ಹುಂಚದಕಟ್ಟೆ ‌ಪಿಎಸಿಎಸ್ - 83 ಲಕ್ಷ ಹಣ ದುರುಪಯೋಗ

ಸಹಕಾರ ಸಂಘಗಳ ಕಾಯ್ದೆ 1956ರ ಕಲಂ 64ರಡಿ ತನಿಖೆ
5 ವರ್ಷಗಳ ವ್ಯವಹಾರ ತನಿಖೆಗೆ ವಿಚಾರಣಾಧಿಕಾರಿ ನೇಮಿಸಿ ಆದೇಶ

ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 83 ಲಕ್ಷಕ್ಕೂ‌ ಅಧಿಕ ಹಣದ ದುರುಪಯೋಗ ಮಾಡಿರುವ ಕುರಿತು ಜಿಲ್ಲಾ ಬ್ಯಾಂಕಿಗೆ ವರದಿ ಸಲ್ಲಿಯಾಗಿದೆ. ಇದನ್ನು ತನಿಖೆಗೆ ಒಳಪಡಿಸಬೇಕೆಂದು ಡಿಸಿಸಿ ಎರಡನೇ ವೃತ್ತ ಕ್ಷೇತ್ರಾಧಿಕಾರಿ ವರದಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಸಹಕಾರ ಸಂಘಗಳ ನಿಬಂಧಕರಿಗೆ ಪತ್ರ ಬರೆದಿದ್ದು ಸಹಕಾರ ಸಂಘಗಳ ಕಾಯ್ದೆ 1956ರ 64ರಡಿ ವ್ಯವಹಾರವನ್ನು ತನಿಖೆಗೆ ಒಳಪಡಿಸಿ ಹೊಣೆಗಾರಿಕೆ ನಿರ್ಧರಿಸುವಂತೆ ಕೋರಿಕೊಂಡಿದ್ದರು.

35 ಲಕ್ಷ ಸುಳ್ಳು ಖರ್ಚು ಹಾಕಿ ಜಾಮೀನು ಸಾಲ, 25 ಲಕ್ಷ ಸುಸ್ತಿ ಜಾಮೀನು ಸಾಲ ಇರುವ ಪ್ರಕರಣಗಳಿಗೆ ಪುನಃ ನೀಡಿರುವ ಜಾಮೀನು ಸಾಲ, 22 ಲಕ್ಷ ಠೇವಣಿ ಖರ್ಚು ಸೇರಿದಂತೆ ಒಟ್ಟು 83 ಲಕ್ಷ ಹಣದ ದುರಪಯೋಗ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ದೂರಿನ ಆಧಾರ ಮೇಲೆ 2021 ರಿಂದ ಜೂನ್ 2026ರವರೆಗೆ 5 ವರ್ಷಗಳ ಅವಧಿಯಲ್ಲಿ ನಡೆದಿರುವ ಜಾಮೀನು ಸಾಲ ವಿತರಣೆ, ವಸೂಲಾತಿ, ಠೇವಣಿ ಸಂಗ್ರಹ, ವಾಪಾಸಾತಿ, ಸಂಘದ ಸ್ವಂತ ಬಂಡವಾಳದಲ್ಲಿ ನಗದು ಪುಸ್ತಕಕ್ಕೆ ಜಮಾ ಪಡೆಯದೆ ವಿತರಿಸಿದ ಕೃಷಿಯೇತರ ಸಾಲಗಳ ಮರು ಪಾವತಿ ಆಗಿರುವ ಮೊತ್ತದ ದುರಪಯೋಗ, ನ್ಯೂನ್ಯತೆ ಪರಿಶೀಲಿಸಿ 3 ತಿಂಗಳೊಳಗೆ ಆರೋಪ ನಿಗಧಿಪಡಿಸಲು ಸೂಚಿಸಲಾಗಿದೆ.

ಈ ಸಂಬಂಧ ಹಣ ದುರಪಯೋಗ ಪ್ರಕರಣವನ್ನು ಸಹಕಾರ ಸಂಘಗಳ ಕಾಯ್ದೆ 1956ರ ಕಲಂ 64 (1) ರಡಿ ವಿಚಾರಣಾಧಿಕಾರಿ ನೇಮಿಸಿ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಗುರುವಾರ ಆದೇಶ ಹೊರಡಿಸಿದ್ದಾರೆ. 3 ತಿಂಗಳ ಒಳಗೆ ತನಿಖೆಯ ವರಧಿ ಮತ್ತು ಹೊಣೆಗಾರಿಕೆ ನಿರ್ಧರಿಸಬೇಕಿದೆ. ಅಲ್ಲದೇ ಹೆಚ್ಚುವರಿ ದುರುಪಯೋಗ ಕಂಡುಬಂದಲ್ಲಿ ಅವುಗಳನ್ನು ಪಟ್ಟಿ ಮಾಡಿ ಆರೋಪ ಪಟ್ಟಿ ಸಲ್ಲಿಸುವಂತೆ ಆದೇಶದಲ್ಲಿ ಹೇಳಲಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post