ತೀರ್ಥಹಳ್ಳಿ ಕಾಂಗ್ರೆಸ್‌ನಲ್ಲಿ ನಿರುತ್ಸಾಹ

ಬಲಪ್ರಯೋಗಕ್ಕೆ ಮಾತ್ರ ಸೀಮಿತಗೊಂಡ ಯುವ ನಾಯಕರು
ಜನಸಾಮಾನ್ಯರ ಗೋಳು ಯಾರಿಗೂ ಬೇಡ
ಯುವ ಕಾಂಗ್ರೆಸ್‌ ಘಟಕ ಆಟಕುಂಟು ಲೆಕ್ಕಕ್ಕಿಲ್ಲ…!

ಬಲಹೀನ ಯುವ ನಾಯಕರು

ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ, ತೀರ್ಥಹಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ.


ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಳೆದ 5 ದಶಕದಿಂದ ಬಗರ್‌ಹುಕುಂ ಸಾಗುವಳಿದಾರರು ನ್ಯಾಯಕ್ಕಾಗಿ ಪ್ರತಿನಿತ್ಯ ಅಲೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಚುನಾವಣೆ ಸಂದರ್ಭ ಬೂಟಾಟಿಕೆಯ ಮೊಸಳೆ ಕಣ್ಣೀರು ಹಾಕುವುದು ಎಲ್ಲಾ ಅಭ್ಯರ್ಥಿ ಪಾಲಿಗೆ ವರದಾನವಾಗಿದೆ. ಕಾಂಗ್ರೆಸ್‌ನ ಮೌಲ್ಯಾಧಾರಿತ ರಾಜಕಾರಣ ಕಣ್ಣು ಒರೆಸುವ ತಂತ್ರಕ್ಕೆ ಸೀಮಿತಗೊಂಡಿದೆ. ಪಕ್ಷದ ಲಾಭಿ ಮತದಾರರನ್ನು ದಿಕ್ಕುಪಾಲಾಗುವಂತೆ ಮಾಡಿದೆ. ಯಾವೊಬ್ಬ ಬಡವರ ಕೆಲಸ ಆಗುತ್ತಿಲ್ಲ. ಆಡಳಿತರೂಢ ಪಕ್ಷದಲ್ಲಿ ಸಾಧ್ಯವಾಗದ ಕೆಲಸವನ್ನು ವಿರೋಧಪಕ್ಷದ ಮೂಲಕ ಮಾಡುವುದು ಪ್ರಜಾಪ್ರಭುತ್ವದ ಬಹುದೊಡ್ಡ ಹೊಣೆಗಾರಿಕೆ. ಅದರ ಪ್ರಯೋಗ ಕೂಡ ನಡೆಯುತ್ತಿಲ್ಲ.

ತೀರ್ಥಹಳ್ಳಿ ತಾಲ್ಲೂಕು ಆಡಳಿತದಿಂದ ಜನಸಾಮಾನ್ಯರ ಕೆಲಸ ಆಗುತ್ತಿಲ್ಲ. ಎಲ್ಲೆಲ್ಲೂ ಲಂಚಾವತಾರ ತಾಂಡವವಾಡುತ್ತಿದ್ದರೂ ಯುವ ನೇತರಾರು ಎನಿಸಿಕೊಂಡಿರುವವರು ಬಲ ಪ್ರಯೋಗ ಮಾತ್ರ ನಂಬಿದಂತಿದೆ. ಆಡಳಿತಾರೂಢ ಪಕ್ಷದ ಮೂಗಿನ ನೇರಕ್ಕೆ ಸ್ವಂತ ಕೆಲಸ ಮಾಡಿಕೊಳ್ಳುವ ಹಂತಕ್ಕೆ ಇಳಿದಿದ್ದಾರೆ ಎಂಬ ಪ್ರಭಲ ಆರೋಪಗಳು ಕಾಂಗ್ರೆಸ್‌ ಪಾಳಯದಲ್ಲಿ ಕೇಳಿಬರುತ್ತಿದೆ.

