ಸಂಕದಹೊಳೆ ಸೌಹಾರ್ದ ಸಹಕಾರಿ ಸಂಘ

ಅಧ್ಯಕ್ಷರಾಗಿ ನಾಗೇಶ್ ಅವಿರೋಧ ಆಯ್ಕೆ
ಉಪಾಧ್ಯಕ್ಷರಾಗಿ ಭಾಸ್ಕರ್‌ ಎಸ್.ಬಿ. ಆಯ್ಕೆ
ಗ್ರಾ.ಪಂ. ಮಟ್ಟದಲ್ಲಿ ತಾಲ್ಲೂಕು ಮಟ್ಟದ ಸೌಹಾರ್ದ ಸಹಕಾರಿ ಉದಯ

ಸಂಘದ ಅಧ್ಯಕ್ಷ ಸಂಕದಹೊಳೆ ನಾಗೇಶ್‌

ತೀರ್ಥಹಳ್ಳಿ ಪಟ್ಟಣ ಸಮೀಪದ ಸಂಕದಹೊಳೆ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾಗಿಗುತ್ತಿಗೆದಾರ, ಉದ್ಯಮಿ ನಾಗೇಶ್, ಉಪಾಧ್ಯಕ್ಷರಾಗಿ ಭಾಸ್ಕರ್ ಎಸ್.ಬಿ. ಅವಿರೋಧ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಭಾಸ್ಕರ್‌ ಎಸ್.ಬಿ.
ಇದಕ್ಕೂ ಮೊದಲು ಆಡಳಿತ ಮಂಡಳಿ ಕೂಡ ಅವಿರೋಧ ಆಯ್ಕೆಯಾಗಿತ್ತು. ನಿರ್ದೇಶಕರಾಗಿ ಸಾಮ್ಯನ್ಯ ಕ್ಷೇತ್ರದಿಂದ ಬಾಲಕೃಷ್ಣಮೂರ್ತಿ, ಕೆ.ಎಲ್‌. ಪ್ರಭಾಕರ, ನಾಗರಾಜ ಕಾಮತ್, ತಿಮ್ಮಪ್ಪ ಸುರಾನಿ, ಬಿ.ಸಿ. ಶ್ರೀನಿವಾಸಗೌಡ ಮಹಿಳಾ ಕ್ಷೇತ್ರದಿಂದ ವಿಶಾಲ ಎಸ್.‌ ಗೌಡ, ಲತಾ ಕಾರ್ತಿಕ್‌, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ರವೀಂದ್ರ ಎಸ್‌, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಜಯ, ಪರಿಶಿಷ್ಟ ಪಂಗಡದಿಂದ ಬಾಲರಾಜ್‌ ನಾಯ್ಕ ಆವಿರೋಧ ಆಯ್ಕೆಯಾಗಿದ್ದರು.

ಸಂಘದ ಆಡಳಿತ ಮಂಡಳಿಯೊಂದಿಗೆ ಬಿ.ಕೆ. ವಾದಿರಾಜ್
ವಿಶೇಷವೆಂದರೆ ಇದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭಗೊಂಡಿರುವ ತಾಲ್ಲೂಕು ಮಟ್ಟದ ಸೌಹಾರ್ದ ಸಹಕಾರಿ ಸಂಘವಾಗಿದೆ. ಅಧ್ಯಕ್ಷ ನಾಗೇಶ್‌ ಸಾರ್ವಜನಿಕ ಚಟುವಟಿಕೆಗಳ ಮೂಲಕ ತಾಲ್ಲೂಕಿನಾದ್ಯಂತ ಪರಿಚಿತರಾಗಿರುವ ಉತ್ಸಾಹಿಯಾಗಿದ್ದು ಈಗಾಗಲೇ ಕೆಲವು ಸಹಕಾರ ಸಂಘಗಳ ಮೂಲಕ ಸಹಕಾರಿ ಕ್ಷೇತ್ರದ ಅನುಭವ ಪಡೆದುಕೊಂಡಿದ್ದು ಈ ನೂತನ ಸಂಘವನ್ನು ಪ್ರಾಮಾಣಿಕವಾಗಿ ಎತ್ತರಕ್ಕೆ ಬೆಳೆಸಬೇಕೆಂಬ ಹಂಬಲ ಹೊಂದಿದ್ದಾರೆ.

ಸಂಕದಹೊಳೆ ಸಹಕಾರಿ ಕ್ಷೇತ್ರದಲ್ಲಿ ಸಹಕಾರಿ ರತ್ನ ಟಿಎಪಿಸಿಎಂಎಸ್‌ ಅಧ್ಯಕ್ಷ ನಾಗರಾಜ ಶೆಟ್ಟರಂತಹ ಮೇರು ಸಹಕಾರಿಯನ್ನು ಕೊಡುಗೆಯಾಗಿ ನೀಡುವ ಮೂಲಕ ಗುರುತಿಸಿಕೊಂಡಿದೆ. ಅಲ್ಲದೇ ಇಲ್ಲಿನ ಹಾಲು ಉತ್ಪಾದಕರ ಸಂಘ ಕೂಡ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಘಗಳಲ್ಲಿ ಒಂದು ಎಂಬ ಗೌರವಕ್ಕೆ ಪಾತ್ರವಾಗಿದೆ.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಾದಿರಾಜ್‌, ಲ. ಪಾಂಡುರಂಗಪ್ಪ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿ ಶುಭ ಕೋರಿದರಲ್ಲದೇ ಸಹಕಾರಿ ರಂಗದ ತೀರ್ಥಹಳ್ಳಿ ಕ್ಷೇತ್ರದ ಕೊಡುಗೆ ಸ್ಮರಿಸಿ ಜವಾಬ್ದಾರಿಯುತವಾಗಿ ಮುನ್ನಡೆಯುವಂತೆ ಸಲಹೆ ನೀಡಿದರು.

ಸುಮಾರು 398 ಶೇರುದಾರರನ್ನು ಹೊಂದಿರುವ ಸೌಹಾರ್ದ ಸಂಘವೂ ಹಾಲಿ ಏಳುವರೆ ಲಕ್ಷ ದುಡಿಯುವ ಬಂಡವಾಳವನ್ನು ಹೊಂದಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post