ಥೈಲ್ಯಾಂಡ್ ಪ್ರವಾಸದಲ್ಲಿ ಟಿ.ಕೆ. ರಮೇಶ್ ಶೆಟ್ಟಿ

ಆಗಸ್ಟ್ 20 ರಿಂದ 6 ದಿನದ ವಿದೇಶ ಪ್ರವಾಸ
ಪ್ರಯಾಣ, ಪ್ರವಾಸ ಸುಖಕರವಾಗಿರಲಿ

ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ತಾಲ್ಲೂಕು ಅಧ್ಯಕ್ಷ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿರ್ಗಮಿತ ಅಧ್ಯಕ್ಷ, ನೇರ, ನಿಷ್ಠುರ, ಸಂಕಷ್ಟದ ಸಂದರ್ಭದಲ್ಲಿ ಮಿಡಿಯುವ ಹೃದಯವಂತರಾಗಿರುವ ಪತ್ರಕರ್ತ ಟಿ.ಕೆ. ರಮೇಶ್ ಶೆಟ್ಟಿ ಆಗಸ್ಟ್ 20 ರಿಂದ 6 ದಿನಗಳ ಥೈಲ್ಯಾಂಡ್ ಪ್ರವಾಸಕ್ಕೆ ಸುಖಕರವಾಗಿರಲಿ ಎಂದು ನೆಲದ ಧ್ವನಿ ಬಳಗದ ವತಿಯಿಂದ ಶುಭ ಹಾರೈಕೆಗಳು.

ಟಿ.ಕೆ. ರಮೇಶ್ ಶೆಟ್ಟಿ ಮುಂಗಾರು ಪತ್ರಿಕೆಯ ವಡ್ಡರ್ಸೆ ರಘುರಾಮ ಶೆಟ್ಟರ ಶಿಷ್ಯರಾಗಿ 1985 ರಲ್ಲಿಯೇ ಪತ್ರಕರ್ತರಾಗಿ ಗುರುತಿಸಿಕೊಂಡವರು. ಇವರು ಸಲ್ಲಿಸಿದ ಜೀವಮಾನದ ಸೇವೆಯನ್ನು ಗಮನಿಸಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸನ್ಮಾನಿಸಿ ಗೌರವಿಸಿದೆ.

ಪರಿಸರದ ಮೇಲಾಗುವ ದೌರ್ಜನ್ಯವನ್ನು ಕಟುವಾಗಿ ಕಂಡಿಸುವ ಶೆಟ್ಟರಿಗೆ ಪ್ರಾಣಿ, ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಬೀದಿ ನಾಯಿಗಳನ್ನು ತಮ್ಮ ಪೆಟ್ರೋಲ್ ಬಂಕ್ ನಲ್ಲಿ ಸಾಕುವ ಜೊತೆಗೆ ಅವುಗಳ ಸಂತಾನ ಹರಣ ಚಿಕಿತ್ಸೆಯಂತಹ ವಿಶೇಷ ಕಾಳಜಿ ಅನ್ನು ಅವುಗಳ ಮೇಲೆ ತೋರಿಸುತ್ತಾರೆ. ಕೋಳಿ, ಪಾರಿವಾಳ, ಗುಬ್ಬಿಗಳಿಗೆ ತಾವಿರುವ ಪರಿಸರದ ಸುತ್ತ ಅವಕಾಶ ಕಲ್ಪಿಸುವ ಅವರ ಪ್ರಾಣಿ ಪ್ರೀತಿ ಅನುಕರಣೀಯ. 

ಶೆಟ್ಟರ ಸಮಕಾಲೀನರ ಬಹುದೊಡ್ಡ ಗುಂಪು ರಾಜ್ಯ, ದೇಶ, ವಿದೇಶಗಳಲ್ಲಿದೆ. ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು,
ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ, ಪತ್ರಕರ್ತ ಬಿ.ಎಂ. ಹನೀಫ್, ಅಂತರಾಷ್ಟ್ರೀಯ ಛಾಯಚಿತ್ರಗಾರ ಕೇಶವ ವಿಠ್ಠಲ ಮುಂತಾದವರೊಂದಿಗೆ ಕೆಲಸ ಮಾಡಿದ ಅನುಭವ ಟಿ.ಕೆ. ರಮೇಶ್ ಶೆಟ್ಟಿಯವರದ್ದು.



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post