ಮಂಡಗದ್ದೆ ಮಾರ್ಗ ಮಧ್ಯೆ ವಿನಯ್ ಗುರೂಜಿ ಸ್ವಚ್ಚತೆ

ಬೆಳ್ಳಂಬೆಳಿಗ್ಗೆ ವಿನಯ್ ಗುರೂಜಿಯಿಂದ ಸ್ವಚ್ಛತೆ ಕಾರ್ಯ
ಬಿಯರ್ ಬಾಟಲ್…ಮದ್ಯದ ಖಾಲಿ ಪೌಚ್..

ಸಕ್ರೇಬೈಲಿನಿಂದ ಮಂಡಗದ್ದೆ ರಸ್ತೆಯಲ್ಲಿ 350 ವಿವಿಧ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ರಸ್ತೆ ಬದಿ ಬಿದ್ದಿದ್ದ ಖಾಲಿ ಬಿಯರ್ ಬಾಟಲ್, ವಾಟರ್ ಬಾಟಲ್, ಬಿಯರ್ ಟಿನ್, ಮದ್ಯದ ಖಾಲಿ ಪೌಚ್ ಎತ್ತುವ ಮೂಲಕ ಸ್ವಚ್ಛತೆ ಕಾರ್ಯಕ್ಕೆ ಮುಂದಾಗಿದ್ದರು.
ಬೆಳ್ಳಂ ಬೆಳಿಗ್ಗೆ ಸ್ವಯಂ ಸೇವಕರಾಗಿ ಗೌರಿಗದ್ದೆಯ ವಿನಯ್ ಗುರೂಜಿ, ಸರ್ಜಿ ಆಸ್ಪತ್ರೆಯ ಡಾ.ಧನಂಜಯ್, ಆರ್ ಟಿಓ ದೀಪಕ್ ಹೀಗೆ ಅನೇಕ ಗಣ್ಯ ವ್ಯಕ್ತಿಗಳೊಂದಿಗೆ ತೆರಳಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ. 6 ಕಿಮಿ ದೂರ ಕ್ರಮಿಸಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದ ಕಸಗಳನ್ನ ಸ್ವಚ್ಛ ಮಾಡಲಾಯಿತು.
ಗೌರಿಗದ್ದೆಯ ಮಹಾತ್ಮಗಾಂಧಿ ಸೇವಾ ಟ್ರಸ್ಟ್, ಸರ್ಜಿ ಫೌಂಡೇಷನ್, ಪರಿಯಾವರ್ಣ ಗತಿವಿಧಿ, ಪರೋಪಕಾರಂ, ಒಪನ್ ಮೈಂಡ್ಸ್, ಜೆಸಿಐ, ರೌಂಡ್ ಟೇಬಲ್ ಇಂಡಿಯಾ, ಆಶ್ರಯ ಬಡಾವಣೆ ಹಿತರಕ್ಷಣ ವೇದಿಕೆ ಸ್ವಚ್ಛ-ಭಾರತ ಶ್ರೇಷ್ಠ ಭಾರತ ಎಂಬ ಘೋಷಾ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ನಡೆದಿದೆ.
ಸಕ್ರೇಬೈಲಿನಿಂದ ಮಂಡಗದ್ದೆ ರಸ್ತೆಯಲ್ಲಿ ತೆಗೆದಷ್ಟೂ ಬಿಯರ್ ಬಾಟಲ್ ಗಳೇ, ಮದ್ಯದ ಖಾಲಿ ಪೌ ಚ್ ಗಳು, ಪ್ಲಾಸ್ಟಿಕ್ ಮತ್ತು ಟಿನ್ ಗಳೇ ಸಿಗುತ್ತದೆ. ಈ ರಸ್ತೆಯಲ್ಲಿ ದಟ್ಟವಾದ ಕಾಡುಗಳು ಇದ್ದರೂ ರಸ್ತೆಯ ಎಕ್ಕಲೆಗಳಲ್ಲಿ ಇಷ್ಟೊಂದು ಮದ್ಯದ ಮತ್ತು ವಾಟರ್ ಬಾಟಲ್ ಗಳೇ ಸಿಗುತ್ತೆ ಎಂದರೆ ಅರಣ್ಯ ಇಲಾಖೆ ಏನು ಮಾಡ್ತಾ ಇದೆ ಎಂಬ ಪ್ರಶ್ನೆಯೂ ಕಾಡುತ್ತದೆ.
