ಸೇವಾಭಾರತಿ ಶಾಲೆಗೆ ಸಮಗ್ರ ಪ್ರಶಸ್ತಿ

ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ

ತೀರ್ಥಹಳ್ಳಿ ಪಟ್ಟಣದ ಡಾ|| ಯು.ಆರ್.ಅನಂತಮೂರ್ತಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ನಡೆದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಸೇವಾಭಾರತಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಪಟುಗಳು ಅತ್ಯುತ್ತಮವಾಗಿ ಸ್ಪರ್ಧಿಸಿ, ನಡೆದಂತಹ ಎಲ್ಲಾ ಕ್ರೀಡಾ ವಿಭಾಗದಲ್ಲೂ ಬಹುಮಾನಗಳನ್ನು ಪಡೆಯುವುದರ ಮೂಲಕ “ಸಮಗ್ರ ಪ್ರಶಸ್ತಿ”ಯನ್ನು ಮುಡಿಗೇರಿಸಿಕೊಂಡಿದೆ.

ಅತ್ಯುತ್ತಮವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಇವರಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕರಿಗೆ, ಸಹಕರಿಸಿದ ಶಾಲೆಯ ಶಿಕ್ಷಕ ವೃಂದಕ್ಕೆ ಹಾಗೂ ಪೋಷಕರಿಗೆ ಸೇವಾಭಾರತಿ ವಿದ್ಯಾಕೇಂದ್ರವು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ.

ಬಹುಮಾನಿತರ ವಿವರ :

ಅಥ್ಲೆಟಿಕ್ಸ್ :ಬಾಲಕರ ವಿಭಾಗ

ಅಧೀಶ್ : ಉದ್ದಜಿಗಿತ - ಪ್ರಥಮ, ಎತ್ತರಜಿಗಿತ - ಪ್ರಥಮ, 100ಮೀ ಓಟ–ತೃತೀಯ.

ವಿಶಾಲ್: 200ಮೀ ಓಟ - ಪ್ರಥಮ, ಉದ್ದಜಿಗಿತ - ದ್ವಿತೀಯ.

ಪೃಥ್ವಿ ಬೋಂಸ್ಲೆ : 200ಮೀ ಓಟ - ದ್ವಿತೀಯ.

ಶ್ರೀಹರ್ಷ : 600ಮೀ ಓಟ - ದ್ವಿತೀಯ, ಎತ್ತರಜಿಗಿತ - ದ್ವಿತೀಯ.

ಶ್ರವಂತ : 400ಮೀ ಓಟ - ದ್ವಿತೀಯ

 ಮನೀಷ್ : 400ಮೀ ಓಟ–ತೃತೀಯ

ಬಾಲಕರ ವಿಭಾಗದ ಚಾಂಪಿಯನ್ :ಅಧೀಶ್

ಅಥ್ಲೆಟಿಕ್ಸ್ : ಬಾಲಕಿಯರ ವಿಭಾಗ

ಸಂಹಿತಾರಾವ್ : ಉದ್ದಜಿಗಿತ ಪ್ರಥಮ.

ಪಾವನಿಆರ್. : 200ಮೀ ಓಟ - ಪ್ರಥಮ, ಉದ್ದಜಿಗಿತ - ದ್ವಿತೀಯ.

ಭೂಮಿಕ : 400ಮೀ ಓಟ - ಪ್ರಥಮ. ತಟ್ಟೆಎಸೆತ–ತೃತೀಯ, ಗುಂಡುಎಸೆತ–ತೃತೀಯ.

ವಿಖಿತ ಆರ್.: 600ಮೀ ಓಟ - ದ್ವಿತೀಯ.

ಸೌಜನ್ಯ : 400ಮೀ ಓಟ - ದ್ವಿತೀಯ.

ತನ್ಮಯಿ : 100ಮೀ ಓಟ - ದ್ವಿತೀಯ.

ಕೃತಿ : 200ಮೀ ಓಟ–ತೃತೀಯ

ಐಶ್ವರ್ಯ : ಎತ್ತರಜಿಗಿತ–ತೃತೀಯ.

