ಪ್ರಶಸ್ತಿ ಪ್ರಧಾನ ಮಾಡಿದ ನಿರ್ಮಲ ಸೀತಾರಾಮನ್
ಜಿಎಸ್‌ಟಿ,
ವಿಶ್ವ ಲೆಕ್ಕ ಪರಿಶೋಧಕರ ದಿನ
ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವತಿಯಿಂದ ಶುಕ್ರವಾರ ಜಿಎಸ್‌ಟಿ ಮತ್ತು
ವಿಶ್ವ ಲೆಕ್ಕ ಪರಿಶೋಧಕರ ದಿನಾಚರಣೆಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಆಚರಿಸಲಾಯಿತು.
ಈ ಸಮಾರಂಭದಲ್ಲಿ ದೇಶದ
ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ಬಿಗ್‌ಟೆಕ್ ಕಂಪನಿಯ ಜನರಲ್ ಮ್ಯಾನೇಜರ್ ಫೈನಾನ್ಸ್
ಆಗಿರುವ ತೀರ್ಥಹಳ್ಳಿಯವರಾದ ಸುರೇಶ್ ಕಿಣಿ ಅವರಿಗೆ ಅತ್ಯುತ್ತಮ ಜಿಎಸ್‌ಟಿ ನಿರ್ವಹಣೆಗಾಗಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು. ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ
ಸೀತಾರಾಮನ್ ಪ್ರಶಸ್ತಿ ಪ್ರಧಾನ ಮಾಡಿದರು.
ಸುರೇಶ್ ಕಿಣಿ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿಯ ಉದ್ಯಮಿ ಶಾಂತರಾಮ್
ಕಿಣಿಯವರ ಸಹೋದರರು.
.jpg)