ಮತಬ್ಯಾಂಕ್ ಹಿಂದುತ್ವ ಕೊನೆಗೊಳ್ಳಲಿ

ಸಿಎಂ, ಗೃಹಸಚಿವರ ರಾಜೀನಾಮೆ ನೀಡಲಿ
ಆರೋಪಿಗಳಿಗೆ ರಾಜಾತಿಥ್ಯ ಖಂಡನೀಯ
ಬಿಜೆಪಿ ಸ್ನೇಹಿತರನ್ನು ರಕ್ಷಿಸಿ - ಅಮರನಾಥ ಶೆಟ್ಟಿ
ಮತಾಂಧತೆಯ ಹೆಸರಿನಲ್ಲಿ ಇತ್ತೀಚಿಗೆ ನಡೆಯುತ್ತಿರುವ ಅಮಾಯಕ ಯುವಕರ ಸಾಲು ಸಾಲು ಕಗ್ಗೊಲೆ ಹಾಗೂ ನಿನ್ನೆ ದಕ್ಷಿಣ ಕನ್ನಡದಲ್ಲಿ ನಡೆದಂತಹ ಪ್ರವೀಣ್ ನೆಟ್ಟಾರ ಅವರ ಹತ್ಯೆಗೈದ  ಆರೋಪಿಗಳಿಗೆ  ಉಗ್ರ ಶಿಕ್ಷೆ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದೆಂದು ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ‌ ಆಗ್ರಹಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಿಂದುತ್ವದ ಹಾಗೂ ಹಿಂದೂಗಳ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರವು ಹಿಂದೂಗಳ ರಕ್ಷಣೆ ಮಾಡದೇ ಪಕ್ಷ ಹಾಗೂ ತಮ್ಮ ಅಧಿಕಾರವನ್ನು ರಕ್ಷಣೆ ಮಾಡಿಕೊಳ್ಳುತ್ತಿದೆ ಹಾಗೂ ಸಾಲು ಸಾಲು ಅಮಾಯಕ ಬಡ ಯುವಕರ ಹತ್ಯೆ ಆಗುತ್ತಲೇ ಇದೆ. ಇದನ್ನು ನಮ್ಮ ಹಿಂದೂ ಯುವಕರು ಅರ್ಥಮಾಡಿಕೊಳ್ಳಬೇಕು ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ರಾಜ್ಯದ ಗೃಹ ಮಂತ್ರಿಗಳು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ಇಂತಹ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದರೆ ಅದರಿಂದ ಕೊಲೆಗೈದ ಆರೋಪಿಗಳು ಕಾರಾಗೃಹದಲ್ಲಿ ಮೋಜು ಮಸ್ತಿ ಮಾಡಿಕೊಂಡು ಕಾಲ ಕಳಿಯುತ್ತಿದರೆ ಇದರಿಂದ ಕೊಲೆಗಾರರಿಗೆ ಕಾನೂನಿನ ಮೇಲೆ ಯಾವುದೇ ಭಯ ಇಲ್ಲದಂತಾಗಿದೆ ಹಾಗೂ ಇಂತಹ ಪರಿಸ್ಥಿಯನ್ನು ಶಾಂತಗೊಳಿಸುವುದರ ಬದಲಾಗಿ ಬಿಜೆಪಿ ಪಕ್ಷದ ಕೆಲ ನಾಯಕರುಗಳು ಉದ್ರೇಕಕಾರಿ ಹೇಳಿಕೆ  ನೀಡಿ ಮತ್ತಷ್ಟು ಇಂತಹ ಜೀವಹಾನಿ ಘಟನೆಗಳಿಗೆ ಇವರೇ ಮುಖ್ಯ ಕಾರಣವಾಗುತ್ತಿದ್ದಾರೆ. ಮೊದಲು ಇಂತಹ ಹೇಳಿಕೆ ನೀಡುವವರ ಮೇಲೆ ಕಠಿಣ ಕ್ರಮ  ಕೈಗೊಳ್ಳಬೇಕು ಮತ್ತು ಹತ್ಯೆಗೈದ ಆರೋಪಿಗಳನ್ನು ನಿರ್ದಾಕ್ಷಿಣ್ಯವಾಗಿ ತಕ್ಷಣ ಉಗ್ರ ಶಿಕ್ಷೆಗೆ ಒಳಪಡಿಸಬೇಕು, ಇಂತಹ ಘಟನೆಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ನೆರವು ನೀಡಬೇಕು, ಈ ಘಟನೆಯ ನೈತಿಕ ಹೊಣೆ ಹೊತ್ತು , ಹಿಂದೂಗಳ ಭಾವನೆಯನ್ನು ಮತಬ್ಯಾಂಕ್ ಆಗಿ ಪರಿವರ್ತಿಸಿಕೊಂಡು ಗೆದ್ದಿರುವಂತಹ ಬಿಜೆಪಿ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ  ಬಸವರಾಜ್ ಬೊಮ್ಮಾಯಿ ಮತ್ತು ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರಯ ಕೂಡಲೇ ರಾಜೀನಾಮೆ ನೀಡಿ ನಿಜವಾದ ಹಿಂದುತ್ವವನ್ನು ರಾಜ್ಯದ ಜನರ ಮುಂದೆ ಪ್ರದರ್ಶಿಸಲಿ ಎಂದು ತೀರ್ಥಹಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ್ ಶೆಟ್ಟಿ ಆಗ್ರಹಿಸಿದ್ದಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post