ಬಾಲಕಿಯರ ವಿಭಾಗದಚಾಂಪಿಯನ್ :ಪಾವನಿ ಆರ್.

ಗುಂಪು ಆಟ :ಬಾಲಕರ ವಿಭಾಗ 

4 x 100 ರೀಲೆ - ವಿಶಾಲ್ ಸಮೃದ್ಧ್, ಶ್ರೀಹರ್ಷ, ಪೃಥಿ ಬೋಂಸ್ಲೆ, ಸ್ಕಂದನ್, (ಆಂಗ್ಲಮಾಧ್ಯಮ - ಪ್ರಥಮ).

4 x 100 ರೀಲೆ -ಅಧೀಶ್, ಗಿರೀಶ್, ಭರತ್, ಶ್ರವಂತ್(ಕನ್ನಡಮಾಧ್ಯಮ- ದ್ವಿತೀಯ).

ವಾಲಿಬಾಲ್ : ಸ್ಕಂದನ್, ಹರ್ಷ, ಅನಿಕೇತನ್, ವಿಶಾಲ್, ಮನೀಶ್, ಸೂರಜ್, ಸುದಿನ್.(ಆಂಗ್ಲ ಮಾಧ್ಯಮ - ದ್ವಿತೀಯ)

ಖೋ-ಖೋ : ಗಿರೀಶ್, ಪ್ರಣವ್, ಶ್ರೇಯಸ್, ಅಭಯ್, ಭರತ್, ಶ್ರವಣ್, ಗೌತಮ್, ಅನಿರುದ್ಧ, ಅನ್ವಿತ್, ಆಕಾಶ್, ಸಾತ್ವಿಕ್, ಹಿಮಾಂಶು. (ಕನ್ನಡ ಮಾಧ್ಯಮ - ದ್ವಿತೀಯ)

ಬಾಲಕಿರ ವಿಭಾಗ :

4 x 100 ರೀಲೆ -ಕೃತಿ, ಪಾವನಿ ಆರ್., ತನ್ಮಯಿ ಭೂಮಿಕ.(ಆಂಗ್ಲಮಾಧ್ಯಮ_ ಪ್ರಥಮ).

4 x 100 ರೀಲೆ -ವಿಖಿತಾ, ಸುಷ್ಮಾ, ಸೌಜನ್ಯ, ಅವನಿ(ಕನ್ನಡಮಾಧ್ಯಮ - ದ್ವಿತೀಯ).

ಕಬ್ಬಡಿ – ಪಾವನಿ ಆರ್. ಭೂಮಿಕಾ, ಕೃತಿ, ಸಾರಿಕಾ, ತನುಶ್ರೀ, ಶಶಿಕಲಾ, ಸಾನಿಧ್ಯ, ತನ್ಮಯಿ, ಸನಿಹ, ಸುರಕ್ಷ

(ಆಂಗ್ಲ ಮಾಧ್ಯಮ - ಪ್ರಥಮ)

ವಾಲಿಬಾಲ್ : ಪಾವನಿ ಆರ್. ಭೂಮಿಕಾ, ಸಾರಿಕಾ, ತನ್ಮಯಿ, ಮನಸ್ವಿ, ಸ್ಪಂದನ, ಪಾವನಿ ಪಿ., ಬೃಂದಾ, ತನುಶ್ರೀ (ಆಂಗ್ಲ ಮಾಧ್ಯಮ - ಪ್ರಥಮ)

ಥ್ರೋಬಾಲ್ : ತನ್ಮಯಿ, ಕೃತಿ, ಪಾವನಿ ಪಿ, ಬೃಂದಾ, ನಾರಾಯಣಿ, ದೀಪ್ರದ, ಲಕ್ಷ್ಮೀ, ಸನಿಹ, ಸುರಕ್ಷಾ, ಶಶಿಕಲಾ, ಸಂಹಿತಾ. (ಆಂಗ್ಲಮಾದ್ಯಮ - ದ್ವಿತೀಯ)

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post