ಕೆರೆ ಕಾಮಗಾರಿ ವೀಕ್ಷಿಸಿದ ಗೃಹಸಚಿವ
2 ಕೋಟಿ ವೆಚ್ಚದಲ್ಲಿ ಅಭಿವೃದ್ದಿಗೊಂಡ ಕೋಣಂದೂರಿನ ಕೆರೆ ಕಾಮಗಾರಿಯನ್ನು ಗೃಹಸಚಿವ ಆರಗ ಜ್ಞಾನೇಂದ್ರ ವೀಕ್ಷಿಸಿದರು. ಅಗ್ರಹಾರ ಹೋಬಳಿ ವ್ಯಾಪ್ತಿಯ ಬೃಹತ್ ಕೆರೆ ಇದಾಗಿದ್ದು ಕೋಣಂದೂರಿಗೆ ನೀರು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 2 ಕೋಟಿ ವೆಚ್ಚದಲ್ಲಿ ಸ್ವಚ್ಚತೆ, ಹೂಳು ತೆಗೆಯುವುದು, ತಡೆಗೋಡೆ ಮುಂತಾದ ಅಭಿವೃದ್ಧಿ ಕಾಮಗಾರಿ ನಡೆದಿದೆ. ಸಚಿವರು ಕೆರೆಗೆ ವಿಶೇಷ ಅನುದಾನ ನೀಡಿದ್ದರು.