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಆದಿಯಾಗಿ ಆರ್.ಎಂ. ಮಂಜುನಾಥ ಗೌಡರ ಬಣದಿಂದಲೂ ಅಂತಹ ಉತ್ಸಾಹಭರಿತ ಸಂಘನೆಯಾಗುತ್ತಿಲ್ಲ. ಗೆದ್ದವನು ಸೋತ, ಸೋತವನು ಸತ್ತ ಎಂಬ ಅಭಿಲಾಷೆಯಲ್ಲಿ ಕಾರ್ಯಪ್ರವೃತ್ತರಾದಂತೆ ಕಾಣುತ್ತಿದೆ. ಟಿಕೆಟ್‌ ವಿಚಾರದ ಗೊಂದಲದಿಂದ ಕಾಂಗ್ರೆಸ್‌ ಪಕ್ಷ ಸಂಘಟನೆ ಡೋಲಾಯಮಾನವಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಸಭೆ, ಸಮಾರಂಭಗಳು ನಡೆದರು ಅದು ಬಣಕ್ಕೆ ಮಾತ್ರ ಸೀಮಿತವಾಗುತ್ತಿವೆ. ರಾಜ್ಯದಲ್ಲಿಯೂ ಇಂತಹ ಪೈಪೋಟಿ ನಡೆಯುತ್ತಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದ ಗೊಂದಲ ಏರ್ಪಟ್ಟಿದೆ ಎಂಬ ಆರೋಪ ಕಟ್ಟಾ ಕಾಂಗ್ರೆಸ್‌ ಹುರಿಯಾಳುಗಳದ್ದು.

ಕಿಮ್ಮನೆ ರತ್ನಾಕರ್‌ ಪಾದಯಾತ್ರೆ ಸ್ವಲ್ಪಮಟ್ಟಿನ ಆಕ್ಸಿಜನ್‌ ನೀಡಿದರೆ ಕೆಲಸ ಮಾಡಿದವರು ಮಾತ್ರ ಮೂಲೆಗುಂಪಾಗುತ್ತಾರೆ ಎಂಬ ಕಿಡಿನುಡಿ ಕಾರ್ಯಕರ್ತರದ್ದು. ಮಂಜುನಾಥ ಗೌಡರದ್ದು ಇಂತಹದ್ದೇ ಪರಿಸ್ಥಿತಿ. ಬಿಫಾರ್ಮ್‌ ಯಾರು ಗಿಟ್ಟಿಸಿಕೊಳ್ಳುತ್ತಾರೆ ಎಂಬ ಗೊಂದಲ ಮಾತ್ರ ಚುನಾವಣೆಯ ವರೆಗೆ ಮುಂದುವರೆದ ಭಾಗವಾಗಿ ಕೊನೆಯ ಹಂತದ ಬದಲಾವಣೆಯನ್ನು ಎರಡೂ ಪಾಳಯ ಎದುರು ನೋಡುವಂತಾಗಿದೆ.

