ಬೆಜ್ಜವಳ್ಳಿ ಗ್ರಾ.ಪಂ.ನಲ್ಲಿ ಧಿಡೀರ್ ಪೊಲಿಟಿಕಲ್ ಹೈಡ್ರಾಮ

ಶಿವಮೊಗ್ಗಕ್ಕೆ ದೌಡು
ಎಸಿ ಮುಂದೆ ಹಾಜರ್, ಅವಿಶ್ವಾಸ ಮಂಡನೆ
ಸಿಡಿದೆದ್ದ ಸದಸ್ಯರಿಗೆ ಸಿಕ್ಕುವುದೇ ಜಯ...?
ಏಕಪಕ್ಷೀಯ ‌ನಿರ್ಧಾರಕ್ಕೆ ಬುಗಿಲೆದ್ದ ಆಕ್ರೋಶ

ಒಂದೂವರೆ  ವರ್ಷದ ಹಿಂದೆ ಬೆಜ್ಜವಳ್ಳಿ ಗ್ರಾಮ‌ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದ ದಾಕ್ಷಾಯಿಣಿ ಬಾಬಣ್ಣ ಇದೀಗ ಸದಸ್ಯರ ವಿಶ್ವಾಸ ಕಳೆದುಕೊಂಡಿದ್ದಾರೆ.

ಅಧ್ಯಕ್ಷೆ ದಾಕ್ಷಾಯಿಣಿ ವಿರುದ್ದ ಅಸಮಾಧಾನಗೊಂಡ ಸದಸ್ಯರು ಬುಧವಾರ ಶಿವಮೊಗ್ಗ ಉಪ ವಿಭಾಗಾಧಿಕಾರಿ ಅವರನ್ನು ಬೇಟಿ ಆಗಿ ಅವಿಶ್ವಾಸ ನಿರ್ಣಯ   ಮಂಡಿಸಿದ್ದಾರೆ.
ಅಡಳಿತ ನಿರ್ವಹಣೆಯಲ್ಲಿ ಸದಸ್ಯರ ಅಭಿಪ್ರಾಯ, ಸರ್ಕಾರದ ನಿಯಮಗಳಿಗೆ ಬೆಲೆ ಕೊಡದೆ ಏಕಪಕ್ಷೀಯವಾಗಿ ಸ್ವಹಿತಾಸಕ್ತಿ ತೀರ್ಮಾನ ಕೈಗೊಳ್ಳುವ ದಾಕ್ಷಾಯಿಣಿ ಅವರನ್ನು ಅಧ್ಯಕ್ಷೆ ಹುದ್ದೆಯಿಂದ ಪದಚ್ಯುತಿಗೊಳಿಸಲು ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 14 ಸದಸ್ಯರಿದ್ದು ಅಧ್ಯಕ್ಷೆ ವಿರುದ್ದ  ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ 12 ಸದಸ್ಯರು ಉಪ ವಿಭಾಗಾಧಿಕಾರಿ ಸಮ್ಮುಖ ಸಹಿ ಹಾಕಿದ್ದಾರೆ.
ಅಧ್ಯಕ್ಷೆ ದಾಕ್ಷಾಯಣಿ ಬಾಬಣ್ಣ ವಿರುದ್ದ ಸಂಪೂರ್ಣ ಅಸಮಾಧಾನ ಪ್ರಕಟಿಸಿದ್ದಾರೆ. ಪಕ್ಷಾತೀತವಾಗಿ ಅಧ್ಯಕ್ಷೆ ವಿರುದ್ದ ಸದಸ್ಯರು ಒಂದಾಗಿರುವುದು ರಾಜಕೀಯವಾಗಿ ಕುತೂಹಲಕಾರಿ ಬೆಳವಣಿಗೆ ಕಾರಣವಾಗಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post