2021-22ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ಎಂಕಾಂ ಪದವಿಯಲ್ಲಿ ತುಂಗಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಶ್ರೀಮತಿ ಗಾಯತ್ರಿ ಕೆ.ಎ. ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. ಗಾಯತ್ರಿ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದ ಅನಂತಕುಮಾರ್ ಕೆ.ಆರ್. ಮತ್ತು ಅನಸೂಯ ಪಿ.ಎನ್. ದಂಪತಿ ಪುತ್ರಿ.
ತುಂಗಾ ಕಾಲೇಜಿಗೆ ಪ್ರಸಕ್ತ ವರ್ಷದಲ್ಲಿ 4 ರ್‍ಯಾಂಕ್ ಬಂದಿವೆ. ಕು.ಸುನೈನಾ, ಜ್ಯೋತಿ ಎಸ್. ಪ್ರಭು 6ನೇ ರ್‍ಯಾಂಕ್, ಅನ್ವಿತಾ ಬಿ.ಜೆ. 7ನೇ ರ್‍ಯಾಂಕ್ ಪಡೆದಿದ್ದಾರೆ.