ತೀರ್ಥಹಳ್ಳಿಯಲ್ಲಿ ರಂಗೇರಿದ ರಾಜಕೀಯ..?

ಬಿಜೆಪಿ ಮಹಿಳಾ ಮೋರ್ಚಾದಿಂದ ವಿಜೃಂಬಣೆಯ ಶ್ರೀ ವರಮಹಾಲಕ್ಷೀ ವ್ರತ
ಹಿಂದೂ ಪೈರ್ ಬ್ರಾಂಡ್‌ ಶ್ರೀಲಕ್ಷೀ ರಾಜಕುಮಾರ್‌ ದಿಕ್ಸೂಚಿ ಭಾಷಣ
ಸಮುದಾಯದ ಓಟಿಗೆ ಸಿದ್ದರಾಮಯ್ಯ ಜೊಲ್ಲು ಸುರಿಸುತ್ತಾರೆ
2500ಕ್ಕೂ ಹೆಚ್ಚು ಮಹಿಳೆಯರಿಗೆ ಲಕ್ಷ್ಮೀ ಬೆಳ್ಳಿ ಪದಕ
500 ರೂಪಾಯಿ, ಸೀರೆಯದ್ದೇ ಗುಮಾನಿ

ವೀರ ಸಾವರ್ಕರ್‌ ಕುಟುಂಬದ ಮೂವರು ಸಹೋದರು ಸ್ವಾತಂತ್ರ್ಯ ಹೋರಾಟಗಾರರು. ಪೀಳಿಗೆ, ಮನೆಯ ಆರ್ಥಿಕತೆ ಉಳಿಸಲು ಪುರುಷರು ಒಬ್ಬರಾದರು ಬೇಕು ಎಂದು ಕೇಳುವ ಅತ್ತಿಗೆ ಪ್ರಶ್ನೆಗೆ ಭಾರತ ಮಾತೆ ತನ್ನ ಸೇವೆಗಾಗಿ ನಮ್ಮ ಮನೆಯ ತೋಟ ಹೂ ಬೇಕು ಎಂದು ಆಯ್ಕೆ ಮಾಡಿಕೊಂಡರೆ ಇದಕ್ಕಿಂತ ಇಚ್ಚಾಶಕ್ತಿ ಬೇರೆನಿದೆ. ಎನ್ನುತ್ತಿದ್ದ ಸಾವರ್ಕರ್‌ ಬ್ರಿಟೀಷರನ್ನು ವಿರೋಧಿಸಿದ ಕಾರಣಕ್ಕೆ 13 ವರ್ಷ ಜೈಲುವಾಸ ಅನುಭವಿಸಿದರು. ಅಂತವರ ವಿರುದ್ದ ಇಂಗ್ಲೀಷರ ಬೂಟು ನೆಕ್ಕಿದವರು, ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್‌ ಬ್ಯಾನರ್‌ ಯಾಕೆ ಹಾಕಿದ್ರಿ ಎನ್ನುವ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಡುವ ಹಗುರ ಮಾತಿಗೆ ಹುರುಳಿಲ್ಲ. ಒಂದು ಸಮುದಾಯದ ಓಟಿಗಾಗಿ ಜೊಲ್ಲು ಸುರಿಸುವವರನ್ನು ಎಲ್ಲಿ ಇಡಬೇಕೋ, ಅಲ್ಲಿಗೆ ಸೀಮಿತಗೊಳಿಸಬೇಕು ಎಂದು ಆರಗ ಕಟು ಟೀಕಿಸಿದರು.

ತೀರ್ಥಹಳ್ಳಿಯ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಶ್ರೀವರಮಹಾಲಕ್ಷ್ಮೀ ವ್ರತಾಚರಣೆ ಕಾರ್ಯಕ್ರಮ ರಾಜಕೀಯವಾಗಿ ದೊಡ್ಡ ಸುದ್ದಿಯಾಗಿದೆ. ಬಿಜೆಪಿ ಚುನಾವಣಾ ಕಾರ್ಯತಂತ್ರ ರೂಪಿಸಿದಂತೆ ಕಾಣಿಸುತ್ತಿದ್ದು ಧಾರ್ಮಿಕ ಕಾರ್ಯಕ್ರಮದ ನೆಪದಲ್ಲಿ ಮಹಿಳೆಯರನ್ನು ಆಕರ್ಷಿಸುವ ಪ್ರಯತ್ನ ನಡೆಸಿದೆ ಎನ್ನಲಾಗುತ್ತಿದೆ. ವರಮಹಾಲಕ್ಷ್ಮೀ ವ್ರತದಲ್ಲಿ ಭಾಗವಹಿಸಿದ ಸುಮಾರು 2,500ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ರೂಪದಲ್ಲಿ ಬೆಳ್ಳಿಯ ಲಕ್ಷ್ಮೀ ಪದಕ, 500 ರೂಪಾಯಿ, ಸೀರೆ, ತೆಂಗಿನಕಾಯಿ, ವೀಳ್ಯ, ಅಡಿಕೆ, ಬಳೆ, ರವಿಕೆ ಬಟ್ಟೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಗೃಹಸಚಿವರು ಮಹಿಳಾ ಮತಬ್ಯಾಂಕ್‌ ಭದ್ರಪಡಿಸಲು ಪ್ರಯತ್ನ ಆರಂಭಿಸಿದ್ದಾರೆ ಎಂಬ ಗುಮಾನಿ ರಾಜಕೀಯವಾಗಿ ಭಾರಿ ಸದ್ದು ಮಾಡಲಾರಂಭಿಸಿದೆ.

