ನೆಲದ ಧ್ವನಿ ಎಫೆಕ್ಟ್: ನೆಸ್ಟ್ ಹೋಂ ಸ್ಟೇ ಮೇಲೆ ಪೊಲೀಸರ ದಾಳಿ

ನೆಸ್ಟ್ ಹೋಂ ಸ್ಟೇ ಮೇಲೆ ಪೊಲೀಸರ ದಾಳಿ

ಕುರುವಳ್ಳಿ ಬಂಡೆ ಹರಾಜಿಗೆ ರಿಂಗ್ ಟೆಂಡರ್

ಹಿರೇಸರಕ್ಕೆ ಮುತ್ತಿಗೆ ಹಾಕಿದ ಪೊಲೀಸರು

ಪರಾರಿಯಾದ ಸಿಂಡಿಕೇಟ್ ಸದಸ್ಯರು

"ನೆಲದ ಧ್ವನಿ" ಸುದ್ದಿಗೆ ಎಚ್ಚೆತ್ತ ಇಲಾಖೆ
ಮೇ 25 ರಂದು ಕುರುವಳ್ಳಿ ಬಂಡೆ ಹರಾಜು ನಡೆಯಲಿದೆ. ಇದರ ಸಂಬಂಧ ತೀರ್ಥಹಳ್ಳಿ ತಾಲ್ಲೂಕಿನ ಹಿರೇಸರ ನೆಸ್ಟ್ ಹೋಂ ಸ್ಟೇನಲ್ಲಿ ಮುಂಚಿತವಾಗಿ ರಿಂಗ್ ಟೆಂಡರ್ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟಕ್ಕೆ ಮುಂದಾಗಿದ್ದರು. ಕಾನೂನು ಬಾಹಿರ ಮಾರ್ಗದ ಮೂಲಕ ಬಿಡ್ಡಿನಲ್ಲಿ ಪಾಲ್ಗೊಳ್ಳಲು 3 ಲಕ್ಷದ ಟೆಂಡರ್ ಮೊತ್ತ ಕಟ್ಟಿ ರಿಂಗ್ ಟೆಂಡರ್ ನಲ್ಲಿ ಭಾಗವಹಿಸಬೇಕಿತ್ತು. ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಣೆ ನಡೆಯುತ್ತಿತ್ತು ಎಂಬ ಮಾಹಿತಿಯನ್ನು ನೆಲದ ಧ್ವನಿ ಬಿತ್ತರಿಸುತ್ತಿದ್ದಂತೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ.
3 ರಿಂದ 5 ಕೋಟಿ ವ್ಯವಹಾರ ನಡೆಸಲು ಸುಮಾರು 45 ಜನ ಸೇರಿಕೊಂಡಿದ್ದರು. ಪೊಲೀಸರ ದಾಳಿ ಸ್ವಲ್ಪ ತಡವಾಗಿದ್ದರಿಂದ ಬಹುತೇಕರು ಅಲ್ಲಿಂದ ಕಾಲ್ಕಿತ್ತಿದ್ದರು. ದಾಳಿಯ ವೇಳೆ ಸಿಕ್ಕ ಬೆರಳೆಣಿಕೆಯ ಮಂದಿಯಿಂದ ಮಹತ್ವದ ಮಾಹಿತಿ ಕಲೆಹಾಕಲು ಪೊಲೀಸರು ಯಶಸ್ವಿಯಾಗಿದ್ದಾರೆ.
ರಿಂಗ್ ಟೆಂಡರ್ ಅಂದರೆ ಏನು?
ಇದು ಸರ್ಕಾರಕ್ಕೆ ಮಾಡುವ ಮಹಾಮೋಸ. ಕುರುವಳ್ಳಿ ಬಂಡೆ ಇಷ್ಟು ವರ್ಷಗಳ ಕಾಲ ಕೇವಲ ಗುತ್ತಿಗೆ ಲೈಸನ್ಸ್ ಮೇಲೆ ನಡೆಯುತ್ತಿತ್ತು. 2017 ರ ಕಾಯಿದೆ ಹಿನ್ನಲೆಯಲ್ಲಿ ಈ ವರ್ಷದಿಂದ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಅಕ್ರಮ ವಹಿವಾಟಿನ ಕಾರಣ ಚಿನ್ನದ ಗಣಿ ಎಂದೇ ಪ್ರಸಿದ್ಧಿ ಪಡೆದಿರುವ ಕುರುವಳ್ಳಿ ಬಂಡೆ ಈಗ ಮತ್ತೊಂದು ಅಪವಾದಕ್ಕೆ ಗುರಿಯಾಗಿದೆ. ಸರ್ಕಾರಕ್ಕೆ ಹೆಚ್ಚು ಆದಾಯ ಸಂದಾಯವಾಗಬಾರದು ಎಂಬ ಉದ್ದೇಶದಲ್ಲಿ ಟೆಂಡರ್ ಅವಧಿ ಮುನ್ನ ಬಿಡ್ಡುದಾರರು ಒಂದೆಡೆ ಸೇರಿ ಒಳ ಒಪ್ಪಂದ ಮೂಲಕ ಕೋಟ್ಯಾಂತರ ರೂಪಾಯಿ ಹಣ ಉಳಿಸಿಕೊಂಡು ಕೆಲವೇ ಜನರಿಗೆ ಟೆಂಡರ್ ಸಲ್ಲಿಸುವ ಅವಕಾಶಕೊಟ್ಟು ಉಳಿದವರು ಟೆಂಡರ್ ನಿಂದ ಹಿಂದೆ ಸರಿಯುವರು. ಈ ಬಾಬ್ತು ಉಳಿದ ಕೋಟ್ಯಾಂತರ ರೂಪಾಯಿ ಹಣವನ್ನು ಟೆಂಡರ್ ನಿಂದ ಹಿಂದೆ ಸರಿದವರು ಹಂಚಿಕೊಳ್ಳುವುದು ರಿಂಗ್ ಟೆಂಡರ್ ನ ಸೂತ್ರ‌.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post