ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಾದಿಗೆ ಹೈಡ್ರಾಮ

ಅಧ್ಯಕ್ಷರ ಹುದ್ದೆಯಿಂದ ದಾಕ್ಷಾಯಣಿ ಬಾಬಣ್ಣ ವಜಾ
ಅಧ್ಯಕ್ಷೆ ದಾಕ್ಷಾಯಣಿ ಬಾಬಣ್ಣ ವಿರುದ್ದ ಅವಿಶ್ವಾಸ ಮಂಡನೆ
ಅವಿಶ್ವಾಸ ಚುನಾವಣೆ ನಡೆಸಿದ ಎಸಿ ಡೊಡ್ಡನಗೌಡರು
ಅಂಡುಸುಟ್ಟ ಬೆಕ್ಕಿನಂತಾದ ತೆರೆಮರೆಯ ನಾಯಕರು

ವಜಾಗೊಂಡ ಅಧ್ಯಕ್ಷೆ ದಾಕ್ಷಾಯಣಿ ಬಾಬಣ್ಣ

ತೀರ್ಥಹಳ್ಳಿ ತಾಲ್ಲೂಕಿನ 14 ಸದಸ್ಯ ಬಲದ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ದ ಬಹುತೇಕ ಕಾಂಗ್ರೆಸ, ಬಿಜೆಪಿ ಬೆಂಬಲಿಗರು ಅವಿಶ್ವಾಸ ಮಂಡಿಸಿದ ಘಟನೆ ಮಂಗಳವಾರ ನಡೆದಿದೆ. ಸುಮಾರು ಒಂದೂವರೆ ತಿಂಗಳಿನಿಂದ ಬೆಜ್ಜವಳ್ಳಿ ಪಂಚಾಯಿತಿಯಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಕ್ಕೆ ತೆರಬಿದ್ದಿದೆ.

ಈ ಹಿಂದೆ ಪಂಚಾಯಿತಿಯ 12 ಸದಸ್ಯರು ಉಪವಿಭಾಗಾಧಿಕಾರಿ ಮುಂಭಾಗ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಆಗಿನ ಎಸಿ ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗಧಿಗೊಳಿಸಿ ಆದೇಶ ಹೊರಡಿಸಿದ್ದರು. ಆದರೆ ದಿನಾಂಕ ನಿಗಧಿ ಮಾಡುವಾಗ ಉಪವಿಭಾಗಾಧಿಕಾರಿ ಕಾನೂನು ಪಾಲಿಸಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷೆ ದಾಕ್ಷಾಯಣಿ ಬಾಬಣ್ಣ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅಧ್ಯಕ್ಷರ ಕೋರಿಕೆಯನ್ನು ಸಿಂಧುಗೊಳಿಸಿ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು.

ಇದೀಗ ಕೋರ್ಟ್‌ ಅದೇಶದಂತೆ ನೂತನ ಉಪವಿಭಾಗಾಧಿಕಾರಿ ದೊಡ್ಡನಗೌಡರು ಅವಿಶ್ವಾಸ ಮಂಡನೆಗೆ ದಿನಾಂಕ ನಿಗಧಿ ಮಾಡಿದೆ. 13 ಜನ ಸದಸ್ಯರ ಪೈಕಿ ಓರ್ವರು ತಟಸ್ಥ ನಿಲುವು ಹೊಂದಿದ್ದು ಉಳಿದ 12 ಕಾಂಗ್ರೆಸ್‌, ಬಿಜೆಪಿ ಬೆಂಬಲಿತ ಸದಸ್ಯರು ಅವಿಶ್ವಾಸ ಮಂಡಿಸಿದ್ದು, ಅಧ್ಯಕ್ಷರ ಸ್ಥಾನದಿಂದ ದಾಕ್ಷಾಯಣಿ ಬಾಬಣ್ಣ ಅವರನು ವಜಾಗೊಳಿಸಲಾಗಿದೆ.

ರಾಜಕೀಯವಾಗಿ ಸದಸ್ಯರ ವಿಶ್ವಾಸ ಕಳೆದುಕೊಂಡ ದಾಕ್ಷಾಯಣಿ ಬಾಬಣ್ಣ ಅವರನ್ನು ಅಧ್ಯಕ್ಷರಾಗಿ ಮುಂದುವರೆಸುವ ನಿಟ್ಟಿನಲ್ಲಿ ತೆರೆಮರೆಯ ರಾಜಕೀಯ ಬೆಳವಣಿಗೆ ನಡೆದಿತ್ತು. ಕೆಲವು ಬಿಜೆಪಿ ಮುಖಂಡರು ಅಧ್ಯಕ್ಷರ ಪರವಾಗಿ ಬ್ಯಾಟಿಂಗ್‌ ಬೀಸಿದ್ದರು. ಕೋರ್ಟ್‌ ಮೊರೆಹೋಗುವುದಕ್ಕೂ ರಾಜಕೀಯವಾಗಿ ಬೆಂಬಲ ನೀಡಿದ್ದರು. ಆದರೀಗ ಬಹುತೇಕ ಬಿಜೆಪಿ ಸದಸ್ಯರೂ ಅವಿಶ್ವಾಸ ಮಂಡಿಸಿದ್ದು ಬೆಂಬಲಕ್ಕೆ ನಿಂತವರು ಅಂಡುಸುಟ್ಟ ಬೆಕ್ಕಿನಂತಾಗಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post