ್ರೌಪದಿಯ ವಸ್ತ್ರಾಪಹರಣ ರಾಣಿ ಎಂಬ ಕಾರಣಕ್ಕೆ ಸುದ್ದಿಯಾಗಿದೆ. ಸಮಾಜದಲ್ಲಿ ಇಂತಹ ಘಟನೆ ಅನೇಕ ನಡೆದಿರಬಹುದು. ಬಡತನಕ್ಕೆ ಸ್ಪಂದನೆ ಹೆಚ್ಚಾಗಿರುವುದಿಲ್ಲ. ಶ್ರೀಮಂತರ ಕಷ್ಟಗಳು ಮಾತ್ರ ಹೀಗಾಯ್ತಲ್ಲ ಎಂಬ ನೋವು ಹೆಚ್ಚಿರುತ್ತದೆ ಎಂದರು.

ಇತಿಹಾಸ ಗಮನಿಸಿದಾಗ ಬಲಿಷ್ಠ ಸಾಮಾಜ್ಯಗಳಲ್ಲಿ ಜಾತಿಯತೆ ತೀಷ್ಣತೆ ಇದೆ. ಕಾಡನ್ನು ನಂಬಿ ಬದುಕಿದ ಸಾಮ್ರಾಜ್ಯ ಜಾತಿ ವ್ಯವಸ್ಥೆಯ ಹೊರತಾಗಿದೆ. ನಾವು ಈಗ ಅನಿಷ್ಟ ಎನ್ನುವುದೆಲ್ಲ ಹಿಂದೆ ಶಿಷ್ಠವಾಗಿತ್ತು. ದ್ರಾವಿಡ ಭಾಷೆ ಸ್ವಭಾವ ನಾಜೂಕಾಗಿದ್ದು ಹೇಳುವ ಅರ್ಥ, ದಾಟಿ, ಆಯಾಮ ಕೂಡ ಏನನ್ನೋ ಹೇಳಿಬಿಡುತ್ತದೆ. ಭಾಷಾ ಪಠ್ಯ ಭೋಧನೆ ಮಾಡುವಾಗ ಇವುಗಳ ಸೂಕ್ಷ್ಮ ಸಂವೇದನೆ ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟಿಸಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಹಸಿವು, ಆರೋಗ್ಯ, ಶಿಕ್ಷಣ ಪ್ರಕೃತಿಯ ಸೃಷ್ಠಿ. ಧರ್ಮ, ಆಚಾರ, ವಿಚಾರ ಮನುಷ್ಯ ಕಂಡುಕೊಂಡವು. ಗಾಂಧಿಯ ಅಹಿಂಸಾ ಮಾರ್ಗ ಭಾರತದ ಭವಿಷ್ಯಕ್ಕೂ ಬುನಾದಿ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಲೋಪ ಅನಾಹುತಕ್ಕೆ ದಾರಿಯಾಗಲಿದೆ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ಪ್ರೇಮಿ ಸುಚರಿತಾ ಚಂದ್ರ, ಚಿಂತಕ ನೆಂಪೆ ದೇವರಾಜ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post