ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ

ಸಾಮಾನ್ಯರಿಗೆ ಕಾನೂನಿನ ಕುಣಿಕೆ
ಪ್ರಭಾವಿಗಳಿಗೆ ಶ್ರೀರಕ್ಷೆ : ಇದೇನು ಇಬ್ಬಗೆಯ ನೀತಿ
ಸ್ವಾಮೀಜಿ ವಿರುದ್ದ ಕೇಸ್ ಆದ್ರೆ ರಾಜಕೀಯ ದುರುದ್ದೇಶ
ನಮ್ಮನೆ ಹೆಣ್ಣು ಮಕ್ಕಳಿಗೂ ಇದೇ ಶಿಕ್ಷೆ...

ಭಾರತಕ್ಕೆ ಬ್ರಿಟೀಷರಿಂದ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದಿದೆ. ಇನ್ನೂ ಕೂಡ ಆತಂರಿಕ ಸ್ವಾತಂತ್ರ್ಯ ಮಗ್ಗಲು ಮುಳ್ಳಾಗಿ ಆಗಾಗ್ಗೆ ಕಾಡುತ್ತದೆ. ಜನಜೀವನದ ಮೇಲಾದ ವರ್ಗೀಕರಣ ಸಮಸ್ಯೆಗಳ ಆಗರದಂತಿದೆ. ವಿವಿಐಪಿ, ಪ್ರಭಾವಿ, ಮಧ್ಯಮ, ಬಡವ ಎಂಬ ವರ್ಗೀಕರಣ ಆಡಳಿತದಲ್ಲಿಯೂ ಸಾಕ್ಷಿಪ್ರಜ್ಞೆಯಾಗಿ ಉಳಿದೆ. ಆರ್ಥಿಕ ಸಮಾನತೆ ಇಲ್ಲದ ಕಾರಣದಿಂದ ಸಾಮಾಜಿಕ ಭದ್ರಯೆ ನೆಲಕಚ್ಚಿದೆ. ಇದಕ್ಕೆ ಸಾಕ್ಷಿಯಾಗಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ‌‌ ಶ್ರೀಗಳ ಮೇಲೆ ದಾಖಲಾದ ಫೋಕ್ಸೋ ಕಾಯ್ದೆ ಪ್ರಕರಣ ವಿಶ್ವಕ್ಕೆ ಮತ್ತೊಮ್ಮೆ ತೋರಿಸಿಕೊಟ್ಟಿದೆ.

ಆರೋಪ ಪಟ್ಟಿ ಬಿದ್ದಮೇಲೆ ಸಾಮಾನ್ಯ ಕೂಡ ಪ್ರಕರಣ ಮುಚ್ಚುವ ಪ್ರಯತ್ನ ನಡೆಸುವುದು ಸಹಜ. ಅಂತಹದ್ದರಲ್ಲಿ ರಾಜ್ಯದ ಪ್ರಭಾವಿ ಶ್ರೀಗಳು ಮುಚ್ಚುವ ಸಾಧ್ಯತೆ ಹೆಚ್ಚಿದೆ. ಸುದ್ದಿಗೋಷ್ಟಿಗಳನ್ನು ಮಾಡುವ ಸ್ವಾಮೀಜಿಯನ್ನು ಪೊಲೀಸರು ಯಾಕೆ ಬಂದಿಸಿಲ್ಲ. ಅಥವಾ ಪೊಲೀಸರಿಗೆ ಮಾತ್ರ ಕಾಣಿಸಿಲ್ಲವೋ ಅಥವಾ ಸಿಕ್ಕಿಲ್ಲವೋ... ಓರ್ವ ಸಾಮಾನ್ಯ ವ್ಯಕ್ತಿ ಆರೋಪಿಯಾಗುತ್ತಿದ್ದಂತೆ ಸೆರೆಮನೆಗೆ ತಳ್ಳುವ ಪ್ರಕರಣ ವೀಕ್ ಆಗಿದ್ದು ಹೇಗೆ. ಪೊಲೀಸರು ಇಂತಹ ಪ್ರಕರಣವನ್ನು ತಾಳೆ ಹಾಕುತ್ತಿರುವುದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಚರ್ಚಿತ ವಿಷಯವಾಗಿದೆ.

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯವನ್ನು ಪ್ರಭಾವಿಗಳು ಮಾಡಿದರೆ ಒಂದು ಸಾಮಾನ್ಯರು ಮಾಡಿದರೆ ಇನ್ನೊಂದು ಆಗುತ್ತದೆಯೋ. ಸ್ವಾಮೀಜಿಯ ವಯಸ್ಸಿನ ಆಧಾರ ಇಟ್ಟುಕೊಂಡು ದುರುದ್ದೇಶ ಎಂದು ಸಾಭೀತು ಮಾಡಲಾಗಿದೆಯೋ. ಅಥವಾ ರಾಜಕೀಯ ದುರುದ್ದೇಶವೋ ಇನ್ಯಾವುದೋ ಕಾರಣ ಇರಬಹುದು. ಭಾರತ ಪ್ರಜಾಪ್ರಭುತ್ವದ ಆಧಾರದ ಮೇಲೆ ನಿಂತಿದ್ದರೂ ಇಂತಹ ಪ್ರಕರಣಗಳು ಪ್ರಭುತ್ವವನ್ನೇ ತಲೆಕೆಳಗಾಗಿಸುವಷ್ಟು ಪ್ರಭಲವಾಗುತ್ತಿರುವುದು ದುರಂತವೇ ಸರಿ.

ಕುಟುಂಬ, ಸಮಾಜ, ಸಮುದಾಯದ ಒತ್ತಡದಿಂದ ಶೋಷಣೆಗೆ ಒಳಗಾದವರು ಇನ್ನಷ್ಟು ಖಿನ್ನತೆಗೆ ತಲುಪಬೇಕಾಗುತ್ತದೆ. ಸಾಕ್ಷಿ ನಾಶ ಮಾಡುವುದನ್ನು ತಡೆಯುವುದು ಆರಕ್ಷಕ ಇಲಾಖೆ ಮತ್ತು ಜನರು ನಂಬಿಕೆ ಇಟ್ಟಿರುವ ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಇಲ್ಲದಿದ್ದರು ನಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ಇಂತಹ ದೌರ್ಜನ್ಯ ನಡೆದಾಗ ಪ್ರಶ್ನಿಸದಂತಹ ಸ್ಥಿತಿಗೆ ತಲುಪಬೇಕಾಗುತ್ತದೆ.

ಒಡನಾಡಿ‌ ಸಂಸ್ಥೆ ಮಾಡಿದ ಆರೋಪ ಸಾಭೀತಾದರೆ ಸ್ವಾಮೀಜಿ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಶಿಕ್ಷೆಯಾಗಲಿ. ಇಲ್ಲವಾದಲ್ಲಿ ಪಿತೂರಿ ನಡೆಸಿದವರಿಗೆ ಇನ್ನೆಂದೂ ಇಂತಹ ಆರೋಪ ಮಾಡದಷ್ಟು ಶಾಸ್ತಿಯಾಗಲಿ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post