ಸಂಘಟನೆ ಕಟ್ಟಿ
ಬೆಳೆಸಿದ ಬಹುಮುಖ ಪ್ರತಿಭೆ
ತೀವ್ರ ಸಂತಾಪ
ವ್ಯಕ್ತಪಡಿಸಿದ ಗೃಹಸಚಿವ ಆರಗ ಜ್ಞಾನೇಂದ್ರ
ತೀರ್ಥಹಳ್ಳಿಯಲ್ಲಿ ಉತ್ತಮ ಸಮಾಜ ನಿರ್ಮಾಣದ ಕನಸು ಹೊತ್ತು ಸಂಘಟನೆಗಾಗಿ ಅವಿರತ ಶ್ರಮಿಸಿದ್ದರು. ಆರಂಭದ ಕಾಲದಿಂದಲೂ ರಘುವೀರ್ ಭಟ್ ಶೈಕ್ಷಣಿಕ, ಪತ್ರಿಕೋದ್ಯಮ, ಮುದ್ರಣ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆಯ ಬಹುಮುಖ ಪ್ರತಿಭೆಯಾಗಿದ್ದರು. ಗೋಪಾಲಗೌಡರ ನಿಧನ ನಂತರ ಸಂಘಪರಿವಾರ ಕಟ್ಟಿ ಬೆಳೆಸಿದ ನನ್ನ ಮಾರ್ಗದರ್ಶಕರಲ್ಲಿ ಒಬ್ಬರಾದ ಹಿರಿಯ ಸಮಾಜವಾದಿ ನಾಗೇಂದ್ರನಾಥ್ ಅವರು ಪುತ್ರ ರಾಜೇಶ್ ಜವಳಿ ಕಿರಿಯ ವಯಸ್ಸಿನಲ್ಲಿ ಅಕಾಲಿಕ ಮರಣ ಗಾಸಿಯುಂಟುಮಾಡಿದೆ. ಅವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಗೃಹಸಚಿವ ಜ್ಞಾನೇದ್ರ ತೀವ್ರ ಸಂತಾಪ ಸೂಚಿಸಿದ್ದಾರೆ.
ರಘುವೀರ್ ಭಟ್ಟರ ಕುರಿತು
ತೀರ್ಥಹಳ್ಳಿ ತಾಲ್ಲೂಕಿನ ಗೌಡ
ಸಾರಸ್ವತ ಸಮಾಜದ ಹಿರಿಯರು, ವೃತ್ತಿಯಲ್ಲಿ
ಪುರೋಹಿತರಾಗಿದ್ದ ವಿಠ್ಠಲ ಭಟ್ಟರ ಹಿರಿಯ ಪುತ್ರರಾದ ರಘುವೀರ್ ಭಟ್ಟ್ ಇವರು 1940 ರಲ್ಲಿ ಜನಿಸಿದರು. ಶ್ರೀಯುತರು ಶೈಕ್ಷಣಿಕ, ಪತ್ರಿಕೋದ್ಯಮ, ಮುದ್ರಣ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆಯ ಬಹುಮುಖ ಪ್ರತಿಭೆಯ ಮೂಲಕ
ತಾಲ್ಲೂಕಿನಾದ್ಯಂತ ಚಿರಪರಿಚಿತ ವ್ಯಕ್ತಿಯಾಗಿದ್ದವರು. ಇವರು ಪ್ರಾರ್ಥಮಿಕ ಹಾಗು ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ
ಪಡೆದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿಯ ಬಳಿಕ
ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಪಡೆದವರು. ಐವತ್ತರ ದಶಕದಲ್ಲಿ ಪ್ರಾರಂಭವಾದ ತೀರ್ಥಹಳ್ಳಿಯ "ತುಂಗಾ
