ಸಮಾಜವಾದಿ ನಾಗೇಂದ್ರನಾಥ್ ಪುತ್ರ
ರಾಜೇಶ್ ಜವಳಿ ಇನ್ನಿಲ್ಲ
ಮೆದುಳಿನ ರಕ್ತಸ್ರಾವದಿಂದ ಸಾವು
ತೀರ್ಥಹಳ್ಳಿ ತಾಲ್ಲೂಕಿನ ಗೌಡ ಸಾರಸ್ವತ ಸಮಾಜದ ಪ್ರಮುಖರು ಹಾಗು ಕೃಷಿಕರು ಆದ ಜವಳಿ ರಾಜೇಶ್ ಇವರು ಇಂದು ಸಂಜೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ತೀರ್ಥಹಳ್ಳಿ ತಾಲ್ಲೂಕಿನ ಹಿರಿಯ ಕೃಷಿಕರಾಗಿ, ಸಂಘ ಪರಿವಾರದ ಪ್ರಮುಖರಾಗಿ ಹಾಗು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ಮಹಾವಿದ್ಯಾಲಯದ ಸ್ಥಾಪಕ ಸದಸ್ಯರಾಗಿ ಹಲವಾರು ಕ್ಷೇತ್ರದ ಸಾಧಕರಾಗಿದ್ದ ಜವಳಿ ನಾಗೇಂದ್ರನಾಥ ಇವರ ಪುತ್ರರಾದ ಜವಳಿ ರಾಜೇಶ್ ಇವರು ತಮ್ಮ ಪದವಿ ವಿಧ್ಯಾಭ್ಯಾಸದ ನಂತರದಲ್ಲಿ ತಮ್ಮ ಕೌಟುಂಬಿಕ ಕೃಷಿ ಜೀವನಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಸದಾ ಹಸನ್ಮುಖಿಯಾಗಿ ತಮ್ಮಹೆಚ್ಚಿನ ಸಮಯವನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತಿದ್ದ ರಾಜೇಶ್ ಜವಳಿ ತಮ್ಮ ಸೌಮ್ಯ ಹಾಗು ಮುಗ್ದ ನಡವಳಿಕೆಯ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.ಕೆಲ ದಿನಗಳ ಹಿಂದೆ ಮೆದುಳು ರಕ್ತಸ್ರಾವಕ್ಕೊಳಗಾಗಿದ್ದ ಅವರು ಶಸ್ತಚಿಕಿತ್ಸೆ ಸಫಲವಾಗದೆ ಬುಧುವಾರ ಸಂಜೆ ವಿಧಿವಶರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ , ಇಬ್ಬರು ಪುತ್ರರು, ಮೂವರು ಸಹೋದರಯರನ್ನು ಹೊಂದಿದ್ದ ರಾಜೇಶ್ ಜವಳಿ ಇವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ಬರಹ : ನವನೀತ್ ಮಕ್ಕಿಮನೆ ( 9481319601 )