ಶುಕ್ರವಾರ ಪಟ್ಟಣದ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ವರಮಹಾಲಕ್ಷ್ಮೀ ವ್ರತಾಚರಣೆ ಕಾರ್ಯಕ್ರಮದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ದೇಶದ ಪ್ರಮುಖ ಹುದ್ದೆಗಳಾದ ರಾಷ್ಟ್ರಪತಿ, ಆರ್ಥಕ ವ್ಯವಸ್ಥೆಯನ್ನು ಸ್ತ್ರೀಯರು ನಿಭಾಯಿಸುತ್ತಿದ್ದಾರೆ. ಗುಡ್ಡಗಾಡಿನ ಕಟ್ಟಕಡೆಯ ಜನಾಂಗದ ಮಹಿಳೆ ದೇಶದ ಪ್ರಥಮ ಪ್ರಜೆಯಾಗುವ ಮೂಲಕ ಅಚ್ಚರಿಯ ಸಂದೇಶ ಮೋದಿ ನೀಡಿದ್ದಾರೆ. ಎಲ್ಲಿ ಸ್ತ್ರೀಯ ಗೌರವ, ಸ್ಥಾನಮಾನ ಹೆಚ್ಚಾಗುತ್ತದೆಯೋ ಅಲ್ಲಿ ಲಕ್ಷ್ಮೀ ಸ್ವರೂಪಿಯಾದ ದೇವತೆಗಳು ನೆಲೆನಿಲ್ಲುತ್ತಾರೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.


ಪುರುಷರಿಗೆ ಸಮಾನವಾಗಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಡುಗೆ ಮನೆಗೆ ಮಾತ್ರ ಸೀಮತಗೊಳ್ಳದೇ ಪ್ರಧಾನಿ ನರೇಂದ್ರ ಮೋದಿ ಭದ್ರತೆಯ ಕಮಾಂಡೊ, ಐಪಿಎಸ್‌, ಐಎಎಸ್‌, ಡಿವೈಎಸ್‌ಪಿ ಮುಂತಾದ ಪ್ರಮುಖ ಹುದ್ದೆಗಳನ್ನು ನಿಭಾಯಿಸುವ ಮಟ್ಟಿಗೆ ಮಹಿಳೆ ಬೆಳೆದುನಿಂತಿದ್ದಾಳೆ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಮಹಿಳೆಯರು ನಿಜವಾದ ಲಕ್ಷ್ಮೀಯರಾಗಿ ಕೈಹಿಡಿದಿದ್ದಾರೆ. ಮಾತೃಶಕ್ತಿಗೆ ಭದ್ರತೆ ನೀಡುವ ಉದ್ದೇಶದಿಂದ ನನ್ನ ಜೀವನದಲ್ಲಿ ಸಂಕಲ್ಪ ಮಾಡಿ ಓಡಾಡುತ್ತಿದ್ದೇನೆ. ಸ್ವಾಭಿಮಾನದ ಬದುಕು ಮಹಿಳೆಯರಿಂದ ಕಲಿತುಕೊಳ್ಳಬೇಕು. ಕೊರೊನಾ ಸಂದರ್ಭದಲ್ಲಿ ಮಹಿಳೆಯರ ಒಡಲು ತುಂಬಲು ಕೇಂದ್ರ ಸರ್ಕಾರ 80 ಕೋಟಿ ಕುಟುಂಬಕ್ಕೆ ಉಚಿತ ಅಕ್ಕಿ, ರಾಗಿ, ಗೋಧಿ ನೀಡಿದ್ದೇವೆ. ಬಾಣಂತಿಯರಿಗಾಗಿ ಯಡಿಯೂರಪ್ಪ ಜಾರಿ ಮಾಡಿದ ಭಾಗ್ಯಲಕ್ಷ್ಮೀ ಯೋಜನೆ, ಉಚಿತ ಸೈಕಲ್‌ ಹೆಣ್ಣುಮಕ್ಕಳ ಜೀವನ ಶೈಲಿ ಬದಲಿಸಿದೆ ಎಂದರು.

‌ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಪೈರ್‌ ಬ್ರಾಂಡ್ ಲಕ್ಷ್ಮೀ ರಾಜ್ಕುಮಾರ್ಮಾತನಾಡಿ, ಕ್ಷಾತ್ರತೇಜ ಉದ್ದೀಪನಗೊಂಡರೆ ಹಿಂದೂ ಸಂಸ್ಕೃತಿ ಜಾಗೃತಗೊಳ್ಳುತ್ತದೆ. ಮೆಕಾಲೆ ಶಿಕ್ಷಣಕ್ಕಿಂತ ಮೊದಲೇ ಭಾರತದ ಮಹಿಳೆಯರು ಅತ್ಯುನ್ನತ ಸ್ಥಾನ ಮಾನ ನಿಭಾಯಿಸಿದ್ದಾರೆ. ಅಂತ ಮಹಿಳೆಯರಲ್ಲಿ ಅಹಲ್ಯಬಾಯಿ ಒಬ್ಬರು. ಸ್ತ್ರೀ ಸೈನ್ಯ ಕಟ್ಟಿ ಬ್ರಿಟೀಷರ ಸೊಕ್ಕು ಮುರಿದಿದ್ದಾರೆ. ಜಾತಿ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವುದನ್ನು ಸಹಿಸುವುದಿಲ್ಲ. ಮನುಸೃತಿಯ ಸ್ತೋತ್ರಗಳ ಅರ್ಥ ತಿಳಿಯದೆ ಪ್ರಜ್ಞಾ ಹೀನರು ಸುಡುವ, ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿದರು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪ ಸುವರ್ಣ, ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷ್ಮೀಪತಿ, ತಾಲ್ಲೂಕು ಅಧ್ಯಕ್ಷೆ ಸವಿತಾ ಶೆಟ್ಟಿ ಇದ್ದರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post