ಭರ್ಜರಿ ಯಶಸ್ಸು ಕಂಡ ಸಿದ್ದರಾಮೋತ್ಸವ

ರಾಹುಲ್‌ ಗಾಂಧಿ ಭೇಟಿಯಾದ ಮಂಜುನಾಥ ಗೌಡ
ನೆಹರು ಕೊಡುಗೆ ಸ್ಮರಿಸಿ ಸಹಕಾರಿ ಕ್ಷೇತ್ರದ ಕುರಿತು ವಿವರಣೆ
ತೀರ್ಥಹಳ್ಳಿ ರಾಜಕಾರಣದಲ್ಲಿ ಆರ್‌ಎಂಎಂಗೆ ಶುಕ್ರದೆಸೆ...?

“Sir he is Manjunath Gowda very important leader ” ಎಂದು ರಾಹುಲ್‌ ಗಾಂಧಿಗೆ ಡಿಕೆಶಿ ಮುರುಘಾಮಠದಲ್ಲಿ ಆರ್‌ಎಂಎಂ ಮಂಜುನಾಥ ಗೌಡರನ್ನು ಪರಿಚಯಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನದ ಸಿದ್ದರಾಮೋತ್ಸವ ಭರ್ಜರಿ ಯಶಸ್ಸು ಕಂಡಿದೆ. ಸದ್ಯ ದೇಶದ ಬಹುತೇಕ ರಾಜ್ಯಗಳಲ್ಲಿ ಒಂದೋ ಸೋತು, ಇಲ್ಲವೇ ಆಪರೇಷನ್‌ ಕಮಲಕ್ಕೆ ಒಳಗಾಗಿ ಬಸವಳಿದು ಬೆಂಡಾಗಿದ್ದ ಕಾಂಗ್ರೆಸ್‌ಗೆ ಈ ಸಮಾವೇಶ ಮತ್ತೆ ಆತ್ಮ ವಿಶ್ವಾಸವನ್ನು ಮರಳಿ ತಂದು ಕೊಡುವಲ್ಲಿ ಯಶಸ್ವಿಯಾಗಿದೆ. ಲಕ್ಷಾಂತರ ಮಂದಿ ಸೇರಿದ್ದ ವೇದಿಕೆಯೆದುರು ನಿರೀಕ್ಷೆಗೂ ಮೀರಿದ ಪ್ರಬುದ್ದತೆಯಿಂದ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒಳ್ಳೆಯ ಮಾತನಾಡುವ ಮೂಲಕ ಸಿದ್ದರಾಮಯ್ಯ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆಗೆ ಕಾರಣವಾದರು. ರಾಹುಲ್‌ ಗಾಂಧಿ ಕೂಡ ಸಿದ್ದರಾಮಯ್ಯ ಜನ್ಮದಿನಕ್ಕಾಗಿಯೇ ಬಂದಿದ್ದು, ಸಿದ್ದರಾಮಯ್ಯ ಕರ್ನಾಟಕದ ಸಿಎಂ ಆದಾಗ ಕಾಂಗ್ರೆಸ್‌ ಪಕ್ಷದ ಕನಸ್ಸುಗಳನ್ನು ಸಾಕಾರಗೊಳಿಸಿದ್ದಾರೆ. ಮುಂದಿನ ಚುನಾವಣೆಯನ್ನು ಕೂಡ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ನೇತೃತ್ವದಲ್ಲಿ ಎದುರಿಸಲಾಗುವುದು ಎಂದಿದ್ದಾರೆ. ಪ್ರಚಂಡ ಜನಸಾಗರ ಕಂಡು ಸಂತೋಷಗೊಂಡಿದ್ದ ಸಿದ್ದರಾಮಯ್ಯ ತಮಗೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರ ಪ್ರೋತ್ಸಾಹವನ್ನು ಎಂದಿಗೂ ಮರೆಯುವುದಿಲ್ಲ. ಭಾರತದ ಇತಿಹಾಸದಲ್ಲಿಯೇ ಈಗಿನ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಅತ್ಯಂತ ಜನವಿರೋಧಿಯಾಗಿದ್ದು ಅಚ್ಚೆದಿನ್‌ ಎಂದು ಅಧಿಕಾರಕ್ಕೆ ಬಂದ ಮೋದಿ ಅವರು ಇಡೀ ದೇಶದ ಆರ್ಥಿಕ ಪರಿಸ್ಥಿತಿಯನ್ನು ಧ್ವಂಸಗೊಳಿಸಿದ್ದಾರೆ ಎಂದರು.

ಇದಕ್ಕೂ ಮೊದಲು ಮುರುಘಾಮಠದಲ್ಲಿ ಮುರುಘಾ ಶರಣರನ್ನು ಭೇಟಿಯಾದ ರಾಹುಲ್‌ ಗಾಂಧಿ ಇಷ್ಟಲಿಂಗ ದೀಕ್ಷೆಯ ವಿವರಗಳನ್ನು ಪಡೆದುಕೊಂಡರಲ್ಲದೇ ಆ ತತ್ವವನ್ನು ಆಚರಿಸುವುದಾಗಿ ಮುರುಘ ಶರಣರಿಗೆ ವಾಗ್ದಾನ ನೀಡಿದರು. ಹಾಗೂ ವಿಭೂತಿಯನ್ನು ಧರಿಸಿ ನೀತಿ ನಿಯಮವನ್ನು ತಿಳಿದುಕೊಂಡರು.

