ಗುಮ್ಮಿ ನೀರು ಕುಡಿದ ಆರಗ ಶ್ರೀಮಂತರಾಗಿದ್ದು ಹೇಗೆ...?

ಆರಗ ಮೇಲೆ ಮುಗಿಬಿದ್ದ ಕಿಮ್ಮನೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರದ ಘನತೆ ಕಾಪಾಡಿ
50 ಕೋಟಿ ಸೈಟ್ ಬೇಕೆಂದು ಹಠ ಹಿಡಿದ ಆರಗ
ಸುಪ್ರೀಂ ಕೋರ್ಟ್ ಚಾಟಿ
ತೀರ್ಥಹಳ್ಳಿ ಸುತ್ತಮುತ್ತ ಬೇನಾಮಿ ಆಸ್ತಿ- ಕಿಮ್ಮನೆ

ಸ್ವಸಹಾಯ ಸಂಘಗಳಿಂದ ವರಮಹಾಲಕ್ಷ್ಮೀ ವ್ರತ ಕಾರ್ಯಕ್ರಮ ಎಂಬ ಆಹ್ವಾನ ನೀಡಲಾಗಿತ್ತು. ಸಭಾಂಗಣಕ್ಕೆ ಆಗಮಿಸಿದ ನಂತರ ಬಿಜೆಪಿ ಭಾವುಟ ಹಾರಿಸಲಾಗಿದೆ. ಬಿಜೆಪಿ ಪ್ರಾಯೋಜಿತದ ವರಮಹಾಲಕ್ಷ್ಮೀ ವ್ರತ ಆಚರಣೆಗೆ ಅಭ್ಯಂತ ಇಲ್ಲ. ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ 4 ಸಾವಿರ ಮಹಿಳೆಯರಿಗೆ ಬೆಳ್ಳಿಯ ನಾಣ್ಯ, ಸೀರೆ, ಒಂದು ಸಾವಿರ ರೂಪಾಯಿ ಹಂಚಿಕೆ ಮಾಡಿದ್ದಾರೆ. ಚುನಾವಣೆಗೆ ತಯಾರಿ ನಡೆಸಿರುವ ಆರಗ ಜ್ಞಾನೇಂದ್ರ ಕ್ಷೇತ್ರದ ಜನತೆಗೆ ಹಂಚಲು ಒಂದು ಸಾವಿರ ಮೌಲ್ಯದ 60 ಸಾವಿರ ಬೆಳ್ಳಿಯ ನಾಣ್ಯ ಖರೀದಿಸಿದ್ದಾರೆ. ಚುನಾವಣೆಯ ಸಂದರ್ಭ ಚಿನ್ನದ ನಾಣ್ಯ ಹಂಚುವ ಸಾಮರ್ಥ್ಯ ಆರಗ ಜ್ಞಾನೇಂದ್ರ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಕಿಮ್ಮನೆ ಜಮೀನ್ದಾರ ಕುಟುಂಬದ ಕುಡಿ. ಹುಟ್ಟುನಿಂದ ಶ್ರೀಮಂತರು. ಚಿನ್ನದ ಒಳಲೆಯಲ್ಲಿ ಹಾಲು ಕುಡಿದು ಬೆಳೆದವರು ಎಂದು ಟೀಕೆ ಮಾಡುತ್ತಿದ್ದ ಆರಗ ಜ್ಞಾನೇಂದ್ರರ ಹಣಕ್ಕಾಗಿ ಹಪಹಪಿಸುತ್ತಿದ್ದಾರೆ. ತಿಂಗಳಿಗೆ ವಿವಿಧ ಮೂಲಗಳಿಂದ 6 ಕೋಟಿ ಆದಾಯ ಹೊಂದಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ 50 ಕೋಟಿ ಬೆಲೆಬಾಳುವ ನಿವೇಶನಕ್ಕೆ ಡಿಮ್ಯಾಂಡ್‌ ಹಾಕಿದ್ದು ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ. ಬಡವರಿಗಾಗಿ ಬದುಕಿದವನು ಎನ್ನುವ ಆರಗ ಸರ್ಕಾರದ ಮೀಸಲಾತಿಯಂತೆ 15 ಕೋಟಿ ನಿವೇಶನ ಹೊಂದಿದ್ದು ಪರಿವರ್ತನೆಗೆ ಬೇಡಿಕೆ ಇಟ್ಟು ತೀರ್ಥಹಳ್ಳಿ ಕ್ಷೇತ್ರದ ಘನತೆ ಕಳೆಯುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ, ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಪ್ರತಿನಿಧಿಸುವ ಕ್ಷೇತ್ರದ ಗೌರವ ಕಳೆದಿದ್ದಾರೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ತೀರ್ಥಹಳ್ಳಿ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿದರು.