ಕಾಲೇಜಿ"ನಲ್ಲಿ 1974 ರಿಂದ 1977ರ ವರೆಗೆ ಕನ್ನಡ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕಾಲೇಜಿನ
ಸಂಸ್ಥಾಪಕರಲ್ಲಿ ಪ್ರಮುಖರಾಗಿದ್ದ ಜವಳಿ ನಾಗೇಂದ್ರನಾಥ್, ಕಲ್ಲಹಳ್ಳ ಗಂಗಾಧರ ಅವರಂತವರ
ಒಡನಾಡಿಗಳಾಗಿದ್ದರು. 1957ರಲ್ಲಿ ತೀರ್ಥಹಳ್ಳಿಯಲ್ಲಿ
"ವಾಣಿ ಪ್ರಿಂಟಿಂಗ್ ಪ್ರೆಸ್ಸ್" ನ್ನು ಪ್ರಾರಂಭಿಸಿ ಮುದ್ರಣ ಕ್ಷೇತ್ರವನ್ನು ತಮ್ಮ
ವೃತ್ತಿಜೀವನವನ್ನಾಗಿ ಮಾಡಿಕೊಂಡ ಇವರು ಅಂದು ಮದರಾಸಿನ "ಪತ್ರಿಕಾ ಅಭಿವೃದ್ಧಿ ಸಂಶೋಧನಾ
ಸಂಸ್ಥೆಯ" ಮೂಲಕ ಪ್ರಸಾರವಾಗುತ್ತಿದ್ದ ಗ್ರಾಮೀಣ ವಾರ ಪತ್ರಿಕೆಯಾದ "ಗ್ರಾಮ ಭಾರತಿ" ಪತ್ರಿಕೆಯ ಸಂಪಾದಕರಾಗಿ ಹಾಗು ಸಾಗರ, ಹೊನ್ನಾವರ, ಶಿರಸಿ, ಶಿರಾಳಕೊಪ್ಪ ಹಾಗು ಇತರೆ ಭಾಗಗಳ ಪತ್ರಿಕೆಯ ವಸ್ತುವಾರಿಯನ್ನು
ನಿರ್ವಹಿಸಿ ಪತ್ರಿಕೋದ್ಯಮದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. 1882ರಲ್ಲಿ ವರದಾಚಾರ್, ಎಂ. ಪುರುಷೋತ್ತಮ ರಾವ್, ಬೆನಕ ಭಟ್ಟ್, ಮೇಳಿಗೆ ಶಿವಣ್ಣ, ಆರಗ ಜ್ನ್ಯಾನೇಂದ್ರ ಇವರುಗಳೊಂದಿಗೆ ಸೇರಿ ತೀರ್ಥಹಳ್ಳಿಯಲ್ಲಿ ದೇಸಿ
ಕಲ್ಪನೆಯ "ಸೇವಾ ಭಾರತಿ" ವಿದ್ಯಾಸಂಸ್ಥೆಯನ್ನು ಹುಟ್ಟು ಹಾಕುವಲ್ಲಿ ಇವರು ಪ್ರಮುಖ
ಪಾತ್ರಧಾರಿಗಳಾಗಿರುವುದಲ್ಲದೇ 2007 ರಿಂದ 2016ರ ವರೆಗೂ ಅದ್ಯಕ್ಷರಾಗಿ ಶಿಕ್ಷಣ ಕ್ಷೇತ್ರದ ಸೇವೆಗೆ ತಮ್ಮನ್ನು
ಸಮರ್ಪಿಸಿಕೊಂಡಿದ್ದಾರೆ. ಏಳು ವರ್ಷಗಳ ಕಾಲ ತೀರ್ಥಹಳ್ಳಿಯ ಗೌಡ ಸಾರಸ್ವತ ಸಮಾಜದ ಅದ್ಯಕ್ಷರಾಗಿ ಇವರು
ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ. ತೀರ್ಥಹಳ್ಳಿಯ
ಪುರಸಭೆಯ ಸದಸ್ಯರಾಗಿದ್ದ ಶ್ರೀಯುತರು ರಂಗ ನಟರಾಗಿಯೂ
ಗುರುತಿಸಿಕೊಂಡಿದ್ದರು.
