ಕೊಪ್ಪ ವೃತ್ತದಲ್ಲಿ ಕುವೆಂಪು ಪುತ್ಥಳಿ ಸ್ಥಾಪನೆಗೆ ಕಿಮ್ಮನೆ ಅಡ್ಡಗಾಲು
ಆರಗ ಜ್ಞಾನೇಂದ್ರ ಮಧ್ಯ ಪ್ರವೇಶದಿಂದ ಪುತ್ಥಳಿ ಅನಾವರಣ
ಕುರುವಳ್ಳಿ ಅನಿಲ್ ಯೋಜನೆಗೆ ಕಿಮ್ಮನೆ ಲೇವಡಿ
ಮೇಲಿನ ಕುರುವಳ್ಳಿ ಗ್ರಾ.ಪಂ. ಸದಸ್ಯ ಅಣ್ಣಪ್ಪ ಗಂಭೀರ ಆರೋಪ
ಕುವೆಂಪು ವಿಶ್ವಮಾನವ ವೇದಿಕೆ ವತಿಯಿಂದ ಸಾಂಸ್ಕೃತಿಕ ಸೌಹಾರ್ದ ನಡಿಗೆ ಸಂದರ್ಭದಲ್ಲಿ ನಡೆದ ಸಮಾರೋಪ ಸಮಾರಂಭ ಮತ್ತು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಪತ್ರಿಕಾಗೋಷ್ಟಿಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ನಿಂದಿಸಿರುವುದು ಅನಾಗರೀಕ ನಡೆ ಎಂದು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಬಿಜೆಪಿ ಯುವ ಮುಖಂಡ ಅಣ್ಣಪ್ಪ ಹೇಳಿದ್ದಾರೆ. ರಾಷ್ಟ್ರಕವಿ ಕುವೆಂಪು ಕುರಿತು ಎಲ್ಲರಿಗೂ ಅಭಿಮಾನವಿದೆ. ಅವರಿಗೆ ಅಪಚಾರವಾಗಿದ್ದರೆ ಆ ಕೃತ್ಯಕ್ಕೆ ಕಾರಣರಾದವರನ್ನು ಟೀಕಿಸಲಿ. ಅದು ಬಿಟ್ಟು ಘಟನೆಗೂ ವಿವಾದಕ್ಕೂ ಸಂಬಂಧವೇ ಇರದ ಆರಗ ಜ್ಞಾನೇಂದ್ರ ಅವರನ್ನು ತಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮೂಲಕ ಅಸಮರ್ಥ, ಅಜ್ಞಾನಿ ಎಂದು ಲೇವಡಿ ಮಾಡಿಸಿದ ಕಿಮ್ಮನೆ ರತ್ನಾಕರ್ ಅವರು ಕೇವಲ ಎರಡೂವರೆ ವರ್ಷಕ್ಕೆ ಸಚಿವ ಸಂಪುಟದಿಂದ ಹೊರ ಹಾಕಲ್ಪಟ್ಟಿರುವುದು ಏಕೆ ಎಂಬುದನ್ನು ಕ್ಷೇತ್ರದ ಮಹಾಜನತೆಗೆ ವಿವರಿಸಲಿ.
![]() |
| ಕೊಪ್ಪ ವೃತ್ತದ ಕುವೆಂಪು ಪುತ್ಥಳಿ ಮುಂಭಾಗ ಕಿಮ್ಮನೆ ರತ್ನಾಕರ್ |
ಎಂದಿರುವ ಅವರು ವಾಸ್ತವವಾಗಿ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಕಿಮ್ಮನೆ ರತ್ನಾಕರ್ ಅವರಿಗೆ ಯಾವ ಗೌರವವೂ ಇಲ್ಲ. ಕುರುವಳ್ಳಿ ಅನಿಲ್ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಕುವೆಂಪು ವೃತ್ತದಲ್ಲಿ ಕುವೆಂಪು ಪ್ರತಿಮೆ ಸ್ಥಾಪಿಸಲು ನಿರ್ಧರಿಸಿ ಶಾಸಕರಾಗಿದ್ದ ಕಿಮ್ಮನೆ ಅವರನ್ನು ಕಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿಕೊಡಿಸುವಂತೆ ವಿನಂತಿಸಿದಾಗ ಅದೆಲ್ಲ ಆಗದ ಕಾರ್ಯ ಎಂದು ಲೇವಡಿ ಮಾಡಿ ಕುವೆಂಪು ಪ್ರತಿಮೆಯನ್ನು ಮೇಲಿನ ಕುರುವಳ್ಳಿ ವೃತ್ತದಲ್ಲಿ ಸ್ಥಾಪಿಸಲು ಸಲಹೆ ನೀಡಿದ್ದರು.ಆದರೆ ಅಲ್ಲಿ ಕಡಿದಾಳು ಮಂಜಪ್ಪ ಅವರ ಪ್ರತಿಮೆ ಸ್ಥಾಪಿಸಲು ನಿರ್ಧಾರ ಮಾಡಲಾಗಿತ್ತು.
ಆಗ ಹತಾಶರಾಗಿದ್ದ ಅನಿಲ್‌ರವರ ಪರಿಸ್ಥಿತಿ ಕಂಡು ತಾನೊಬ್ಬ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಸತತ ಮೂರು ಸಲ ಗೆದ್ದಂತ ಪ್ರತಿಷ್ಠಿತ ವ್ಯಕ್ತಿ ಎಂಬುದನ್ನು ಮರೆತು ಅನಿಲ್ ಅವರ ಮನೆಗೆ ಧಾವಿಸಿದ್ದ ಜ್ಞಾನೇಂದ್ರರವರು ಕುವೆಂಪು ಪ್ರತಿಮೆ ಸ್ಥಾಪನೆ ಕುರಿತು ಅವರ ಬೆನ್ನುತಟ್ಟಿ ಅವರ ಮನೆಯಿಂದಲೇ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಂಬಂಧಿಸಿದ ಅಧಿಕಾರಿಗಳಿಗೆ ಅನುಮತಿ ನೀಡುವಂತೆ ತಾಕೀತು ಮಾಡಿ ರಾಷ್ಟ್ರಕವಿ ಕುವೆಂಪು ಪುತ್ತಳಿ ಕುವೆಂಪು ವೃತ್ತದಲ್ಲಿ ಸ್ಥಾಪನೆಯಾಗಲು ಕಾರಣಕರ್ತರಾಗಿದ್ದರು. ಅದು ಅವರಿಗೆ ಅಭಿಮಾನದ ಕಾರ್ಯವಾಗಿತ್ತು ಆದರೆ ಆ ಪುತ್ತಳಿ ಸ್ಥಾಪನೆಗೆ ಕಾರಣಕರ್ತ ಎಂದು ಎಲ್ಲೂ ಅವರು ಹೇಳಿಕೊಂಡಿಲ್ಲ. ನಾನು ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ ಎಂದಿರುವ ಅಣ್ಣಪ್ಪ ಕುವೆಂಪು ಅವರಂತಹ ಮೇರು ವ್ಯಕ್ತಿಯನ್ನು ರಾಜಕಾರಣಕ್ಕೆ ಮತ್ತು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಹಾಗೂ ಕಿಮ್ಮನೆ ರತ್ನಾಕರ್ ನಡವಳಿಕೆ ಆಶಾಡಭೂತನದ್ದು ಎಂದು ಹೇಳಿದ್ದಾರೆ.

