ಇ-ಶ್ರಮ್ ನೋಂದಾಣಿಯಿಂದ ಮಾಹಿತಿ ಬಹಿರಂಗ

ತಿಂಗಳಿಗೆ 10 ಸಾವಿರಕ್ಕಿಂತ ಕಡಿಮೆ ಆದಾಯ

ದೇಶದಲ್ಲಿ ಅಸಂಘಟಿತ ಕಾರ್ಮಿಕರ ಆದಾಯ ಕುಸಿತ

ಶೇಕಡಾ 74ರಷ್ಟು ದಲಿತ, ಹಿಂದುಳಿದ ಕಾರ್ಮಿಕರು

ಕೋವಿಡ್ ನಂತರ ತೀವ್ರ ಸಂಕಷ್ಟ
ಅಸಂಘಟಿತ ವಲಯದ 27.69 ಕೋಟಿ ಕಾರ್ಮಿಕರು ಕೇಂದ್ರ ಸರ್ಕಾರದ ಇ–ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿತರಾಗಿದ್ದು, ಇವರ ಪೈಕಿ ಶೇಕಡ 94.11ರಷ್ಟು ಮಂದಿಯ ತಿಂಗಳ ಆದಾಯ 10 ಸಾವಿರಕ್ಕಿಂತ ಕಡಿಮೆ. ಅಲ್ಲದೆ, ಇಷ್ಟು ಮಂದಿಯಲ್ಲಿ ಶೇ 74ರಷ್ಟು ಮಂದಿ ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ.

2021ರ ನವೆಂಬರ್‌ ಮಧ್ಯಭಾಗದಲ್ಲಿ ಇ–ಶ್ರಮ್ ಪೋರ್ಟಲ್‌ನಲ್ಲಿ ಅಸಂಘಟಿತ ವಲಯದ 8 ಕೋಟಿ ಕಾರ್ಮಿಕರು ನೋಂದಾಯಿತರಾಗಿದ್ದರು. ಆಗ ತಿಂಗಳಿಗೆ ₹ 10 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವವರ ಪ್ರಮಾಣವು ಶೇ 92.37ರಷ್ಟು ಆಗಿತ್ತು.
ದೇಶದ ಅಸಂಘಟಿತ ವಲಯದಲ್ಲಿ ಒಟ್ಟು 38 ಕೋಟಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ಅಂದಾಜು ಇದೆ. ಇಷ್ಟೂ ಜನ ಇ–ಶ್ರಮ್ ಪೋರ್ಟಲ್‌ ನಲ್ಲಿ ನೋಂದಾಯಿತರಾದ ನಂತರ ಸಮಾಜದಲ್ಲಿ ಇರುವ ತೀವ್ರ ಅಸಮಾನತೆಯು ಸ್ಪಷ್ಟವಾಗಿ ಗೊತ್ತಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಅಸಂಘಟಿತ ವಲಯದ ಕಾರ್ಮಿಕರ ಸಮಗ್ರ ದತ್ತಾಂಶವನ್ನು ರೂಪಿಸುವ ಗುರಿಯನ್ನು ಇ–ಶ್ರಮ್ ಪೋರ್ಟಲ್ ಹೊಂದಿದೆ. 

ಶೇ 4.36ರಷ್ಟು ಮಂದಿಯ ತಿಂಗಳ ಆದಾಯವು 10 ಸಾವಿರದಿಂದ 15 ಸಾವಿರದ ನಡುವೆ ಇದೆ. ಪೋರ್ಟಲ್‌ನಲ್ಲಿ ನೋಂದಣಿ ಆಗಿರುವವರಲ್ಲಿ ಶೇ 45.32ರಷ್ಟು ಮಂದಿ ಒಬಿಸಿ, ಶೇ 20.95ರಷ್ಟು ಮಂದಿ ಎಸ್‌ಸಿ ಹಾಗೂ ಶೇ 8.17ರಷ್ಟು ಮಂದಿ ಎಸ್‌ಟಿ ಸಮುದಾಯಗಳಿಗೆ ಸೇರಿದವರು. ಸಾಮಾನ್ಯ ವರ್ಗಕ್ಕೆ ಸೇರಿದವರ ಪ್ರಮಾಣ ಶೇ 25.56ರಷ್ಟು, ಮಹಿಳೆಯರ ಪ್ರಮಾಣ ಶೇ 52.81, ಪುರುಷರ ಪ್ರಮಾಣ ಶೇ 47.19ರಷ್ಟು ಇದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post