ವಿಶೇಷವೆಂದರೆ ಈ ಭೇಟಿಯ ಸಂದರ್ಭದಲ್ಲಿ ಅತ್ಯಂತ ಕಟ್ಟುನಿಟ್ಟಾದ ಸುರಕ್ಷತೆಯ ಕಾರಣ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲು ಕೇವಲ 18 ಮಂದಿಗೆ ಮಾತ್ರ ಅವಕಾಶ ದೊರಕಿತ್ತು. ಡಿ.ಕೆ. ಶಿವಕುಮಾರ್‌ ನೆರವಿನಿಂದ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ರಾಜ್ಯ ಸಹಕಾರ ವಿಭಾಗದ ಸಂಚಾಲಕ ಡಾ.ಆರ್.ಎಂ. ಮಂಜುನಾಥ ಗೌಡರನ್ನು ಡಿ.ಕೆ. ಶಿವಕುಮಾರ್‌ ಅವರು ಸಹಕಾರಿ ಕ್ಷೇತ್ರದಲ್ಲಿ ಮಂಜುನಾಥ ಗೌಡರು ಉನ್ನತ ಸಾಧನೆ ಮಾಡಿದ್ದಾರಲ್ಲದೇ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆಂದು ಪರಿಚಯಿಸಿದರು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಸಿಕ್ಕ ಅಲ್ಪ ಅವಕಾಶದಲ್ಲಿಯೇ ರಾಹುಲ್‌ ಗಾಂಧಿಯೊಂದಿಗೆ ಮಾತನಾಡಿದ ಆರ್.ಎಂ. ಮಂಜುನಾಥ ಗೌಡ ಸಹಕಾರಿ ಚಳುವಳಿಗೆ ನೆಹರು ಅವರ ಕೊಡುಗೆ ಮಹತ್ವದ್ದಾಗಿತ್ತು. ಅದರ ವಹಿವಾಟಿಗೆ ಎಂದೂ ಕೂಡ ತೆರಿಗೆ ವಿಧಿಸಿರಲಿಲ್ಲ. ಹಾಗಾಗಿ ಸಹಕಾರಿ ಚಳುವಳಿ ದೇಶದಾದ್ಯಂತ ಸದೃಢವಾಗಿ ಬೆಳೆಯಲು ಕಾರಣವಾಗಿತ್ತು ಆದ್ದರಿಂದ ನೆಹರು ಜನ್ಮದಿನದ ನವೆಂಬರ್‌ 14ರಿಂದ ವಾರಗಳ ಕಾಲ ಸಹಕಾರಿ ಸಪ್ತಾಹವನ್ನು ಆಚರಿಸಲಾಗುತ್ತಿತ್ತು. ಈಗ ಸಹಕಾರಿ ಕ್ಷೇತ್ರದ ಮೇಲೆ ದುಬಾರಿ ತೆರಿಗೆ ವಿಧಿಸಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ಸಹಕಾರಿ ಕ್ಷೇತ್ರ ಸಂಕಷ್ಟಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಹೇಳಿದರು. ತಾಳ್ಮೆಯಿಂದ ಅವರ ಮಾತುಗಳನ್ನು ಕೇಳಿಸಿಕೊಂಡ ರಾಹುಲ್‌ ಗಾಂಧಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ಬಂದಲ್ಲಿ ಮತ್ತೆ ಹಿಂದಿನ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ ಎಂದು ನೀಡಿದ್ದಾರೆ.


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜೊತೆಯಲ್ಲಿ ರಾಹುಲ್‌ ಗಾಂಧಿ ಅವರನ್ನು ಮಂಜುನಾಥ ಗೌಡರು ಭೇಟಿಯಾಗಿರುವುದು ಮುಂದಿನ ದಿನಗಳಲ್ಲಿ ತೀರ್ಥಹಳ್ಳಿ ರಾಜಕಾರಣದಲ್ಲಿ ಹತ್ತು ಹಲವು ಬೆಳವಣಿಗೆಗೆ ಕಾರಣವಾಗುವ ನಿರೀಕ್ಷೆಯಿದೆಯಲ್ಲದೇ ಮಂಜುನಾಥ ಗೌಡರ ಪ್ರಭಾವ ವಲಯ ಕೂಡ ಇದರಿಂದ ಇನ್ನಷ್ಟು ವಿಸ್ತಾರವಾಗಿದೆ ಎಂಬ ಅಭಿಪ್ರಾಯ ಗೌಡರ ಬೆಂಬಲಿಗರಿಂದ ಕೇಳಿಬಂದಿದೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post