ಸುಪ್ರೀಂ ಕೋರ್ಟ್ ಗರಂ
ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ವಿವಾದಿತ ಹೇಳಿಕೆ ನೀಡಿ
ದೇಶದಲ್ಲಿ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆಂದು ಬಿಜೆಪಿ ಉಚ್ಚಾಟಿತ ವಕ್ತಾರೆ
ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ
ತೆಗೆದುಕೊಂಡಿದೆ. “ನಿಮ್ಮ ಹೇಳಿಕೆಗಾಗಿ ಇಡೀ ದೇಶದ
ಕ್ಷಮೆಯಾಚಿಸಬೇಕು” ಎಂದು ಶರ್ಮಾಗೆ ಕೋರ್ಟ್ ತಾಕೀತು ಮಾಡಿದೆ.
ಪ್ರವಾದಿ ಅವರ ಬಗ್ಗೆ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆಗೆ
ಗಲ್ಫ್ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಅಲ್ಲದೇ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಇದೇ ಕಾರಣಕ್ಕೆ ರಾಜಸ್ಥಾನ ಉದಯಪುರದಲ್ಲಿ
ಬೀಕರ ಘಟನೆ ನಡೆದಿತ್ತು. ಈ ಸಂಬಂಧ ಈಗ ನಡೆಯುತ್ತಿರುವ ಹಿಂಸಾಚಾರ ದುರ್ಘಟನೆಗಳಿಗೆ ನೂಪುರ್ ಶರ್ಮಾ ಅವರ ಹೇಳಿಕೆಯೇ ಕಾರಣ ಎಂದು ಸುಪ್ರೀಂ ತರಾಟೆಗೆ
ತೆಗೆದುಕೊಂಡಿದೆ.
ಆಕೆಯ ಪ್ರಚೋದನಕಾರಿ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಆದರೆ ಆಕೆ
ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳಿಕೊಂಡಿರುವುದು ನಾಚಿಕೆಗೇಡಿನ
ಸಂಗತಿಯಾಗಿದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.
ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು
ದೆಹಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂ ಈ ರೀತಿ ಪ್ರತಿಕ್ರಿಯಿಸಿದೆ.
ನೂಪುರ ಶರ್ಮಾ ಹೇಳಿಕೆ ಹಿಂತೆಗೆದುಕೊಂಡಿದ್ದು ಬಹಳ ತಡವಾಗಿದೆ.
ಶರ್ಮಾ ದೂರಿನ ಆಧಾರದ ಮೇಲೆ ಓರ್ವ ವ್ಯಕ್ತಿಯ ಬಂಧನವಾಗಿದೆ. ನೂಪುರ್ ಶರ್ಮಾ ಬಂಧನ ಏಕಾಗಿಲ್ಲ? ನೂಪೂರ್ ಶರ್ಮಾ ವಿರುದ್ಧ ಅನೇಕ ಎಫ್‌ಐಆರ್
ದಾಖಲಾದರೂ ಬಂಧನವಾಗಿಲ್ಲ. ದೇಶದ ಭದ್ರತೆಗೆ ಧಕ್ಕೆ ಉಂಟಾಗಿದೆ ಎಂದು
ಕೋರ್ಟ್ ಗರಂ ಆಗಿದೆ.
