ಆರೋಪಿಗಳನ್ನು ಕೂಡಲೇ ಬಂಧಿಸಿ
ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟ ಅಗ್ರಹ
ತೀರ್ಥಹಳ್ಳಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ
ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ
ಬಿ.ಆರ್.ಮೋಹನ್, ಖಜಾಂಚಿ ಮಧುರಾಜ್ ಹೆಗ್ಡೆ, ಮಾಧ್ಯಮ ಸಲಹೆಗಾರ ಅರುಣ್ ಕುಮಾರ್, ಅರೇಹಳ್ಳಿ ಪಂಚಾಯಿತಿ
ಸದಸ್ಯ ಸಿದ್ಧಾರ್ಥ್ ಒಕ್ಕೂಟದ ವತಿಯಿಂದ ಮುಳುಬಾಗಿಲು ಪಂಚಾಯಿತಿ ಸದಸ್ಯ ಸಚಿನ್ ಮೇಲಿನ ಹಲ್ಲೆಯ ಘಟನೆಯನ್ನು ಖಂಡಿಸಿದರು.
ಸಾರ್ವಜನಿಕ ಹಿತದೃಷ್ಟಿಯಿಂದ ಚುನಾಯಿತ ಪ್ರತಿನಿಧಿ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅವರ ಮೇಲೆ ಕೆಲವರು ದೈಹಿಕ ಹಲ್ಲೆ ನಡೆಸಿರುವುದು ಖಂಡನೀಯ. ಹಿಂದೆ ಇಂತಹ ಹಲವಾರು ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ. ತಕ್ಷಣ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ತೀರ್ಥಹಳ್ಳಿ ತಾಲ್ಲೂಕಿನ ಮುಳುಬಾಗಿಲು ಗ್ರಾಮ ಪಂಚಾಯಿತಿ
ವ್ಯಾಪ್ತಿಯ ಸಿದ್ದೇಶ್ವರ ಬಡವಾಣೆಯಲ್ಲಿ 15ನೇ ಹಣಕಾಸಿ ಅಡಿಯಲ್ಲಿ 95 ಸಾವಿರ ಮೊತ್ತದ ಕಾಂಕ್ರಿಟ್
ರಸ್ತೆ ಕಾಮಗಾರಿ ನಡೆಯುತ್ತಿದೆ. ಒಂದು ಗುಂಪು ವಾಹನ ಓಡಾಡದ ಹಾಗೆ ರಸ್ತೆಯಲ್ಲೇ ಮೆಟ್ಟಿಲು ಮಾಡುವಂತೆ ಒತ್ತಾಯಿಸಿದೆ.
ಗ್ರಾಮಸ್ಥರು ಇದನ್ನು ವಿರೋಧಿಸಿದ್ದಾರೆ. ಬೆಳಗ್ಗಿನಿಂದ ಕಾಮಗಾರಿ ವೀಕ್ಷಣೆ ನಡೆಸುತ್ತಿದ್ದ ಸಚಿನ್
ಮಧ್ಯಸ್ಥಿಕೆ ವಹಿಸಿ ಗ್ರಾಮಸ್ತರ ಮನವಿಗೆ ಸ್ಪಂದಿಸಿದ್ದಾರೆ. ಇದನ್ನು ಸಹಿಸದ ಸಚಿನ್‌ನಿಂದ ಪರಾಜಿತಗೊಂಡ
ವ್ಯಕ್ತಿ ಹಾಗೂ ಕೆಲವು ಪುಡಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾ.ಪಂ.
ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ನೀರಿನ ಬಿಲ್ ಕಲೆಕ್ಟರ್ ಜೊತೆಗೆ ತೆರಳಿದ್ದೇವೆ. ವೀಡಿಯೋ
ಮಾಡುವುದನ್ನು ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ಹೆದರಿಸಿದ್ದಾರೆ. ಹಲ್ಲೆಯಿಂದಾಗಿ ಸಚಿನ್ ಎದೆ
ಭಾಗ ಮತ್ತು ಕಾಲಿಗೆ ಗಂಭೀರ ಸ್ವರೂಪದ ಪೆಟ್ಟಾಗಿದ್ದು ಆತ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ಮಾಡಿ ಪರಾರಿಯಾಗಿರುವ ಆರೋಪಿಗಳಾದ ಮಹಮ್ಮದ್ ಇಲಿಯಾಸ್, ಫೈಸಲ್, ಫೈರೋಜ್
ಮತ್ತು ಸಮದ್ ಅವರನ್ನು ಪೊಲೀಸರು ತಕ್ಷಣ ಬಂಧಿಸಬೇಕು ಎಂದು
ಒಕ್ಕೂಟ ಒತ್ತಾಯಿಸಿತು.

