“ಕಪ್ಪು ಜನರ ಸಂಕಷ್ಟಕ್ಕೆ ಮಿಡಿಯದ ಆಡಳಿತ”

ಬ್ರಿಟೀಷ್‌ ಅಧಿಕಾರಿ ಜನರಲ್‌ ಡಯಾರ್‌ನಂತೆ ವರ್ತಿಸುವ ಅವಿನಾಶ್
ದಂಡಾಧಿಕಾರಿಗಳು ಮೌನ ಮುರಿಯುವುದಿಲ್ಲ ಯಾಕೆ
ಸ್ಥಳೀಯ ಸರ್ಕಾರಕ್ಕೆ ಅಪಮಾನ ವರ್ತನೆ ಅಪ್ರಜಾಸತ್ತತೆ -ನಿಶ್ಚಲ್‌ ವಿ ಶೆಟ್ಟಿ
ಬೀದಿಗಿಳಿದ ಮೇಲಿನ ಕುರುವಳ್ಳಿ ಆಡಳಿತರೂಢ ಗ್ರಾ.ಪಂ. ಸದಸ್ಯರು
ಆಡಳಿತ ಪಕ್ಷದ ಸದಸ್ಯ ಕುರುವಳ್ಳಿ ನಾಗರಾಜ್‌ ಕಣ್ಮರೆ
ಗಣಿ & ಭೂ ವಿಜ್ಞಾನ ಅಧಿಕಾರಿಗೆ ಕ್ಲಲುಕಂಬ ಒಡೆಯಲು ಸುಫಾರಿ ಕೊಟ್ಟರ‍್ಯಾ
ರು…?

ಆಡಳಿತಾರೂಢ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಉಪತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಕುರುವಳ್ಳಿ ಬಂಡೆಯಲ್ಲಿ ಸುಮಾರು 5 ರಿಂದ 6 ಸಾವಿರ ಬಂಡೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ರಕ್ಷಣೆ ತಾಲ್ಲೂಕು ದಂಡಾಧಿಕಾರಿಗಳ ಆದ್ಯ ಕರ್ತವ್ಯ. ಆಗಸ್ಟ್‌ 29ರೊಳಗೆ ಬೇಲಿಕಂಬ ತುಂಡರಿಸಿದ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ನಿಶ್ಚಲ್‌ ಜಾದೂಗಾರ್‌ತಿಳಿಸಿದರು.

ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಆಡಳಿತರೂಢ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನೆಯಲ್ಲಿ ಮೇಲಿನ ಕುರುವಳ್ಳಿ ಗ್ರಾಮದ ಸದಸ್ಯ ಕುರುವಳ್ಳಿ ನಾಗರಾಜ್‌ ಗೈರು ಹಾಜರಿ ಎದ್ದು ತೋರುತ್ತಿತ್ತು. ಕುರುವಳ್ಳಿ ನಾಗರಾಜ್‌ ಅನುಪಸ್ಥಿತಿ ಹತ್ತಾರು ಪ್ರಶ್ನೆಗೆ ಅವಕಾಶ ಮಾಡಿಕೊಟ್ಟಿದ್ದು ಕಾರ್ಮಿಕರ, ಗ್ರಾಮಸ್ತರ ಪರವಾಗಿ ಇಲ್ಲ ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಅಲ್ಲದೇ ಸದಸ್ಯರೇ ಆರೋಪಿಸುತ್ತಿರುವಂತೆ ಅಧಿಕಾರಿಗಳ ದರ್ಪವನ್ನು ಪ್ರಶ್ನಿಸುವ ಅಗತ್ಯ ಇಲ್ಲವಾ ಎಂಬುದು ಪ್ರಶ್ನೆಯಾಗಿ ಉಳಿದಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಾನೂನು ಬಾಹಿರ ಅಥವಾ ನಿಯಮ ಉಲ್ಲಂಘನೆಯಾಗಿರುವ ಪ್ರದೇಶದಲ್ಲಿ ಕಲ್ಲು ಗಣಿ ಮಾಡುತ್ತಿದ್ದರು ಪದೇ ಪದೇ ದೂರುಗಳು ದಾಖಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗಣಿ ಅಧಿಕಾಗಳು ದಾಳಿ ಮಾಡುವುದು ತಪ್ಪೇನಿಲ್ಲ. ಹತ್ತಾರು ವರ್ಷಗಳಿಂದ ಬಂಡೆಕರಗಿಸಿ ದೊಡ್ಡವರು ಸಾಕಷ್ಟು ಹಣಗಳಿಕೆ ಮಾಡಿದ್ದಾರೆ. ಒಳಗಿನ ಕಳ್ಳರು ಅಧಿಕಾರಿಗಳಿಗೆ ಒಂದಿಷ್ಟು ಮಾಮೂಲಿ ನೀಡಿ ಬಡವ, ಸಣ್ಣ ಪ್ರಮಾಣದ ಬಂಡೆ ಮಾಡುವ ಕೂಲಿ ಕಾರ್ಮಿಕರ ಮೇಲೆ ಚೂ… ಬಿಡುತ್ತಿದ್ದಾರೆ ಎಂಬ ಆರೋಪಗಳು ಸ್ಥಳೀಯವಾಗಿ ಚಾಲ್ತಿಯಲ್ಲಿದೆ. ಹಾಗಾದರೆ ಮೊನ್ನೆ ಬೇಲಿಕಂಬ ಒಡೆಯಲು ಸುಫಾರಿ ಕೊಟ್ಟವರು ಯಾರು…? ಅವರಿಗೇನು ಲಾಭ ಎಂಬ ಪ್ರಶ್ನೆ ಉದ್ಬವಿಸುತ್ತದೆ.

ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳು ಏಕಾಏಕಿ ಸ್ಥಳೀಯ ಸರ್ಕಾರಕ್ಕೆ ಮಾಹಿತಿ ನೀಡಿದೆ ಕೂಲಿ ಕಾರ್ಮಿಕರು ಶ್ರಮವಹಿಸಿ ದುಡಿದ ದುಡಿಮೆಯನ್ನು ಹಾಳು ಮಾಡುವ ಅಧಿಕಾರ ಕೊಟ್ಟವರು ಯಾರು. ಕಾನೂನು ಬಾಹಿರ, ನಿಯಮ ಉಲ್ಲಂಘನೆಯಾಗಿದ್ದರೆ ನೊಟೀಸ್‌ ನೀಡಬೇಕು. ಇಲ್ಲದಿದ್ದರೆ ಕಂಬಗಳನ್ನು ಸೀಜ್‌ ಮಾಡಿ ದಂಡ ವಿಧಿಸಲಿ. ಎಲ್ಲವನ್ನು ಬಿಟ್ಟು ಬ್ರಿಟೀಷ್‌ ಅಧಿಕಾರಿ ಜನರಲ್‌ ಡಯರ್‌ ವರ್ತನೆಯಂತೆ ದಿನವಿಡಿ ಬೆವರು ಹರಿಸಿ 5 ಅಡಿ ಉದ್ದದ ಬೇಲಿಕಂಬಗಳನ್ನು ಸುತ್ತಿಗೆಯಿಂದ ಎರಡು ಹೋಳು ಮಾಡುವ ಅಧಿಕಾರ ಕೊಟ್ಟವರು ಯಾರು…? ಅಕ್ರಮ ಇದ್ದರೆ ಸರ್ಕಾರದ ಬೊಕ್ಕಸೆಗೆ ಲಾಭವಾಗುವಂತೆ ದಂಡ, ಇನ್ನಿತರ ಕ್ರಮಗಳನ್ನು ವಹಿಸಲಿ. ಬೆಳ್ಳಗೆ, ನೋಡಲು ಚೆಂದವಾಗಿರುವ ಉಳ್ಳವರು ಹಗಲು ರಾತ್ರಿ ದರೋಡೆ ಮಾಡುತ್ತಿದ್ದರು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಕಪ್ಪು, ನೋಡಲು ಅಸಹ್ಯವಾಗಿ, ಹಳೆಯ ಬಟ್ಟೆಗಳನ್ನು ತೊಡುವ ಕಪ್ಪುಜನರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಆಡಳಿತರೂಢ ಸದಸ್ಯರು ತಾಲ್ಲೂಕು ಕಚೇರಿ ಮುಂಭಾಗ ಹಮ್ಮಿಕೊಂಡ ಪ್ರತಿಭಟನಾ ಸಭೆ ಉದ್ದೇಶಿಸಿ ಸದಸ್ಯ ನಿಶ್ಚಲ್‌ ವಿ ಶೆಟ್ಟಿ ಗಂಭೀರ ಆರೋಪಿಸಿದರು.

