‌ಅಮೇರಿಕಾದಿಂದ ಕಿಮ್ಮನೆ ಬಂದ್ರು…

ಕ್ಷೇತ್ರದಲ್ಲಿ ಏರಿದ ರಂಗು…
ರೈತ ಮತ್ತು ಕೃಷಿ ಸಮಿತಿ ನಿರ್ದೇಶಕರಾಗಿ ಕಿಮ್ಮನೆ


ಶಿವಮೊಗ್ಗದ ಪಾದಯಾತ್ರೆ ಗಲಾಟೆ ಗೊಂದಲದ ನಡುವೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಯಾವುದೇ ಪ್ರಶ್ನೆಗಳಿಗೆ ಸಿಗದೆ ಅಮೇರಿಕಾ ತೆರಳಿದ್ದರು. ಪತ್ನಿ ಆನಾರೋಗ್ಯದ ಹಿನ್ನಲೆಯಲ್ಲಿ ಸುಮಾರು 20 ದಿನಗಳ ಪ್ರವಾಸ ಮುಗಿಸಿ ಭಾನುವಾರ ತೀರ್ಥಹಳ್ಳಿಗೆ ಬಂದಿದ್ದಾರೆ. ಸೋಮವಾರ ಬಹಳ ಲವಲವಿಕೆಯಿಂದ ನೆಲದ ಧ್ವನಿ ಕಚೇರಿಗೆ ಆಗಮಿಸಿ 1 ಗಂಟೆಗೂ ಹೆಚ್ಚು ಕಾಲ ರಾಜ್ಯದ ಪಠ್ಯ ಪರಿಷ್ಕರಣೆ ಸಮಿತಿಯ ವಿವಾದವನ್ನು ಖಂಡಿಸಿದರು.

ಮಾಜಿ ಶಿಕ್ಷಣ ಸಚಿವರಾಗಿರುವ ಕಿಮ್ಮನೆ ದೇಶದ ಶಿಕ್ಷಣ ವ್ಯವಸ್ಥೆ ಹಳಿ ತಪ್ಪಿದೆ. ಬಡವ ಶ್ರೀಮಂತನಿಗೂ ಒಂದೇ ಶಿಕ್ಷಣ ಇರಬೇಕು. 1ನೇ ತರಗತಿಯಿಂದ ಪಿಯುಸಿ ಹಂತದ ವರೆಗೆ ಸರ್ಕಾರಿ ಶಿಕ್ಷಣ ನೀಡಬೇಕು. ಶಿಕ್ಷಣದೊಳಗಿನ ಅಸಮಾನತೆ ತೊಲಗಿಸುವ ಪ್ರಯತ್ನದಲ್ಲಿ ಭಾರತದ ಶಿಕ್ಷಣ ಸೋಲುತ್ತಿದೆ ಎಂದರು.

ಕಿಮ್ಮನೆ ರತ್ನಾಕರ್‌ ರಾಜ್ಯದ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಂಗಳೂರು ತೆರಳಲಿದ್ದಾರೆ. ಅಲ್ಲಿ ವಿವಾದ ಹಾಗೂ ಪಠ್ಯ ಪರಿಷ್ಕರಣ ಸಮಿತಿ ಮುಂತಾದ ವಿಚಾರಗಳ ಬಗ್ಗೆ ಸುದ್ದಿಗೋಷ್ಟಿ ನಡೆಸುವ ಸಾಧ್ಯತೆ ಇದೆ.

 ಕೆಪಿಸಿಸಿ ರೈತ ಮತ್ತು ಕೃಷಿ ಸಮಿತಿ ನಿರ್ದೇಶಕರಾಗಿ ಕಿಮ್ಮನೆ

ಅಮೇರಿಕಾದಿಂದ ಹಿಂದಿರುಗುತ್ತಿದ್ದಂತೆ ಕಿಮ್ಮನೆ ರತ್ನಾಕರ್‌ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ ನಿರ್ದೇಶಕರಾಗಿ ಸ್ಥಾನ ಲಭಿಸಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post