ಇನ್ನು ಅಗ್ನಿಪಥ ಸೈನಿಕರ ನೇಮಕಾತಿ, ಪಠ್ಯ ಪರಿಷ್ಕರಣೆ ಮಾತ್ರ ದೇಶದಲ್ಲಿ ಆಗುತ್ತಿರುವ ಮಹತ್ವದ ಬದಲಾವಣೆ ಎಂಬ ಹೋರಾಟ ಮಾತ್ರ ಕೆಲವು ತಿಂಗಳಿನಿಂದ ಹಾಸ್ಯಾಸ್ಪದವಾಗಿ ಸಾರ್ವಜನಿಕರನ್ನು ಕಾಡುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ, ಮಿತಿ ಮೀರಿದ ಖಾಸಗೀಕರಣ, ಬ್ಯಾಂಕ್‌ ವಿಲೀನ, ರಾಷ್ಟ್ರೀಕರಣ, ಕೇಂದ್ರೀಕೃತ ವ್ಯವಸ್ಥೆ, ವಿದೇಶಾಂಗ ನೀತಿ, ಗಡಿ ಅಕ್ರಮ ಪ್ರವೇಶ, ನದಿ ಜೋಡಣೆ, ಸಾಗರಮಾಲ, ಭಾರತಮಾಲ, ಉಜ್ವಲ ಸಬ್ಸಿಡಿ ಗ್ಯಾಸ್‌, ಮಿತಿ ಮೀರಿದ ರಾಸಾಯನಿಕ ಬಳಕೆ, ಸಸ್ಯ-ಪ್ರಾಣಿ ಸಂಕುಲದ ಮೇಲಾಗುತ್ತಿರುವ ದುಷ್ಪರಿಣಾಮ, ಕೃಷಿ ಕಾಯ್ದೆ, ನಗರೋತ್ಥಾನ, ಭಾಷೆ, ಗ್ರಾಮೀಣ ಭಾಗ ಕಡೆಗಣನೆ, ತಾಲ್ಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆ, ಕಡಿತಗೊಂಡ ಸ್ಥಳೀಯ ಸರ್ಕಾರದ ಅನುದಾನ, ಆಡಳಿತಶಾಹಿ ವ್ಯವಸ್ಥೆ, ಲಂಚಾವತಾರ, ಕೇಂದ್ರ-ರಾಜ್ಯ ಸರ್ಕಾರದಿಂದ ಸರ್ಕಾರಿ ಉದ್ಯೋಗ ನೇಮಕಾತಿ ಕಡೆಗಣೆನೆ, ಬಿಪಿಎಲ್‌ ಕಾರ್ಡ್‌, ದುಬಾರಿ ಶಿಕ್ಷಣ, ಆಯುಷ್‌ಮಾನ್ ಕಾರ್ಡ್‌, ಅರಣ್ಯ ಹಕ್ಕು, ಮನೆ ಮಂಜೂರಾತಿ, ಬಗರ್‌ ಹುಕುಂ ಇಂತಹ ವಿಚಾರಗಳನ್ನು ಮುಂದಿಟ್ಟು ನೂರಾರು ಹೋರಾಟಗಳನ್ನು ರೂಪಿಸಬೇಕಾದ ಯುವ ಕಾಂಗ್ರೆಸ್‌, ಬ್ಲಾಕ್‌, ಗ್ರಾಮಾಂತರ ಕಾಂಗ್ರೆಸ್‌ ನಿರುತ್ಸಾಹ ತೋರಿಸುತ್ತಿದೆ.

ಮೂಲ ಕಾರ್ಯಕರ್ತರ ಕಡೆಗಣನೆ

ಬೆಂಗಳೂರಿನಲ್ಲಿ ಅಗ್ನಿಪಥ ವಿರೋಧಿಸಿ ವಿಧಾನಸೌಧ ಚಲೋ ಹೋರಾಟದಲ್ಲಿ ಭಾಗವಹಿಸಿದ್ದ ಯುವ ನಾಯಕರ ಧೋರಣೆ ಕಾಂಗ್ರೆಸ್ ಪಾಳಯದಲ್ಲೇ ವಿವಾಧಕ್ಕೆ ಗುರಿಯಾಗಿದೆ. ಸ್ಥಳೀಯ ಹೋರಾಟಗಳಿಗೆ ಭಾಗವಹಿಸಲು ಗೋಗರೆಯುವ ನಾಯಕರು ರಾಜಧಾನಿಗೆ ಸೌಜನ್ಯಕ್ಕೂ ಆಹ್ವಾನಿಸಲಿಲ್ಲ. ಧಿಡೀರನೇ ಹೋರಾಟದಲ್ಲಿ ಭಾಗವಹಿಸಿದ್ದು, ಬಂಧನಕ್ಕೆ ಒಳಗಾಗಿರುವ ವಿಚಾರ ಕಾಂಗ್ರೆಸ್‌ನ ಬಿಸಿ ರಕ್ತದ ಯುವ ಕಾರ್ಯಕರ್ತರನ್ನು ಕುದಿಯುವಂತೆ ಮಾಡಿದೆ. ಗ್ರಾಮೀಣ ಪ್ರದೇಶಲ್ಲಿ ಕಾಂಗ್ರೆಸ್‌ ಶುದ್ದವಾದ ಕನ್ನಡಿ ಜೋಡಿಸಲು ಅಸಾಧ್ಯವೆಂಬಂತೆ ಒಡೆದು ಚೂರು ಚೂರಾಗಿದೆ. ಮುಖಂಡರು ಯುವ ಕಾಂಗ್ರೆಸ್‌ ಕಾರ್ಯಕರ್ತರ ಮಾತಿಗೆ ಮೂರು ಕಾಸಿನ ಬೆಲೆ ನೀಡುತ್ತಿಲ್ಲ ಎಂಬ ಆರೋಪಗಳು ಬಲವಾಗಿದೆ. ನಮಗೆ ನಾವೇ ಹೀರೋ ಎಂಬ ಧೋರಣೆಗಳು ಪಕ್ಷ ಬಿಡಲು ಕಾರಣ ಎಂಬ ಆಪಾದನೆ ಕಾರ್ಯಕರ್ತರದ್ದು.

