ಕನ್ನಡದ ನಡ ಮುರಿಯುವವರ ಬುಡ ಮುರಿಯುತ್ತೇವೆ

ಅಕ್ರಮ ಪಠ್ಯಕ್ರಮ ಸಕ್ರಮಕ್ಕೆ ಹುನ್ನಾರ
ಕುವೆಂಪು ಕನ್ನಡಕ್ಕೆ ಸೀಮಿತವಲ್ಲ - ಬಹುತ್ವ ಭಾರತ ಪ್ರತೀಕ
ಕುಪ್ಪಳ್ಳಿಯ ಕವಿಶೈಲದ ಕುವೆಂಪು ಸಮಾಧಿಗೆ ಗಣ್ಯರು ಪುಷ್ಪ ನಮನ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.

ಕುಪ್ಪಳಿಯ ಕವಿಶೈಲದಿಂದ ಹೊರಟ ಸಾಂಸ್ಕೃತಿಕ ಸೌಹಾರ್ದ ಜಾಗೃತಿ ಪಯಣ ಕಾಲ್ನಡಿಗೆಯಲ್ಲಿ ಭಾಗವಹಿಸಿದ್ದ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರ ಅನಧಿಕೃತವಾಗಿ ಪರಿಷ್ಕರಿಸಿದ ಪಠ್ಯ ಕ್ರಮವನ್ನು ಸಕ್ರಮಗೊಳಿಸುವ ಹುನ್ನಾರ ನಡೆಸಲಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ಸಮಸ್ಥಿತಿಯಲ್ಲಿ ಮುನ್ನಡೆಸುವ, ಪ್ರಜಾಪ್ರಭುತ್ವ ಉಳಿಸುವ ಶಿಕ್ಷಣ ಭಾರತಕ್ಕೆ ಅಗತ್ಯವಾಗಿದೆ. ಶಿಕ್ಷಣದ ಮೂಲಕ ವಿಕಾರಗಳನ್ನು ಸೃಷ್ಟಿಸುವ ಅದ್ವಾನಕ್ಕೆ ಸರ್ಕಾರ ಮುಂದಾದಂತಿದೆ. ಪಕ್ಷಾತೀತವಾಗಿ ಹೊರಟ ಪಯಣ ಪ್ರಜ್ಞಾಶಕ್ತಿಯ ಸಂಕೇತ. ಆತ್ಮ ಸಾಕ್ಷಿ ಇದ್ದರೆ ಹಿಂದಿನ ಪಠ್ಯ ಪುಸ್ತಕವನ್ನು ಮಕ್ಕಳಿಗೆ ನೀಡಬೇಕು ಎಂದು ಹೇಳಿದರು.

ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಕನ್ನಡ ನಾಡೇ ಒಂದು ಗೀತೆ, ಧ್ವಜ. ಕನ್ನಡಕ್ಕೆ ಕುತ್ತು ಬಂದ ಮೇಲೆ ನಾವು ಇದ್ದು ಪ್ರಯೋಜನವೇನು. ಕನ್ನಡ ನಡ ಮುರಿಯುವವರ ಬುಡ ಮುರಿಯುತ್ತೇವೆ. ಗುರುಮನೆಯಿಂದ ಹೊರಟ ಪಯಣ ಕುವೆಂಪು ಕಹಳೆಯಾಗಿ ಮೊಳಗಲಿದೆ. ಗೋಕಾಕ್‌ ಚಳವಳಿಯನ್ನು ಮತ್ತೊಮ್ಮೆ ನೆನಪಿಸುತ್ತೇವೆ ಎಂದರು.

ಮಾಜಿ ಶಿಕ್ಷಣ ಸಚಿವ, ಪಾದಯಾತ್ರೆಯ ರೂವಾರು ಕಿಮ್ಮನೆ ರತ್ನಾಕರ ಮಾತನಾಡಿ, ರಾಜ್ಯದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕವನ್ನು ಜನವರಿ ಸಂದರ್ಭ ಪೂರೈಸಿದ ಇತಿಹಾಸ ಇದೆ. ತಪ್ಪು ತಿಳಿಯುವ ಮುನ್ನ ಇತಿಹಾಸ ಪ್ರಜ್ಞೆಯನ್ನು ಮೂಡಿಸುವುದು ಶಿಕ್ಷಣದ ಆಧ್ಯತೆಯಾಗಬೇಕು. ಎಲ್ಲವನ್ನು ಸರಿಮಾಡಿಕೊಂಡು ಹೋಗುವಂತಹ ಮನೋಭಾವ ಬೆಳೆದಾಗ ಮಾತ್ರ ಹೃದಯ ವೈಶಾಲ್ಯತೆ ಬೆಳೆಯುತ್ತದೆ ಎಂದರು ತಿಳಿಸಿದರು.

ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ, ಡಿಎಸ್‌ಎಸ್‌ ಜಿಲ್ಲಾಧ್ಯಕ್ಷ ಗುರುಮೂರ್ತಿ, ರೈತ ಸಂಘದ ರಾಜ್ಯಧ್ಯಕ್ಷ ಬಸವರಾಜಪ್ಪ, ಮುಖಂಡ ಕೆ.ಟಿ. ಗಂಗಾಧರ್, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಸಂಸ್ಕೃತಿ ಚಿಂತಕ ಸುಧೀರ್‌ ಕುಮಾರ್‌ ಮುರೋಳ್ಳಿ, ರಾಜೇಂದ್ರ ಚೆನ್ನಿ, ಹಿರಿಯ ಪತ್ರಕರ್ತ ದಿನೇಶ್‌ ಆಮಿನ್‌ ಮಟ್ಟು, ಚಿಂತಕರಾದ ಕೆ.ಪಿ. ಶ್ರೀಪಾಲ್‌, ನೆಂಪೆ ದೇವರಾಜ್‌, ಕಡಿದಾಳು ದಯಾನಂದ್ ಮುಂತಾದವರು ಕುಪ್ಪಳ್ಳಿಯಿಂದ ಪಾದಯಾತ್ರೆಗೆ ಸೇರಿಕೊಂಡಿದ್ದರು.



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post