ತೀರ್ಥಹಳ್ಳಿ ತಹಶೀಲ್ದಾರ್‌, ಕಸಬಾ ರಾಜಸ್ವ ನಿರೀಕ್ಷಕರು, ಮೇಲಿನ ಕುರುವಳ್ಳಿ ಗ್ರಾಮ ಲೆಕ್ಕಾಧಿಕಾರಿಗಳ ಗಮನಕ್ಕೆ ತಾರದೆ ನಿಯಮ ಉಲ್ಲಂಘಿಸಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಅನಕ್ಷರಸ್ತರೇ ಹೆಚ್ಚಿರುವ ಗ್ರಾಮದಲ್ಲಿ ಶ್ರಮಿಕರ ಸಂಖ್ಯೆ ಹೆಚ್ಚಿದೆ. ಶ್ರಮವಹಿಸಿ ದುಡಿಯುವುದು ಬಹಳ ವರ್ಷಗಳಿಂದ ರೂಢಿಯಲ್ಲಿದೆ. ಎಸಿ ರೂಂನಲ್ಲಿ ಕುಳಿತು ಪರರ ಬೆವರ ಹನಿಯನ್ನು ಬೇಡುವುದು ಬ್ರಿಟೀಷ್‌ ಅಧಿಪತ್ಯದ ಸಂಕೇತ. ಭೇಟಿ ಬಚವೋ, ಭೇಟಿ ಪಡಾವೋ ಎಂಬ ಘೋಷಣೆ ಮೊಳಗಿಸುವ ಸರ್ಕಾರಕ್ಕೆ ಬಡ ಕುಟುಂಬದ ಕ್ಲಲು, ಜಲ್ಲಿ ಒಡೆಯುವ ಮಹಿಳೆಯರ ಕಷ್ಟ ಕಾಣಿಸುತ್ತಿಲ್ಲ. ನಿರಂತರ ಪ್ರತಿಭಟನೆಗಳ ಮೂಲಕ ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದು ಕೇಳಿದರೆ ಸರ್ಕಾರ, ತಾಲ್ಲೂಕು ಆಡಳಿತ ನಿರ್ಲಕ್ಷ್ಯ ತೋರುತ್ತಿದೆ. ಪ್ರಜಾಪ್ರಭುತ್ವ ವಿರೋಧಿ ನಡೆ ತೋರಿಸುವ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ನಿಶ್ಚಲ್‌ ಆಗ್ರಹಿಸಿದರು.

ಉಪಾಧ್ಯಕ್ಷ ಹೊರಬೈಲು ಪ್ರಭಾಕರ್ ಮಾತನಾಡಿ, ಬಂಡೆ ಕಾರ್ಮಿಕರು ಕೆಲಸ ಇಲ್ಲದೆ ಗುಳೆ ಹೋಗುತ್ತಿದ್ದಾರೆ. ರಾಜ್ಯದ ವಿವಿಧ ಮೂಲೆಗಳಲ್ಲಿ ಪೂರ್ವಿಕರು ಹೇಳಿಕೊಟ್ಟ ಕಲ್ಲು, ಜಲ್ಲಿ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಎಲ್ಲಾ ದುಡಿಯುವ ಯುವ ಸಮೂಹ ಗುಳೆ ಹೋಗಿದ್ದು, ವಿಶೇಷ ಚೇತನರು, ವೃದ್ದರು ಮಾತ್ರ ಬಂಡೆ ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರ ಮೇಲೆ ಅಧಿಕಾರಿಗಳ ಕೆಟ್ಟ ಕಣ್ಣು ಬಿದ್ದಂತಿದೆ. ಆದರೆ ತಾಲ್ಲೂಕಿನಾದ್ಯಂತ ಮರಳು ದಂಧೆ ಬೇಕಾಬಿಟ್ಟಿ ನಡೆಯುತ್ತಿದ್ದರು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷೆ ಭವ್ಯ ರಾಘವೇಂದ್ರ, ಸದಸ್ಯರಾದ ಯು.ಡಿ. ವೆಂಕಟೇಶ್‌, ಅನಿತಾ ಪ್ರವೀಣ್‌, ಆನಂದ್‌ ಸಿ, ಸುಧಾ ಕೃಷ್ಣಕುಮಾರ್‌ ಮುಂತಾದವರು ಇದ್ದರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post