ಮೆಸ್ಕಾಂನಿಂದ ಮೀಟರ್ ಸುಡುವ ಅಭಿಯಾನ...?
ಶಾರ್ಟ್ ಸರ್ಕ್ಯೂಟ್ ಭಯದಲ್ಲಿ ಗ್ರಾಹಕರು
ಅವೈಜ್ಞಾನಿಕವಾಗಿ ಅಲ್ಯೂಮಿನಿಯಂ, ಕಾಪರ್ ವೈರ್ ಜೋಡಣೆ
![]() |
| ಹಳೆಯ ಮರದ ಬೋರ್ಡ್ ಬದಲಿಗೆ ಅಳವಡಿಸಿದ ಕಬ್ಬಿಣದ ಬಾಕ್ಸ್‌ನಲ್ಲಿ ಬೆಂಕಿ |
ತಾಲ್ಲೂಕಿನ ವಿವಿಧ ಭಾಗದಲ್ಲಿ
ಈಗಾಗಲೇ ಗ್ರಾಹಕರು ಪದೇ ಪದೇ ಮೀಟರ್ ಬದಲಾಯಿಸುತ್ತಿದ್ದರು ಸಮಸ್ಯೆ
ಬಗೆಹರಿಯುತ್ತಿಲ್ಲ. ಮೀಟರ್ ಬದಲಾವಣೆಗೆ ಬಂದ ಸಿಬ್ಬಂದಿಗಳ ಕೈ ಬಿಸಿ ಮಾಡುವುದು ಮಾತ್ರ ತಪ್ಪುತ್ತಿಲ್ಲ.
ಈ ಕುರಿತು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
![]() |
| ಅವೈಜ್ಞಾನಿಕ ಅಲ್ಯೂಮಿನಿಯಂ, ಕಾಪರ್ ವೈಯರ್ ಜೋಡಣೆ |
ಈ ಎರಡು ಜಾತಿಯ ವೈರ್ಗಳು ಗುಣ, ಸ್ವಭಾವ ಬೇರೆಯದೆ ಆಗಿದೆ. ಇವೆರಡು ವೈರ್‌ಗಳ ಜೋಡಣೆ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಮೊದಲು ಸಣ್ಣ ಪ್ರಮಾಣದ ಘರ್ಷಣೆ ಏರ್ಪಟ್ಟು ಅಲ್ಯೂಮಿನಿಯಂ ವೈರ್‌ಗೆ ರಸ್ಟ್ ಹಿಡಿಯುತ್ತದೆ. ಈ ಹಂತದಲ್ಲಿ ಯಾವಾಗ ಬೇಕಾದರೂ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ತಾಂತ್ರಿಕವಾಗಿ ಪಕ್ವತೆ ಹೊಂದದ ಸಿಬ್ಬಂದಿಗಳು ಇಂತಹ
ತಪ್ಪುಗಳನ್ನು ದಿನನಿತ್ಯ ಮಾಡುತ್ತಿದ್ದಾರೆ. ಇಲಾಖೆಯಿಂದ ಕೂಡ ಅವೈಜ್ಞಾನಿಕ ಕಾಮಗಾರಿಗೆ ಅವಕಾಶ ನೀಡಲಾಗಿದೆ.
ವೈಜ್ಞಾನಿಕ ಉಪಕರಣಗಳ ಸರಬರಾಜು ಇಲ್ಲದಿರುವುದರಿಂದ ಪರಿಣತಿ ಪಡೆದ ಸಿಬ್ಬಂದಿಗಳೂ ಈ ಕೆಲಸವನ್ನು ಗೊತ್ತಿದ್ದು
ಮಾಡಬೇಕಾದ ಅನಿವಾರ್ಯ ಎದುರಾಗಿದೆ.
ಅವೈಜ್ಞಾನಿಕ ಯೋಜನೆಯಿಂದ ಗ್ರಾಹಕರು ವಾರಕ್ಕೊಂದು ಹೊಸ ಮೀಟರ್ ಅಳವಡಿಸುವಂತಾಗಿದೆ. ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳಾದ ಟಿವಿ, ಮಿಕ್ಸಿ, ಐರನ್ ಬಾಕ್ಸ್, ಫ್ರಿಡ್ಜ್, ವಾಷಿಂಗ್ ಮಷಿನ್‌ಗಳು ವಿದ್ಯುತ್ ವ್ಯತ್ಯಯದಿಂದ ಹಾಳಾಗುವುದು, ಸುಡುವುದು ನಡೆಯುತ್ತಿದೆ ಎಂದು ದೂರುತ್ತಿದ್ದಾರೆ.
![]() |
| ಶಾರ್ಟ್‌ನಿಂದಾಗಿ ಮಬ್ಬುಗಟ್ಟಿದ ಮೀಟರ್ ಬೋರ್ಡ್ |
ವಿದ್ಯುತ್ ಬಿಲ್ ಕಟ್ಟುವುದು ತ್ರಾಸ
ವಿದ್ಯುತ್ ಬಿಲ್ ಪಾವತಿಯಾಗಿದ್ದರೂ ಕೂಡ ಖಾತೆಯಲ್ಲಿ
ಜಮಾ ಆಗುತ್ತಿಲ್ಲ. ಗ್ರಾಮೀಣ ಪ್ರದೇಶದವರು ಹಳೆಯ ಬಿಲ್‌ಗಳನ್ನು ಹಿಡಿದುಕೊಂಡು ಸರಿಮಾಡಿಸಿಕೊಳ್ಳಬೇಕು.
ಇದು ಮೂರರಿಂದ ನಾಲ್ಕುದಿನ ಕಚೇರಿ ಅಲೆಯುವ ವಹಿವಾಟು.
ಕರೆಂಟು ದೂರು


