ತಾಲ್ಲೂಕು ಕಚೇರಿ ಪ್ರವೇಶಿಸಿದ ಕುದುರೆ, ಕತ್ತೆಗಳು... ನಮ್ಮ ಗತಿ ಏನು ಸ್ವಾಮಿ...

ತಾಲ್ಲೂಕು ಕಚೇರಿಗೆ ಕುದುರೆಗಳ‌ ಭೇಟಿ

ಸಿಬ್ಬಂದಿಗಳ ಕಾರ್ಯಕ್ಷಮತೆಗೆ ನೈಜ ಸಾಕ್ಷಿ

ಸಾರ್ವಜನಿಕರ ಕೆಲಸಕ್ಕೂ ಇದೆ ರೀತಿಯ ಬೆಲೆ

ಯಾರೂ ಓಡಿಸುವವರಿಲ್ಲ...!

ಕುದುರೆ, ಕತ್ತೆಗಳಂತೆ ನಾವೂ-ನೀವೂ...!

ಇದೇನ್ ಗತಿ...!
ತೀರ್ಥಹಳ್ಳಿಯ ತಾಲ್ಲೂಕು ಆಡಳಿತ ಕೆಲವೊಮ್ಮೆ ಮೈಚಳಿ ಬಿಟ್ಟು ಕೆಲಸ ಮಾಡಿದರೆ ಕೆಲವು ಸರತಿ ಹೊದ್ದು ಮಲಗಿರುತ್ತದೆ. ಶಂಕರಪ್ಪ ಕುಟುಂಬಕ್ಕೆ ಪರಿಹಾರ ಒದಗಿಸುವಲ್ಲಿ ತ್ವರಿತ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರಿಂದ ಪ್ರಶಂಸೆ ಪಡೆದಿದೆ. ಇನ್ನೊಂದು ಕಡೆಯಲ್ಲಿ ಕಚೇರಿಗೆ ಕತ್ತೆ, ಕುದುರೆ ಎಂಟ್ರಿ ಕೊಟ್ರು ಓಡಿಸಲು ಆಗದ ಮಹಾನುಭಾವರಿಂದ ತುಂಬಿದೆ ಎಂಬುದನ್ನು ಸಾಭೀತಾಗಿದೆ.
ಬಹುಶಃ ಮೂಕ ಪ್ರಾಣಿಗಳು ಮಧ್ಯವರ್ತಿಗಳನ್ನು ಅರಸಿ ಬಂದಿವೆ. ಹಾಗಾಗಿ ನೇರವಾಗಿ ಒಳಗೆ ಎಂಟ್ರಿ ಪಡೆದಿವೆ. ಇವುಗಳನ್ನೂ ಓಡಿಸಲಾಗದ ಹೀನಾಯ ಸ್ಥಿತಿಗೆ ತಾಲ್ಲೂಕು ಕಚೇರಿ ಸಿಬ್ಬಂದಿ ತಲುಪಿದ್ದಾರೆ. ಎಷ್ಟೋ ಬಾರಿ ಕೆಲಸಗಳಿಗಾಗಿ ಪೈಲ್ ಹಿಡಿದು ಆಗಮಿಸುವ ಸಾರ್ವಜನಿಕರ ಕೆಲಸ ಕೂಡ ಇದೇ ರೀತಿ ಯಾರು ಮೂಸುವವರು ಇಲ್ಲ. ಹೇಳುವವರಿಂದ, ಕೇಳುವವರಿಂದ, ಇಲ್ಲವೇ ಕೈಬಿಸಿಯಿಂದ ಮಾತ್ರ ಕೆಲಸ ಮಾಡಿಕೊಳ್ಳಬೇಕಾಗಿದೆ...!
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post