ಅಧಿಕಾರದ ಹಂಗಿಗೆ ಬಿದ್ದರೇ...?
ಮಹಾನ್ ವ್ಯಕ್ತಿಗಳ ಚಾರಿತ್ರ್ಯಹರಣಕ್ಕೆ ವ್ಯವಸ್ಥಿತ ಸಂಚು
ಚಕ್ರತೀರ್ಥನಿಗೆ ಮಂಡಿಯೂರಿದ ಸರ್ಕಾರ- ಆರ್.ಎಂ. ಮಂಜುನಾಥ ಗೌಡ
ಕಿಮ್ಮನೆ - ಗೌಡರ ಜಿದ್ದಾಜಿದ್ದಿ ಮಾಫಿ...!
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಆರ್ ಎಂಎಂ ಕಾಂಗ್ರೆಸ್ ಪಕ್ಷದಲ್ಲಿದ್ದರು ಇಬ್ಬರ ನಡುವೆ ಅದೋನೊ ಮುಸುಕಿನ ಗುದ್ದಾಟ ಇದೆ. ಇವರಿಬ್ಬರು ಒಂದಾಗಲ್ವೇನೋ ಎಂಬಷ್ಟು ದೂರಾನೇ ಇರುತ್ತಾರೆ. ಯಾವ ಸಂದರ್ಭದಲ್ಲಿ ಒಟ್ಟಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅಷ್ಟಕ್ಕೂ ಬುಧವಾರ ನಡೆಯುವ ಕಾಲ್ನಡಿಗೆ, ಪಾದಾಯಾತ್ರೆ, ನಡಿಗೆ ನನ್ನ ಬೆಂಬಲ ಇದೆ ಎಂದು ಆರ್ ಎಂಎಂ ಸೂಚಿಸಿದ್ದಾರೆ. ಇಬ್ಬರ ನಡುವೆ ಒಣ ಜಗಳ, ಕಾದಾಟ, ಗುದ್ದಾಟ ಬಹಳನೇ ಇದೆ. ಈ ಮಾಫಿ ಸೂತ್ರ ಮಾತ್ರ ಬಲ್ಲವರಿಲ್ಲ....
![]() |
ಮೌಡ್ಯ, ಡಂಬಚಾರ, ಮೂಡನಂಬಿಕೆ, ಮುಂತಾದ ಧಾರ್ಮಿಕ ಮತ್ತು ಮಾನಸಿಕ ನಂಬಿಕೆ ಮುಂದಿಟ್ಟು ಸಮಾಜ ಒಡೆಯುವ ಕೆಲಸಕ್ಕೆ ಸರ್ಕಾರವೇ ಮುಂದಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಸಮರ್ಥನೆಯಲ್ಲಿ ಮಾಡಿಕೊಳ್ಳುತ್ತಿದೆ. ಅಭಿವೃದ್ದಿಯ ವಿಷಯದಲ್ಲಿ ಶೂನ್ಯ ಸಂಪಾದನೆ ಹಿನ್ನಲೆಯಲ್ಲಿ ಮಹಾನ್ ವ್ಯಕ್ತಿಗಳ ಚಾರಿತ್ರ್ಯಹರಣ ಮಾಡಲಾಗುತ್ತಿದೆ. ಒಂದು ಕಾಲದಲ್ಲಿ ಸಮಾಜವಾದ ನೆಚ್ಚಿಕೊಂಡಿದ್ದ ಹಾಲಿ ಸಿಎಂ ಬಸವರಾಜ ಬೊಮ್ಮಯಿ ಸ್ವಂತಿಕೆ ಕಳೆದುಕೊಂಡಿದ್ದಾರೆ. ತನ್ನ ತನವನ್ನು ಕಳೆದುಕೊಂಡು ಅಧಿಕಾರ ನೀಡಿದವರ ಹಂಗಿಗೆ ಬಿದ್ದಿದ್ದಾರೆ ಎಂದು ಚಾಟಿ ಬೀಸಿದರು.
ರಾಷ್ಟ್ರಕವಿ ಕುವೆಂಪು ಮತ್ತು ನಾಡಗೀತೆಗೆ ರೋಹಿತ್ ಚಕ್ರತೀರ್ಥ ಅವಮಾನಿಸಿದ್ದಾರೆ. ಆತನ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ನಾರಾಯಣ ಗುರು, ಬಸವಣ್ಣ, ಅಂಬೇಡ್ಕರ್, ಶಂಕರಾಚಾರ್ಯ, ಬುದ್ದ, ಮಹಾವೀರ ಮುಂತಾದ ಚೇತನಗಳ ಜ್ಞಾನ ಮತ್ತು ಕೊಡುಗೆಯ ಅರಿವಿಲ್ಲದವರು ಪಠ್ಯ ಪರಿಷ್ಕರಣೆ ಮಾಡಿದ್ದಾರೆ. ರಾಜಕೀಯದ ಚಟದಿಂದ ಬಾಲ್ಯದಿಂದಲೇ ಮಕ್ಕಳು ಸುಳ್ಳು ಕಲಿಯುವಂತಾಗಿದೆ ಹೀಗಾಗಿ ಹಿಂದಿನ ಪಠ್ಯ ಪುಸ್ತಕವನ್ನೇ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಯಡವಟ್ಟುಗಳನ್ನು ಖಂಡಿಸಿ ಜೂನ್ 15ರಂದು ಕುಪ್ಪಳ್ಳಿಯಿಂದ ತೀರ್ಥಹಳ್ಳಿಗೆ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ರಮೇಶ್ ಕುಮಾರ್, ವೈಎಸ್ ವಿ ದತ್ತ ಸೇರಿದಂತೆ ರಾಜ್ಯ ನಾಯಕರು, ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಪಿ.ಓ. ಶಿವಕುಮಾರ್,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಎಲ್. ಸುಂದರೇಶ್, ಶಚಿಂದ್ರ ಹೆಗ್ಡೆ, ಬಾಳೇಹಳ್ಳಿ ಪ್ರಭಾಕರ್, ರಾಮಚಂದ್ರ, ವೆಂಕಟೇಶ್ ಹೆಗ್ಡೆ, ವಿಧ್ಯಾಧರ್, ಕುರುವಳ್ಳಿ ನಾಗರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಸದಸ್ಯರಾದ ಸುಶೀಲ ಶೆಟ್ಟಿ, ರೆಹಮತುಲ್ಲಾ ಅಸಾದಿ, ಮಂಜುಳ ಇದ್ದರು.
