ಮದುವೆಗೆ ಅಡ್ಡಿಯಾಗಿದ್ದ ‘ಕುಜ’ ದೋಷಕ್ಕೆ ಮಹಿಳಾ‌ ಪೊಲೀಸ್ ಬಲಿ

ಕುಜ ದೋಷಕ್ಕೆ ಯುವತಿ‌ಕೊನೆಗೂ ಬಲಿಯಾಗಿದ್ದಾಳೆ. ನಿನ್ನೆ ಮಣಿಪಾಲಿನಲ್ಲಿ ಯುವತಿ ಕೊನೆ ಉಸಿರೆಳೆದಿದ್ದಾಳೆ. ವಿಷ ಸೇವಿಸಿ 16 ದಿನಗಳ ಬಳಿಕ ಯುವತಿ ಸಾವನ್ನಪ್ಪಿದ್ದಾಳೆ.
ಮೇ.31 ರಂದು ಭದ್ರಾವತಿಯ ಆರ್ ಎಂ ಸಿ ಯಾರ್ಡ್ ನ ಬಳಿ ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾ ತಾನು ಪ್ರೀತಿಸಿದ ಅರಣ್ಯ ಇಲಾಖೆಯ ಆರ್ ಎಫ್ ಒ ಪ್ರವೀಣ್ ಕುಮಾರ್ ಮೊಕಾಶಿಯನ್ನ ಪ್ರೀತಿಸುತ್ತಿದ್ದು ಮದುವೆಗೆ ಜಾತಕ ಅಡ್ಡವಾಗಿದ್ದ ಕಾರಣ ವಿಷ ಸೇವಿಸಿದ್ದಳು.
ಪ್ರವೀಣ ಕುಮಾರ್ ಮೊಕಾಶಿ ಮತ್ತು ಸುಧಾ ಪರಸ್ಪರ ಪ್ರೀತಿಸಿ 6 ವರ್ಷಗಳಾಗಿವೆ. ಇಬ್ಬರು ಬೇರೆ ಬೇರೆ ಜಾತಿಯಾಗಿದ್ದು ಇಬ್ಬರು ಮದುವೆಗೆ ಮುಂದಾಗಿದ್ದರು. ಮದುವೆಗೆ ಸುಧಾರವರ ಜಾತಕ ಪಡೆದುಹೋದ ಪ್ರವೀಣ್ ನ ತಾಯಿ ಜ್ಯೋತಿಷ್ಯರು ಹುಡುಗಿಗೆ ಕುಜ ದೋಷವಿದೆ ಎಂದು ಹೇಳಿದ್ದಾರೆ. ಕುಜದೋಷವಿದ್ದರೆ ಮಗ ಬಲುಬೇಗ ಸಾವನ್ಬಪ್ಪುತ್ತಾನೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹಾಗಾಗಿ ಮದುವೆಯನ್ನ ನಿರಾಕರಿಸಿದ್ದರು.
ಎಷ್ಟೇ ಪ್ರಯತ್ನಿಸಿದರು ಪ್ರವೀಣ್ ತದನಂತರ ಸುಧಾರನ್ನ ಭೇಟಿಯಾಗಿರಲಿಲ್ಲ.ಮೇ. 30 ರಂದು ಭದ್ರಾವತಿ ತಾಲೂಕು ಉಬ್ರಾಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೊಕಾಶಿಯನ್ನ‌ ಭೇಟಿಯಾದಾಗ ನೀನು ಇಲ್ಲದೆ ನಾನು ಸಾಯುವುದಾಗಿ ಹೇಳಿದ್ದಾಳೆ. ಸಾವು ಹೇಗಿರುತ್ತದೆ ಎಂದು ನಾನು ತೋರಿಸುವೆ ಎಂದು ಸುಧಾಳನ್ನ ಬೈಕ್ ನಲ್ಲಿ ಕೂರಿಸಿಕೊಂಡು ಪ್ರವೀಣ್ ಅಡ್ಡಾದಿಡ್ಡಿ ಬೈಕ್ ಹೊಡೆದು ಆರ್ ಎಂಸಿ ಬಳಿ ಕರೆದುಕೊಂಡು ಬರುತ್ತಾನೆ.
ಆರ್ ಎಂಸಿಯ ಬಳಿ ಪ್ರವೀಣ್ ನಾಟಕವಾಡಿ ಇಬ್ವರು ವಿಷ ಸೇವಿಸಿ ಸತ್ತುಬಿಡೋಣ‌ ಎಂದು ತಿಳಿಸಿ ಮೊದಲು ನೀನು‌ ಕುಡಿ ಎಂದು ಸುಧಾಳಿಗೆ ವಿಷದ ಬಾಟಲ್ ನೀಡಿದ್ದಾನೆ. ವಿಷ ಸೇವಿಸಿ ಸುಧಾ ಪ್ರವೀಣ್ ವಿಷ‌ಸೇವಿಸುವುದನ್ನ ಕಾಣಲಿಲ್ಲವೆಂದು ಎಫ್ಐಆರ್ ನಲ್ಲಿ ದಾಖಲಿಸುತ್ತಾಳೆ.
ಹೀಗೆ ಕುಜ ದೋಷಕ್ಕೆ ಯುವತಿ ಬಲಿಯಾಗಿದ್ದಾಳೆ. ಅಪ್ಪಟ ಪ್ರೀತಿ ಜ್ಯೋತಿಷ್ಯದ ಕುಜದೋಷಕ್ಕೆ ಆಹುತಿಯಾಗಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post