ಇಲಾಖೆಯ ಬೀಟ್ ಗಳು, ವಾಚರ್ ಗಳು ಏನು ಮಾಡ್ತಾ ಇದ್ದಾರೆ ಎಂಬ ಪ್ರಶ್ನೆ ಉದ್ಬವಿಸುತ್ತದೆ. ಸಾರ್ವಜನಿಕರಿಗೆ ಅರಿವು ಮತ್ತು ಜವಬ್ದಾರಿ ಮೂಡಬೇಕಿದೆ ನಿಜ. ಆದರೆ ಅರಣ್ಯ ಇಲಾಖೆ ಕೇವಲ ಜಾಗೃತಿ ಬೋರ್ಡ್ ಗಳನ್ನ ಹಾಕಿದರೆ ಸಾಲದು, ದಂಡ ಹಾಕುವ ಮೂಲಕವೇ ಜಾಗೃತಿ ಆಗಬೇಕು. ಇದನ್ನ ಹೇಳುದ್ರೆ ಇಲಾಖೆ ಸಿಬ್ಬಂದಿ ಕೊರತೆಎನ್ನುತ್ತಾರೆ. ಒಟ್ಟಿನಲ್ಲಿ ಸಚ್ಛತೆ ಕೇವಲ ಬಾಯಲ್ಲಿ ಮಾತ್ರ ಎಂಬುದು ಸ್ಪಷ್ಟವಾಗುತ್ತದೆ.
ಬಿಬಿಎಂ ಗಣೇಶ್ ಸ್ವಚ್ಛ ಆಗುತ್ತಿರುವುದು ಖುಷಿ ನೀಡುತ್ತದೆ ಆದರೆ ಮದ್ಯಸೇವನೆ ಮಾಡಿ ಬಿಸಾಡಿರುವ ವಸ್ತುಗಳೇ ಹೆಚ್ಚು ಎಂದು ಹೇಳಿದರು. ಇದೇ ಶಿವಮೊಗ್ಗದಲ್ಲಿ ಪಾನೀಪುರಿ ನಡೆಸುವ ದೀಪು ಮಾತನಾಡಿ ಕಾಡಿನಲ್ಲಿ ಖಾಲಿಮದ್ಯ ಬಾಟಲ್ ಗಳು ಮತ್ತು ಪ್ಲಾಸ್ಟಿಕ್ ಗಳೇ ಹೆಚ್ಚು ಸಿಗುತ್ತಿದೆ. ಕಸ ಹಾಕುವ ಬಾಕ್ಸ್ ಗಳಿವೆ ಹಾಕಬೇಕು.
ಅಧಿಕಾರಿಗಳು ಬಾಟಲ್ ಗಳ ಮೇಲೆ  ಎಕ್ಸೈಸ್ ನಂಬರ್ ಗಳಿರುತ್ತದೆ ಅದನ್ನ ಟ್ರೇಸ್ ಮಾಡಿ ಅಂಗಡಿಯ ಮೇಲೆ ಮತ್ತು ಬಾಟಲು ಖರೀದಿಸಿದವರ ಮೇಲೆ ದಾಖಲಾದರೆ ಕಾಡಿನಲ್ಲಿ ಬಾಟಲ್ ಬಿಸಾಕುವುದನ್ನ ತಡೆಯಬಹುದು ಎಂದು ಸಲಹೆ ನೀಡಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post