ಘಾಟಿ ರಸ್ತೆ ಸಂಚಾರ ಬಂದ್
ಅಭಿವೃದ್ದಿ ಮುಳುವಾಯಿತೆ...
ಶಿವಮೊಗ್ಗದಿಂದ ಕರಾವಳಿ ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ಮಳೆ ವ್ಯಾಪಕವಾಗಿದೆ. ಇದರ ನಡುವೆ ಶಿವಮೊಗ್ಗದ ಗಡಿಗೆ ಹೊಂದಿಕೊಂಡಿರುವ ತಿರುವಿನಲ್ಲಿ ಮಣ್ಣುಕುಸಿದಿದ್ದು, ರಸ್ತೆಗೆ ಅಡ್ಡಲಾಗಿ ಭಾರೀ ಗಾತ್ರದ ಮರಬಿದ್ದಿದೆ. ಘಾಟಿಯ 10ನೇ ತಿರುವಿನಲ್ಲಿ ಮಣ್ಣು ಜರುಗಿದ್ದು ಎಷ್ಟು ಪ್ರಮಾಣದ ಧರೆ ಕುಸಿದಿದೆ ಎಂಬುದನ್ನು ಅಂದಾಜು ಮಾಡಲಾಗಿಲ್ಲ. ಸುಗಮ ನೀರಿನ ಹರಿವಿಗಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಘಾಟಿ ಜರುಗಿರಬಹುದು ಎಂದು ಅಂದಾಜಿಸಲಾಗಿದೆ.
ರಸ್ತೆ ವಿಸ್ತರಣೆ ಅಪಘಾತಕ್ಕೆ ಕಾರಣವಾಗಿರಬಹುದು. ಪರಿಣಾಮ ಸಂಚಾರ ಸಂಪೂರ್ಣ ಬಂದ್ ಆಗಿದೆ. ಈಗಾಗಲೇ ತಿರುವಿನಲ್ಲಿ ಹೋದವರು ವಾಪಸ್ ಆಗುತ್ತಿದ್ದಾರೆ. ಇನ್ನೂ ಘಾಟಿ ಕೆಳಗೆ ಸೋಮೇಶ್ವರ ಚೆಕ್ಪೋಸ್ಟ್ ಬಳಿಯಲ್ಲಿಯೇ ವಾಹನಗಳನ್ನು ತಡೆಯಲಾಗುತ್ತಿದೆ. ಮೇಲ್ಬಾಗ ಆಗುಂಬೆ ಘಾಟಿ ಚೆಕ್ಪೋಸ್ಟ್ ಬಳಿಯೇ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ.