ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯ
ಸಾವಿನ ಮನೆಯಲ್ಲಿ ಬಿಜೆಪಿ ರಾಜಕಾರಣ
ಬಿಜೆಪಿ ಹುನ್ನಾರ ಜನರು ಅರ್ಥ ಮಾಡಿಕೊಳ್ಳಲಿ
ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಹಿಂದೂಗಳು ಧರ್ಮದ ಕಾರಣಕ್ಕೆ ಮೃತಪಟ್ಟಿದ್ದಾರೆ. ಇದಕ್ಕೆ ಬಿಜೆಪಿಯೇ ಹೊಣೆಯಾಗಿದ್ದು ಅಧಿಕಾರಕ್ಕಾಗಿ ಬಿಜೆಪಿ ಇನ್ನಷ್ಟು ಹಿಂದೂಗಳ ಸಾವನ್ನು ಬಯಸಿದರೂ ಅಚ್ಚರಿಯೇನಿಲ್ಲ. ಹಿಂದೂಗಳ ಶವದ ಮೇಲೆ ಅಧಿಕಾರ ಸ್ಥಾಪಿಸಬೇಕು ಎನ್ನುವುದು ಬಿಜೆಪಿಯ ಹುನ್ನಾರವಾಗಿದೆ. ಈವರೆಗೂ ಧರ್ಮದ ಕಾರಣಕ್ಕೆ ಯಾವ ಬಿಜೆಪಿ ಮುಖಂಡರೂ ಜೀವ ಕಳೆದುಕೊಂಡಿಲ್ಲ. ಅಮಾಯಕರು ಮಾತ್ರ ಜೀವ ಕಳೆದುಕೊಂಡಿದ್ದಾರೆ. ಜನರ ದಿಕ್ಕು ತಪ್ಪಿಸುವ ಬಿಜೆಪಿಯ ಹುನ್ನಾರವನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಯುವ ಕಾಂಗ್ರೆಸ್ ಹೇಳಿದೆ.
ರಾಜಸ್ಥಾನದ ಉದಯಪುರದಲ್ಲಿ ಟೈಲರ್ ವೃತ್ತಿಯ ಕನ್ಹಯ್ಯ ಲಾಲ್ ಹತ್ಯೆಯನ್ನು ಯುವ ಕಾಂಗ್ರೆಸ್
ತೀವ್ರವಾಗಿ ಖಂಡಿಸುತ್ತದೆ. ಮಾನವೀಯ ಮೌಲ್ಯಗಳನ್ನು ಯಾವತ್ತೂ ಪ್ರತಿಪಾದನೆ ಮಾಡಿಕೊಂಡು ಬಂದಿರುವ ಕಾಂಗ್ರೆಸ್
ಎಂದಿಗೂ ಜಾತಿಯಾಧಾರಿತ ಸಂಘರ್ಷಕ್ಕೆ ಇಳಿಯುವುದಿಲ್ಲ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಘನವೆತ್ತ ಗೃಹಸಚಿವ
ಆರಗ ಜ್ಞಾನೇಂದ್ರರ ಸ್ವಕ್ಷೇತ್ರದಲ್ಲಿ ಕೆಲವು ಬಿಜೆಪಿ ಮುಖಂಡರು ಈ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ
ಬಳಸಿಕೊಳ್ಳುತ್ತಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಹೆಸರನ್ನು ಕೂಡ ಪ್ರತಿಭಟನೆಯಲ್ಲಿ
ಬಳಸಲಾಗಿದೆ. ಈ ಪ್ರಕರಣಕ್ಕೂ ಕಿಮ್ಮನೆ ರತ್ನಾಕರ್ ಅವರಿಗೂ ಏನು ಸಂಬಂಧ. ಕಿಮ್ಮನೆ ಹೆಸರನ್ನು ಬಳಸಲು
ಬಿಜೆಪಿಗರಿಗೆ ಯಾವ ನೈತಿಕತೆಯೂ ಇಲ್ಲ. ಶಾಲಾ ಬಾಲಕಿ ಸಹೋದರಿ ನಂದಿತಾ ಪ್ರಕರಣದಲ್ಲೂ ಬಿಜೆಪಿ, ಬಜರಂಗದಳ
ಮುಂತಾದ ಬಿಜೆಪಿಪರ ಸಂಘಟನೆಗಳು ಜನತೆಯ ದಿಕ್ಕು ತಪ್ಪಿಸಿ ಮತಕ್ಕಾಗಿ ರಾಜಕಾರಣ ಮಾಡಿದ್ದರು. ಯಾವುದೇ
ಸರ್ಕಾರ ಅಸ್ತಿತ್ವದಲ್ಲಿ ಇದ್ದರೂ ಸಾವಿನ ಮನೆಯ ರಾಜಕಾರಣ ಮಾಡುವುದನ್ನು ಬಿಜೆಪಿ ರೂಢಿಯಾಗಿದೆ. ಕನ್ಹಯ್ಯ
ಲಾಲ್ ಪ್ರಕರಣದಲ್ಲೂ ಅದೇ ಸೂತ್ರವನ್ನು ದೇಶದಾದ್ಯಂತ ಅನುಸರಿಸುತ್ತಿದ್ದಾರೆ ಎಂದು ತೀರ್ಥಹಳ್ಳಿಯ ಯುವ
ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ.
