ತೀರ್ಥಹಳ್ಳಿ ಹಾರೋಗೊಳಿಗೆ ಗ್ರಾಮಲೆಕ್ಕಾಧಿಕಾರಿ ರಮೇಶ್ (46) ಇಂದು ಮುಂಜಾನೆ ಶಿವಮೊಗ್ಗದ ಅವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ರಮೇಶ್ ಮಾಳೂರು ನಂದಗದ್ದೆ ವೃತ್ತದ ಲೆಕ್ಕಾಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಮೂಲತಃ ಬೆಂಗಳೂರು ಮೂಲದವರಾದ ಅವರು ಶಿವಮೊಗ್ಗದಲ್ಲಿ ವಾಸವಾಗಿದ್ದರು. ಮುಂಜಾನೆ ಸ್ನಾನಕ್ಕೆಂದು ತೆರಳಿದಾಗ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಇಬ್ಬರು ಪುತ್ರಿಯರು ಇದ್ದಾರೆ.