ಹಳ್ಳ ಹಿಡಿದ ಸಂಘಟನೆ

ತೀರ್ಥಹಳ್ಳಿ ವಿಧಾನಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಸಂಘಟನೆಯುಳ್ಳ ಮನೆ ಕಾಣಿಸುತ್ತಿಲ್ಲ. ಈಗಾಗಲೇ ಹಳೆಯ ಉರುಗೋಲಿಗೆ ಸಂಘಟನಾ ಜವಾಬ್ದಾರಿ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಮ್ಮ ಅನುಯಾಯಿಗಳ ಮನೆಯಲ್ಲಿ ಕುಳಿತು ಸದಸ್ಯತ್ವ ನೋಂದಣಿ ಅಭಿಯಾನ ಮಾಡಿದ್ದಾರೆ. ಬೂತ್‌ ಮಟ್ಟದ ಯಾವ ಸಭೆ, ಸಮಾರಂಭ, ಸಂಘಟನೆ ಇಲ್ಲ ಎಂಬ ಆರೋಪ ಕೆಪಿಸಿಸಿ ಅಂಗಳದ ಮುಂದಿದ್ದರು ಸಂಘಟನೆ ದೃಷ್ಟಿಯಲ್ಲಿ ಹಿಂದೆ ಬಿದ್ದಿದೆ. ಕಪೋಕಲ್ಪಿತ ಗೆಲವು ನಿಶ್ಚಿತ ಎಂಬ ಧೋರಣೆ ಮಾತ್ರ ತಳ ಮಟ್ಟದ ಕಾರ್ಯಕರ್ತರನ್ನು ಕಿಂಚಿತ್ತೂ ಎಬ್ಬಿಸಿಲ್ಲ. ಯುವ ಕಾಂಗ್ರೆಸ್‌ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹುದ್ದೆಗಳಿಗೆ ಮಾತ್ರ ಸೀಮಿತವಾಗಿದೆ. ಬ್ಲಾಕ್‌, ಗ್ರಾಮಾಂತರ ಕಾಂಗ್ರೆಸ್‌ನದ್ದೂ ಇದೇ ಪರಿಸ್ಥಿತಿಯಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಕುಳಿತು ಸಂಘಟನೆ ಜವಾಬ್ದಾರಿ ನೀಡಲಾಗುತ್ತಿದೆ. ಅಧಿಕಾರ ಹೊಂದಿರುವ ಗ್ರಾಮ ಪಂಚಾಯಿತಿಯಲ್ಲೂ ಕಾಂಗ್ರೆಸ್‌ ಪಕ್ಷದ ಸಂಘಟನೆಯಾಗುತ್ತಿಲ್ಲ ಎಂಬ ಆರೋಪಗಳಿವೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post