ಏಳು ದಿನಗಳ ಶೈಕ್ಷಣಿಕ ವಿಷಯಾಧಾರಿತ ಕಾರ್ಯಕ್ರಮ
ಜೂನಿಯರ್ ಜೆಸಿ ಸಪ್ತಾಹದ ಮೊದಲ ದಿನದ ಕಾರ್ಯಕ್ರಮ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಟ್ರೈನಿಂಗ್ ಫಾರ್ ಫ್ಯೂಚರ್ ಎಂಬ ತರಬೇತಿಯನ್ನು ವಲಯ ತರಬೇತುದಾರ ಡಾ.ಮುರಳೀಧರ ಕಿರಣಕೆರೆ ನೀಡಿದರು. ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜೆಸಿ ಅಧ್ಯಕ್ಷೆ ವಿನುತ ಮುರಳೀಧರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೂನಿಯರ್ ಜೆಸಿ ಅಧ್ಯಕ್ಷ ಪ್ರಥಮ ಎನ್.ರಾವ್. ವೇದಿಕೆಯಲ್ಲಿದ್ದರು. ಸುಮಾರು 200 ಮಕ್ಕಳು ತರಬೇತಿಯಲ್ಲಿ ಭಾಗವಹಿಸಿದ್ದರು.