ಪೋಷಾಕು ವಿತರಿಸಿದ ಆರಗ ಜ್ಞಾನೇಂದ್ರ
ಆಶ್ರಯ ಸಮಿತಿ ಸಭೆಗೆ ಪತ್ರಕರ್ತರಿಗೆ ನಿರ್ಬಂಧ
ಗೃಹಸಚಿವರು ಯಾಕೆ ಹೀಗೆ ಮಾಡಿದರ್ರು….?
ಈ ಸಂದರ್ಭದಲ್ಲಿ ಅವರು ಮಾತನಾಡಿ, ಮನುಷ್ಯ
ಮುಖ್ಯವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯಕ್ಕೆ ತೊಂದರೆಯಾದರೆ ದುಷ್ಪರಿಣಾಮ ಎದುರಿಸಬೇಕಾಗುತ್ತದೆ.
ಪಟ್ಟಣ ಪಂಚಾಯಿತಿಗೆ ಪೌರ ಕಾರ್ಮಿಕರು ಬಹಳ ದೊಡ್ಡ ಆಸ್ತಿ. ಅವರಿಂದಾಗಿ ಚುನಾಯಿತ ಸದಸ್ಯರುಗಳು ಹೆಚ್ಚಿನ
ಒತ್ತಡವನ್ನು ನಿವಾರಣೆ ಮಾಡಿಕೊಂಡಿದ್ದಾರೆ. ಪೌರ ಕಾರ್ಮಿಕರು ಪಟ್ಟಣದ ಆರೋಗ್ಯ ಕಾಪಾಡುವ ಮಹತ್ವದ ಜವಾಬ್ದಾರಿ
ನಿರ್ವಹಿಸುತ್ತಾರೆ. ಅವರ ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ. ಹಂಚಿಕೆಯಾದ ಪೋಷಾಕುಗಳನ್ನು ಎಲ್ಲಾ
ಸಂದರ್ಭದಲ್ಲೂ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್,
ಪ್ರಭಾರ ತಹಶೀಲ್ದಾರ್ ಮಂಜುಳಾ ಭಜಂತ್ರಿ, ಮುಖ್ಯಾಧಿಕಾರಿ ಕುರಿಯಾ ಕೋಸ್ ಇದ್ದರು.
ಆಶ್ರಯ ಸಮಿತಿ ಸದಸ್ಯರ ಘೋಷಣೆ
ಬಡ ಕುಟುಂಬಗಳಿಗೆ ಮನೆ ಹಾಗೂ ಸೂಕ್ತ ಸ್ಥಳ ಗುರುತಿಸುವ
ಉದ್ದೇಶದಿಂದ ಶಾಸಕರ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ರಚನೆ ಮಾಡಲಾಗಿದ್ದು ಸಮಿತಿಯ ಸದಸ್ಯರಾಗಿ ಕುರುವಳ್ಳಿ
ವೈ ಗಣಪತಿ, ಯಡೂರು ಸುರೇಂದ್ರ, ಸವಿತಾ ಉಮೇಶ್, ಅನಿತಾ ಪೆರವೊ ಅವರನ್ನು ನೇಮಿಸಲಾಗಿದೆ.
ಪತ್ರಕರ್ತರಿಗೆ ನಿರ್ಬಂಧ
ಎಲ್ಲಾ ಪತ್ರಕರ್ತರಿಗೆ ಪಟ್ಟಣದ ಆಶ್ರಯ ಸಮಿತಿ ಸಭೆಗೆ
ಮುಖ್ಯಾಧಿಕಾರಿ ಕುರಿಯಾ ಕೋಸ್ ಆಹ್ವಾನಿಸಿದ್ದರು. ಆದರೆ ಪೋಷಾಕುಗಳ ವಿತರಣೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ
ಗೃಹಸಚಿವ ಆರಗ ಜ್ಞಾನೇಂದ್ರ “ಉಳಿದವರು ಹೊರಗೆ ಹೋಗಬಹುದು” ಎಂದರು. ಆಶ್ರಯ ಸಮಿತಿ ಸಭೆಗೆಂದು ತೆರಳಿದ್ದ ಎಲ್ಲಾ ಪತ್ರಕರ್ತರಿಗೂ ಸಭೆ
ನಿರ್ಭಂದಿಸಲಾಗಿತ್ತು. ಈ ಹಿಂದೆ ಆಶ್ರಯ ಸಮಿತಿ ಸಭೆ ಪತ್ರಕರ್ತರ ಉಪಸ್ಥಿತಿಯಲ್ಲಿ ನಡೆಯುತ್ತಿತ್ತು.
ಆದರೆ ಹೊಸ ಸಮಿತಿಯಲ್ಲಿ ಯಾಕೆ ಅವಕಾಶ ಸಿಕ್ಕಿಲ್ಲ ಎಂಬ ಪ್ರಶ್ನೆ ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು,
ಪಟ್ಟಣ ಪಂಚಾಯಿತಿ ಸದಸ್ಯರಿಗೆ ಪ್ರಶ್ನೆಯಾಗಿ ಉಳಿದಿದೆ.