ಹಿರಿಯ ರಂಗ ನಾಟಕಕಾರರಾದ ಸೀತಾರಾಮಾಚಾರ್, ವಾಸುದೇವ ಭಟ್ಟ್ ಇವರೊಂದಿಗೆ ಅನೇಕ ಸಾಮಾಜಿಕ, ಪೌರಾಣಿಕ ಹಾಗು ಐತಿಹಾಸಿಕ ನಾಟಕಗಳಲ್ಲಿ ನಟರಾಗಿ ತೀರ್ಥಹಳ್ಳಿಯ
"ನಟಮಿತ್ರರು" ಹವ್ಯಾಸಿ ಕಲಾ ಬಳಗದ ನಿಕಟ ಸಂಪರ್ಕವನ್ನು ಹೊಂದಿರುವ
ಇವರು ಇತ್ತೀಚಿನ ಕೆಲ ವರ್ಷಗಳ ಹಿಂದೆ ತಮ್ಮ 74ರ ವಯಸ್ಸಿನಲ್ಲಿ ರಂಗ ನಟರಾಗಿ ನಟಿಸಿರುವುದು ಇವರ ಕಲಾಪ್ರೇಮ ಹಾಗೂ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಪ್ರಸ್ತುತ ವರ್ತಮಾನದ ಅಧುನಿಕ ವಿದ್ಯಾಮಾನಗಳೊಂದಿಗೆ
ಹಿರಿಯ-ಕಿರಿಯರೆನ್ನದೆ ಎಲ್ಲರೊಡನೆ ಬೆರೆಯುವ ಇವರ ಜಿವನೊತ್ಸಾಹ ಎಲ್ಲರಿಗೂ ಮಾದರಿಯಾಗಿದೆ.ಇಂದಿಗೂ
ತಮ್ಮ ಸಹೋದರರ ಸಹಕಾರದೊಂದಿಗೆ ತೀರ್ಥಹಳ್ಳಿಯ ರಾಮಮಂದಿರದ ಕೆಳ ಅಂತಸ್ತಿನಲ್ಲಿ ಮುದ್ರಣಾಲಯವನ್ನು
ನಡೆಸುತ್ತಿರುವ ಇವರ ಕಛೇರಿ ಇಂದಿಗೂ ಸದಾ ಗೆಳೆಯರ,
ಹಿತೈಷಿಗಳ ಹಾಗೂ ಸಮಾನ ಮನಸ್ಕರ
ಆರೋಗ್ಯಕರ ಚರ್ಚೆ-ಸಂವಾದಗಳಿಗೆ ವೇದಿಕೆಯಾಗಿದೆ. ಸಾಮಾಜಿಕ, ರಾಜಕೀಯ, ಇತಿಹಾಸ, ಸಾಹಿತ್ಯ, ಧಾರ್ಮಿಕ
ವಿಷಯಗಳಲ್ಲಿ ಅಪಾರ ಪ್ರಭುತ್ವವನ್ನು ಹೊಂದಿರುವ ಅವರ ಅನುಭವಾದಾರಗಳು ಇತರರಿಗೆ ಅನುಕರಣೀಯವಾಗಿದ್ದವು. ಕಲೆ, ಸಾಹಿತ್ಯ, ರಂಗಭೂಮಿ, ರಾಜಕೀಯ, ಶಿಕ್ಷಣ ಹಾಗೂ ಮುದ್ರಣ
ಕ್ಷೇತ್ರದಲ್ಲಿ ಸುಧೀರ್ಘ ಕಾಲ ತಮ್ಮ ಸೇವೆಯನ್ನು ಸಲ್ಲಿಸಿರುವ ಟಿ. ರಘುವೀರ್ ತೀರ್ಥಹಳ್ಳಿ ತಾಲ್ಲೂಕಿನ ಇತಿಹಾಸವನ್ನು ತಮ್ಮ ನೆನಪಿನ
ಬುತ್ತಿಯಿಂದ ಎಳೆಎಳೆಯಾಗಿ ವಿವರಿಸುತಿದ್ದರಲ್ಲದೇ ಜಾಗತಿಕ ಮಟ್ಟದ ವಿವಿಧ ಕ್ಷೇತ್ರದ ವಿಷಯಗಳನ್ನು
ತಿಳಿದುಕೊಂಡಿದ್ದರು. ಸದಾ ಕ್ರಿಯಾಶೀಲ
ಚಟುವಟಿಕೆಯಿಂದ ಕೂಡಿರುತಿದ್ದ ಅವರ ದಿನಚರಿ ಇತ್ತೀಚಿನ ದಿನಗಳಲ್ಲಿ ವಯೋಸಹಜ ಅನಾರೋಗ್ಯದಿಂದಾಗಿ
ತಮ್ಮ ಕಾರ್ಯಚಟುವಟಿಕೆಗಳನ್ನು ಸೀಮಿತಗೊಳಿಸಿಕೊಂಡಿದ್ದರು.
ಬರಹ : ನವನೀತ್ ಮಕ್ಕಿಮನೆ ( 9481319601 )

