ಪ್ರಯಾಣಿಕರ ಜೀವಕ್ಕೆ ಯಾವುದೇ ರೀತಿಯ ಭದ್ರತೆ ಇರುವುದಿಲ್ಲ
ಸರ್ಕಾರಕ್ಕೂ ತೆರಿಗೆ ಮೋಸ - ಗಣೇಶ್ ಪ್ರಸಾದ್ ದೇವಾಡಿಗ ಎಚ್ಚರಿಕೆ
ವೈಟ್ ಬೋರ್ಡ್ ಕಾರುಗಳು ಸ್ಪಷ್ಟವಾಗಿ ಖಾಸಗಿ ಉಪಯೋಗಿ ವಾಹನಗಳಾಗಿದ್ದು ಇವುಗಳನ್ನು ಬಾಡಿಗೆ ಕಾರುಗಳನ್ನಾಗಿ ಉಪಯೋಗಿಸುವುದು ಶಿಕ್ಷಾರ್ಹ ಅಪರಾಧ. ಅಲ್ಲದೇ ವೈಟ್ ಬೋರ್ಡ್ ವಾಹನಗಳನ್ನು ಬಾಡಿಕಗೆಗೆ ಪಡೆದು ಪ್ರಯಾಣಿಸುವಾಗ ಅಪಘಾತವಾದಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯ ಜೀವ ವಿಮೆಯಾಗಲಿ ಸರ್ಕಾರದ ನೆರವಾಗಲಿ ದೊರೆಯುವುದಿಲ್ಲ.
ಇಂತಹ ಎಲ್ಲಾ ಸಂದರ್ಭಗಳಲ್ಲಿ ಕಾರು ಮಾಲೀಕನೆ ಎಲ್ಲದಕ್ಕೂ ಜವಾಬ್ದಾರಿಯಾಗಿರುತ್ತಾನೆ. ಹಾಗಾಗಿ
ಇತ್ತೀಚೆಗೆ ಪ್ರದೇಶಿಕ ಸಾರಿಗೆ ಆಯುಕ್ತ ವಸಂತ್ ಚೌಹಾಣ್ ವೈಟ್ ಬೋರ್ಡ್ ವಾಹನ ಉಪಯೋಗಿಸಿಕೊಂಡು
ಬಾಡಿಕೆ ಮಾಡಿಕೊಳ್ಳುತ್ತಿರುವ ಎಲ್ಲಾ ಮಾಲೀಕರು ಚಾಲಕರಿಗೆ ಒಂದು ವೇಳೆ ಪ್ರಯಾಣಿಸುವಾಗ
ಸಿಕ್ಕಿಬಿದ್ದರೆ ವಾಹನವನ್ನೇ ಮುಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಸುರಕ್ಷತೆ ಹಾಗೂ ಆಕಸ್ಮಿಕ ಸಂದರ್ಭಗಳಲ್ಲಿ ನೆರವಿನ ದೃಷ್ಟಿಯಿಂದಲೂ ಎಲ್ಲೋ ಬೋರ್ಡ್
ಟ್ಯಾಕ್ಸಿಗಳಲ್ಲೇ ಪ್ರಯಾಣಿಸುವುದು ಉತ್ತಮ ಎಂದು ಸಾರ್ವಜಹನಿಕರಿಗೆ ವಿನಂತಿಸಿದ್ದಾರೆ. ಈ ಕುರಿತು
ತೀರ್ಥಹಳ್ಳಿ ಎಲ್ಲೋ ಬೋರ್ಡ್ ಟ್ಯಾಕ್ಸಿ ವಾಹನಗಳ ಪರವಾಗಿ ಪ್ರತಿಕ್ರಿಯಿಸಿರುವ ಎಲ್ಲೋ ಬೋರ್ಡ್
ಟ್ಯಾಕ್ಸಿ ಮಾಲೀಕ, ಚಾಲಕ ಗಣೇಶ್ ಪ್ರಸಾದ್ ಎಲ್ಲೋ ಬೋರ್ಡ್ ಟ್ಯಾಕ್ಸಿ ವಾಹನಗಳ ಮಾಲೀಕರು
ಸರ್ಕಾರಕ್ಕೆ ಎಲ್ಲಾ ರೀತಿಯ ತೆರಿಗೆಯನ್ನು ಅಧಿಕೃತವಾಗಿ ಕಟ್ಟಿರುತ್ತಾರಲ್ಲದೇ ಸುರಕ್ಷತೆ ಹಾಗೂ
ನಂಬಿಕೆಯ ದೃಷ್ಟಿಯಿಂದಲೂ ಪ್ರಯಾಣಿಕ ಸ್ನೇಹಿಯಾಗಿರುತ್ತಾರೆ. ವೈಟ್ ಬೋರ್ಡ್ ವಾಹನಗಳಲ್ಲಿ
ಪ್ರಯಾಣಿಕನನ್ನು ಸಾಗಿಸುವುದೇ ಅಪರಾಧ. ಅಲ್ಲದೇ ಸುರಕ್ಷತಾ ದೃಷ್ಟಿಯಿಂದಲೂ ಪ್ರಯಾಣಿಕರಿಗೂ ಇದು
ಯಾವ ಕಾರಣಕ್ಕೂ ಒಳ್ಳೆಯದಲ್ಲ. ಹಾಗಾಗಿ ವೈಟ್ ಬೋರ್ಡ್ ಕಾರು ಮಾಲೀಕರು ಟ್ಯಾಕ್ಸಿ ರೀತಿ ಬಾಡಿಗೆಗೆ
ಬಿಡುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಅಲ್ಲದೇ ಪ್ರಯಾಣಿಕರಿಗೂ ಕೂಡ ಇದು ಯಾವುದೇ ರೀತಿಯಲ್ಲಿ
ಸುರಕ್ಷಿತವಲ್ಲ ಎಂದು ವಿನಂತಿಸುವುದಾಗಿ ಎಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರು ಹಾಗೂ ಮಾಲಕರ
ಪರವಾಗಿ ಹೇಳಿದ್ದಾರೆ.

.jpg)