ನಾನು ಬಡವ… ನಾನು ಬಡವ… ಎನ್ನುವ ಮೂಲಕ ಗುಮ್ಮಿ ನೀರು ಕುಡಿದು, ಗುಡಿಸಲು ವಾಸದ ಬಡತನ ಅನುಭವಿಸಿದ ವ್ಯಕ್ತಿ ಬಡವರ ಪರವಾಗಿ ಕೆಲಸ ಮಾಡುವುದನ್ನು ಮರೆತಿದ್ದಾರೆ. ಪಟ್ಟಣದಲ್ಲಿ 1500, ತಾಲ್ಲೂಕಿನಾದ್ಯಂತ ಸಾವಿರಾರು ಕುಟುಂಬಗಳಿಗೆ ನಿವೇಶನ, ಮನೆಗಳಿಲ್ಲ. ಅವರಿಗಾಗಿ ಹೋರಾಡುವ ಬದಲು ಹಣ ಮಾಡಲು ನಿಂತಿದ್ದಾರೆ. ಗೃಹಸಚಿವರ 50 ಕೋಟಿ ಲಾಭಿಗೆ ಇಬ್ಬರು ಅಧಿಕಾರಿಗಳು ಮನೆಗೆ ಸೇರಬೇಕಿದೆ. 10 ವರ್ಷ ಅವಧಿಯ ಶಾಸಕ, ಸಚಿವನಾಗಿದ್ದರು ಇಲ್ಲಿಯವರೆಗೆ ನಿವೇಶನ ಪಡೆಯಲಿಲ್ಲ. ಕ್ಷೇತ್ರದಲ್ಲಿ ಸಾವಿರಾರು ಕುಟುಂಬಗಳಿಗೆ ನಿವೇಶನ, ಮನೆ ಇಲ್ಲ. ಅವರ ಪರವಾಗಿ ಹೋರಾಟ ಮಾಡುವ ಬದಲು ಆಕ್ಷೇಪಿಸದೆ ಪರ್ಯಾಯ ನಿವೇಶನಕ್ಕೆ ಅಂಗಲಾಚಿದ್ದಾರೆ ಎಂದು ಕುಟುಕಿದರು.

ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 192(ಎ) ಜಾರಿಗೆ ತಂದಿದ್ದೇ ಅಂದಿನ ಕಂದಾಯ ಸಚಿವ ಕೆ.ಎಸ್. ಈಶ್ವರಪ್ಪ. ಕುಮಾರಸ್ವಾಮಿ ಅವರ ಜಂಟಿ ಸರ್ಕಾರ ಕೂಸು ರೈತರ, ದುರ್ಭಲರ ಶೋಷಣೆಗೆ ಕಾರಣವಾಗಿತ್ತು. ಇದೀಗ ಬೆನ್ನುತಟ್ಟಿಕೊಳ್ಳುವ ಕೆಲಸ ಆಗುತ್ತಿದೆ. ಕ್ಷೇತ್ರದಲ್ಲಿ ಆರಗ ಬೆಂಬಲಿಗರ ಹೆಸರಿನಲ್ಲಿ ಬೇನಾಮಿ ಆಸ್ತಿಗಳಿವೆ. ಬಡತನ ಎನ್ನುತ್ತಿದ್ದವರಿಗೆ ಹಣದ ದಾಹ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ತಾಲ್ಲೂಕು ವಕ್ತಾರ ಡಿ.ಎಸ್. ವಿಶ್ವನಾಥ ಶೆಟ್ಟಿ, ಐವೈಸಿ (ರಾಷ್ಟ್ರೀಯ ಯುವ ಕಾಂಗ್ರೆಸ್) ವಕ್ತಾರ ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್‌ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಸದಸ್ಯರಾದ, ಗೀತಾ, ಸುಶೀಲ, ಮಂಜುಳಾ, ನಮ್ರತ್‌, ಮುಖಂಡರಾದ ಬಾಳೇಹಳ್ಳಿ ಪ್ರಭಾಕರ್‌, ವಿಲಿಯಂ ಇದ್ದರು.





ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post