ಕನ್ಹಯ್ಯ ಲಾಲ್ ಹತ್ಯೆಯನ್ನು ವಿಶ್ವವೇ ದಿಗ್ಬ್ರಮೆಯಿಂದ ಕಂಡು ಆತಂಕ ವ್ಯಕ್ತಪಡಿಸುತ್ತಿದೆ.
ದೇಶದಲ್ಲಿ ಇಂತಹ ಪರಿಸ್ಥಿತಿಗೆ ಕಾರಣವಾದ ಬಿಜೆಪಿ ವಕ್ತಾರೆ ನೂಪೂರ್ ಶರ್ಮ ಹೇಳಿಕೆ ವಿರುದ್ದ ಕೇಂದ್ರ
ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಈ ಹೇಳಿಕೆಯನ್ನು ಸುಪ್ರೀಂ
ಕೋರ್ಟ್ ಕೂಡ ಛೀಮಾರಿ ಹಾಕಿ ದೇಶದ ಜನರ ಕ್ಷಮೆ ಕೇಳುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್ ಆದೇಶ ಬಿಜೆಪಿ
ಸಮೂಹಕ್ಕೆ ಛೀಮಾರಿ ಎಂಬುದನ್ನು ನೆನಪಿರಲಿ. ಬಿಜೆಪಿ, ಬಿಜೆಪಿ ಬೆಂಬಲಿತ ಅಂಗ ಸಂಸ್ಥೆಗಳು ಧರ್ಮ ರಾಜಕಾರಣ
ಮುಂದಿಟ್ಟು ಹಲವು ಅಮಾಯಕರ ಸಾವು ನೋವಿಗೆ ಕಾರಣವಾಗಿರುವುದು ದೇಶದ ಗಮನದಲ್ಲಿದೆ. ಓಟಿಗಾಗಿ ಸಾವಿನ
ಘಟನೆಯನ್ನು ತಿರುಚಿ ಅಮಾಯಕ ಜನರ ಸಾವನ್ನು ಬಯಸುವುದು ಬಿಜೆಪಿಯ ಹುಟ್ಟುಗುಣ. ಉದಯಪುರದ ಕೃತ್ಯವನ್ನು
ಕಟುವಾಗಿ ಖಂಡಿಸುವುದರ ಜೊತೆಗೆ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸಿದೆ.
ದೇಶದಲ್ಲಿ ಧರ್ಮ, ಜಾತಿಯಾಧಾರಿತ ಕೋಮು ಸಂಘರ್ಷಕ್ಕೆ ನೇರವಾಗಿ ಬಿಜೆಪಿ ಸರ್ಕಾರದ ನಿಲುವು ಕಾರಣವಾಗಿದೆ. ಬಿಜೆಪಿ ಸರ್ಕಾರ ಜನಸಾಮಾನ್ಯರ ಸಮಸ್ಯೆ ಬಗೆಹರಿಸುವ ಯಾವುದೇ ಅಭಿವೃದ್ದಿ ಕೆಲಸಗಳು ಮಾಡುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಅಭಿವೃದ್ದಿ ನಡೆಯುತ್ತಿಲ್ಲ. ದಿನೇ ದಿನೆ ದೇಶದಲ್ಲಿನ ಬೆಲೆ ಏರಿಕೆ ಮತ್ತು ಕುಸಿಯುತ್ತಿರಯವ ಆರ್ಥಿಕ ಪರಿಸ್ಥಿತಿಯನ್ನು ಜನ ಸಾಮಾನ್ಯರಿಂದ ಮರೆ ಮಾಚಲು ಧರ್ಮದ ಘಟನೆಗಳನ್ನು ಹುಟ್ಟುಹಾಕಿ, ಸಮಸ್ಯೆಗಳನ್ನು ಜೀವಂತ ಇಡುಲು ಪ್ರಯತ್ನಿಸುತ್ತಿದ್ದಾರೆಂದು ಯುವ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
.jpg)